– ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಹುಟ್ಟಿದ ಸಂಭ್ರಮ
– ಸಾಗರದಲ್ಲಿ ಪರೀಕ್ಷೆ ಮುಂದೂಡುವಂತೆ ಕೋರಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ
– ಹೊಸನಗರದಲ್ಲಿ ಮರಳು ಮಾಫಿಯಾಕ್ಕೆ ಬ್ರೇಕ್?
– ತೀರ್ಥಹಳ್ಳಿಯಲ್ಲಿ ಜಮೀನು ಗಲಾಟೆ: ಹಲ್ಲೆ
NAMMUR EXPRESS NEWS
ಶಿಕಾರಿಪುರ: ಸಂಸದ ಬಿವೈ ರಾಘವೇಂದ್ರ ಅವರ 50ನೇ ವರ್ಷದ ಜನ್ಮದಿನವನ್ನು ತವರು ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದ್ದರು. ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕರ್ತರು ವಿಷೇಶ ಪೂಜೆ ಸಲ್ಲಿಸಿದರು ನಂತರ ವಿಕಲಚೇತನರಿಗೆ ವಾಹನ ವಿತರಣೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಿಂದ ಕಾರ್ಯಕರ್ತರು ಮುಖಂಡರು ಆಗಮಿಸಿ ಬಿವೈ ರಾಘವೇಂದ್ರ ಅವರಿಗೆ ಜನ್ಮದಿನ ಶುಭಾಶಯ ತಿಳಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಾಸಕ ಬಿವೈ ವಿಜಯೇಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಇದ್ದರು.
ಕುವೆಂಪು ವಿವಿ ಪರೀಕ್ಷೆ ಮುಂದೂಡುವಂತೆ ಪಟ್ಟು
ಸಾಗರ : ಸೆಪ್ಟೆಂಬರ್ 9 ರಿಂದ 11ರವರೆಗೆ ಇರುವ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಸಾಗರ ಉಪ ವಿಭಾಗ ಅಧಿಕಾರಿಗಳ ಮೂಲಕ ಕುವೆಂಪು ವಿಶ್ವವಿದ್ಯಾಯದ ಕುಲಪತಿಗಳಿಗೆ ವಿದ್ಯಾರ್ಥಿ ಒಕ್ಕೂಟದಿಂದ ಮನವಿ ನೀಡಲಾಯಿತು. ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯವಾದ ಪಿಜಿಸಿ ಇಟ್ ಪರೀಕ್ಷೆಗಳು ಒಟ್ಟಾಗಿ ಬಂದಿರುವುದರಿಂದ ವಿದ್ಯಾರ್ಥಿಗಳು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.
ಇದು ಎಲ್ಲಾ ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಆತಂಕವನ್ನು ಉಂಟು ಮಾಡಿದೆ ಸೆಪ್ಟೆಂಬರ್ ಹತ್ತರಂದು ಪಿಜಿಸಿ ಇಟ್ ಪರೀಕ್ಷೆ ಇರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರವು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೇ ಸರಿಯಾದ ಸಮಯಕ್ಕೆ ಹಿಂತಿರುಗಿ ಬಂದು ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆಯನ್ನು ಬರೆಯುವುದಕ್ಕೆ ಅನಾನುಕೂಲ ಆಗುವುದರಿಂದ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಯು ಈ ಸದರಿ ದಿನಾಂಕದಲ್ಲಿ ಇದ್ದು ದಿನಾಂಕ ಬದಲಾಯಿಸುವಂತೆ ಮನವಿಯನ್ನು ಕೇಳಿಕೊಳ್ಳಲಾಗಿದೆ.ಸಾಗರ ತಾಲೂಕು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಿಎಂ ಚಿನ್ಮಯ್ ಅವರು ಮಾತನಾಡಿದ್ದಾರೆ. ಕೆಲವೊಂದಿಷ್ಟು ವಿದ್ಯಾರ್ಥಿಗಳು ಹಾಜರಿದ್ದರು ಲಿಖಿತ್, ಅಕ್ಷಯ್, ಮನೋಜ್, ಪ್ರವೀಣ್, ಸ್ವಾತಿ, ಲತಾ ಸ್ವಸ್ತಿಕ್ ಇನ್ನೂ ಉಳಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಕ್ರಮ ಮರಳು ಸಾಗಾಣಿಕೆ: 2 ಟಿಪ್ಪರ್ ವಶ!
ಖಚಿತ ಮಾಹಿತಿ ಮೇರೆಗೆ ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್.ಸಂಜಯ್ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಸುತ್ತ ಗ್ರಾಮದ ಶರಾವತಿ ನದಿಯಿಂದ ಮರಳು ಸಾಗಣಿಕೆ ಮುಂದಾಗಿದ್ದ, ಟಿಪ್ಪರ್ ಚಾಲಕ ಜಯನಗರ ಪುನೀತ್ ಹಾಗೂ ಗೊರಗೋಡು ಮನುಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಧಿಕಾರಿಗಳಾದ ನರೇಂದ್ರ ಕುಮಾರ್, ಸತೀಶ್, ಗಸ್ತು ಅರಣ್ಯ ಪಾಲಕ ಯೋಗರಾಜ್, ಚಾಲಕ ರಾಮು ಭಾಗವಹಿದ್ದರು.
ಜಮೀನಿನ ವಿಚಾರದಲ್ಲಿ ಗಲಾಟೆ: ವ್ಯಕ್ತಿ ಮೇಲೆ ಹಲ್ಲೆ
ಜಮೀನಿನ ವಿಚಾರದಲ್ಲಿ ಗಲಾಟೆಯಾಗಿದ್ದು, ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಅರುಣ್ (37) ಹಲ್ಲೆಗೊಳಗಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಶ್ರೀಕಂಠ (55) ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಗಾಯಾಳು ಅರುಣ್ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಕುರಿತು ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.