ಅಂಗಡಿಯಲ್ಲಿದ್ದ ಅಕ್ಕಿ ಪ್ಯಾಕೆಟ್ ಕದ್ದ ಕಳ್ಳರು ಅರೆಸ್ಟ್!
– ಶಿವಮೊಗ್ಗದಲ್ಲಿ 77 ಚೀಲ ಅಕ್ಕಿ ಕಳ್ಳತನ
-ಹೊಸನಗರ: ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ
– ಜ್ಯೂವೆಲ್ಲರಿ ಅಂಗಡಿಗೆ ಗ್ರಾಹಕರಂತೆ ಬಂದು ಚಿನ್ನಾಭರಣ ಕದ್ದ ಪ್ರಕರಣದ ಆರೋಪಿ ಬಂಧನ
– ಹೊಸನಗರ: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
NAMMUR EXPRESS NEWS
ಶಿವಮೊಗ್ಗ: ಅಂಗಡಿಯಲ್ಲಿದ್ದ ಅಕ್ಕಿ ಪ್ಯಾಕೆಟ್ ಗಳನ್ನ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಮಾರ್ಕೇಟ್ ನಲ್ಲಿನ ಎನ್.ಬಿ.ಎಂ ಎಂಟರ್ ಪ್ರೈಸಸ್ ನಲ್ಲಿನ ಮಳಿಗೆಯಲ್ಲಿ ಅಕ್ಕಿ ಪಾಕೇಟ್ ಗಳು ಕಳ್ಳತನವಾದ ಬಗ್ಗೆ ಮಂಜುನಾಥ ಬಿ ಎಂ, ಎಂಬುವರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಿವಮೊಗ್ಗ ಪೊಲೀಸರು ಮೇಲಿನ ತುಮಗನಗರದ ಕುಮಾರ್ ಕೆ, ಮತ್ತು ಅಣ್ಣನಗರದ ನಿವಾಸಿ ಜಯಣ್ಣರನ್ನ ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ಮೌಲ್ಯ 1,07,800/- ರೂಗಳ ತಲಾ 26 ಕೆ.ಜಿ. ತೂಕದ 77 ಚೀಲಗಳಲ್ಲಿದ್ದ 20 ಕ್ವಿಂಟಾಲ್ ತೂಕದ ಅಕ್ಕಿ ಮತ್ತು ಅಂದಾಜು ಮೌಲ್ಯ 1,50,000/- ರೂಗಳ ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರ ದಾಳಿ
ಹೊಸನಗರ: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ನಗದು ಹಣದ ಜೊತೆಗೆ ಬೈಕ್ಗಳ ಸಮೇತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕಿನ ಸೊನಲೆ ಹಾಗೂ ಆಲಗೇರಿಮಂಡ್ರಿ ಗ್ರಾಮದಲ್ಲಿ ಹೊಸನಗರ ಪಿಎಸ್ಐ ಶಿವಾನಂದ ಕೆ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಹೊಸನಗರ ತಾಲೂಕ್ ಆಲಗೇರಿಮಂಡ್ರಿ ಗ್ರಾಮದ ಮನೆಯೊಂದರ ಹಿಂಬದಿಯ ಖಾಲಿ ಜಾಗದಲ್ಲಿ ಸುಮಾರು 5-6 ಜನರು ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ನಗದು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಜ್ಯೂವೆಲ್ಲರಿ ಅಂಗಡಿಗೆ ಗ್ರಾಹಕರಂತೆ ಬಂದು ನಟಿಸಿ ಚಿನ್ನಾಭರಣ ಕದ್ದ ಪ್ರಕರಣದ ಓರ್ವ ಆರೋಪಿ ಅರೆಸ್ಟ್
ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿ ನಕಲಿ ಬಂಗಾರವನ್ನಿಟ್ಟು ಅಸಲಿ ಬಂಗಾರವನ್ನ ಕಳವು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಗಾಂಧಿ ಬಜಾರ್ ನ ಬಸವೇಶ್ವರ ಟೆಂಪಲ್ ಬಳಿಯಿರುವ ಜ್ಯೂವೆಲ್ಲರಿ ಅಂಗಡಿಗೆ ಬುರ್ಖಾ ಧರಿಸಿದ ಓರ್ವ ಮಹಿಳೆ ಮತ್ತು ಪುರುಷ ಸೇರಿ ಇಬ್ಬರು ಗ್ರಾಹಕರಂತೆ ಮೊದಲಿಗೆ 11,500 ರೂ. ಮೌಲ್ಯದ ಚಿನ್ಬಾಭರಣ ಖರೀದಿಸಿ ಹೋಗಿದ್ದರು. ಮತ್ತೊಮ್ಮೆ ಬಂದ ಇಬ್ಬರೂ ಬೇರೆ ಒಡವೆಗಳನ್ನ ಖರೀದಿಸುವ ನೆಪದಲ್ಲಿ ಅಂಗಡಿ ವ್ಯಾಪಾರಕ್ಲಿದ್ದ ಹುಡುಗನ ಗಮನ ಬೇರೆಡೆ ತಿರುಗಿಸಿ 5 ಗ್ರಾಮ್ ಕ್ರಸ್ಟ್ ಲೈಟ್ ಕಿವಿ ಓಲೆ, 4 ಗ್ರಾಂ ಟರ್ಕಿಮಾಡೆಲ್ ಗೋಲ್ಡ್ ರಿಂಗ್, ಮತ್ತೊಂದು 8 ಗ್ರಾಂ ಕಿವಿ ಓಲೆಯನ್ನ ಕದ್ದುಕೊಂಡು ಹೋಗಿದ್ದರು. ಕೊಪ್ಪಳದಲ್ಲಿ ಹಸುವಿನ ವ್ಯಾಪಾರ, ಹಸುವಿಗೆ ಬಣ್ಣ ಹೊಡೆಯುವ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಮೆಹಬೂಬು ಎಂಬಾತನನ್ನ ಬಂಧಿಸಲಾಗಿದೆ.
ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
ಹೊಸನಗರ: ಕರ್ನಾಟಕ ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲ ಸೃಷ್ಠಿಯಾಗಿದೆ. ವಿದ್ಯುತ್ ಈಗಾಗಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ರೈತಪರ ಯೋಜನೆಗಳನ್ನು ರದ್ದು ಪಡಿಸುತ್ತಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ರಾಜ್ಯ ಸರ್ಕಾರದ ದುರಡಾಳಿತದ ವಿರುದ್ಧ ಹೊಸನಗರ ತಾಲ್ಲೂಕು ಬಿಜೆಪಿ ಯುವ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟಿಸಿ ಹೊಸನಗರ ತಹಶೀಲ್ದಾರ್ ರಾಕೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಚಿದ್ದಗದೆ ಪುರುಷೋತ್ತಮ, ಗ್ರಾಮ ಪಂಚಾಯತಿ ಸದಸ್ಯ ಚಿಕ್ಕನಕೊಪ್ಪ ಶ್ರೀಧರ, ಶ್ರೀಧರ ಸುಣ್ಣಕಲ್, ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಉಮೇಶ್ ಎಸ್, ಶಿವಾನಂದ ಗೌಡ, ನಾಗರಾಜ್ ಇದ್ದರು.