ಜ್ವರಕ್ಕೆ ನವ ವಿವಾಹಿತೆ ಬಲಿ.. ಹುಷಾರ್!
– ಜ್ವರ ನಿರ್ಲಕ್ಷ್ಯ ಮಾಡದಿರಿ: ಹೊಸನಗರದಲ್ಲಿ ಘಟನೆ
ತೀರ್ಥಹಳ್ಳಿ ಭಾಗದಲ್ಲಿ ಮಳೆ!… ಚಳಿ ಚಳಿ!
– ಮೋಡ ಕವಿದ ವಾತಾವರಣ: ತುಂತುರು ಮಳೆ
ಶಿವಮೊಗ್ಗದಲ್ಲಿ ಗಾಂಜಾ ದಂಧೆ!
– ಇಬ್ಬರು ಯುವಕರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ
ರಾಗಿಗುಡ್ಡದಲ್ಲಿ ಮಾತ್ರ ನಿಷೇಧಾಜ್ಞೆ!
– ಶಿವಮೊಗ್ಗ ನಗರದ ಇತರ ಕಡೆ ತೆರವು
NAMMUR EXPRESS NEWS
ಹೊಸನಗರ: ಡೆಂಗ್ಯೂ ಜ್ವರದಿಂದ ನವ ವಿವಾಹಿತೆಯೊಬ್ಬರು ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕು ಶಬರೀಶನಗರದಲ್ಲಿ ನಡೆದಿದೆ. ಮಧುರ (31) ಮೃತಪಟ್ಟ ಮಹಿಳೆ, ಕಳೆದ ಆರು ತಿಂಗಳ ಹಿಂದೆ ಶಬರೀಶನಗರದ ಮಂಜುನಾಥ್ ಎಂಬುವವರೊಂದಿಗೆ ವಿವಾಹವಾಗಿತ್ತು ಕಳೆದೊಂದು ವಾರದಿಂದ ಡೆಂಗ್ಯೂ ಜ್ವರದ ಹಿನ್ನಲೆಯಲ್ಲಿ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಡಿಸ್ಟಾರ್ಜ್ ಆಗಿ ತಾಯಿ ಮನೆಯಾದ ತಾಳಗುಪ್ಪಕ್ಕೆ ತೆರಳಿದ್ದಾರೆ ರಾತ್ರಿ ಸಮಯದಲ್ಲಿ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಾಗರ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮಲೆನಾಡಲ್ಲಿ ಮಳೆ: ತೀರ್ಥಹಳ್ಳಿಯಲ್ಲಿ ಚಳಿ ಚಳಿ!
ತೀರ್ಥಹಳ್ಳಿ ಸೇರಿ ಮಲೆನಾಡಿನ ಹಲವು ಕಡೆ ಭಾನುವಾರ ಮಧ್ಯಾಹ್ನ ಬಳಿಕ ಮಳೆಯಾಗಿದೆ. ಮೋಡ ಕವಿದ ವಾತಾವರಣ ಇದ್ದು ಹಲವೆಡೆ ಮಳೆ ಆಗಿದೆ. ಇತ್ತೀಚಿಗೆ ಮಳೆ ನಡುವೆ ಸಂಜೆ ಆಗುತ್ತಿದ್ದಂತೆ ಚಳಿ ಕೂಡ ಶುರುವಾಗಿದೆ.
ಗಾಂಜಾ ಮಾರಾಟ: ಕಾರಾಗೃಹ ಶಿಕ್ಷೆ
ಶಿವಮೊಗ್ಗದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷ ಕಠಿಣ ಶಿಕ್ಷೆ 10 ಸಾವಿರ ದಂಡ ವಿಧಿಸಿದೆ. ಇಬ್ಬರೂ 2020ರ ಸೆಪ್ಟೆಂಬರ್ 5ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಗ್ರಾಮದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಬಂಧಿಸಿ 710,150 ಮೌಲ್ಯದ 1,150 ಗ್ರಾಂ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ 716,000 ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದರು.
ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ ಐ ಮಂಜುನಾಥ್ ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರಿ ವಕೀಲ ಸುರೇಶ್ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ರಾಗಿಗುಡ್ಡದಲ್ಲಿ ಮಾತ್ರ ನಿಷೇಧಾಜ್ಞೆ!
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮೆರವಣಿಗೆಯ ವೇಳೆ ನಡೆದ ಗಲಭೆ ಘಟನೆ ನಡೆದು ಒಂದು ವಾರ ಕಳೆದಿದ್ದು ರಾಗಿಗುಡ್ಡ ಹೊರತುಪಡಿಸಿ ನಗರಾದ್ಯಂತ ಸೆಕ್ಷನ್ ಸರಳಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಾಗಿಗುಡ್ಡ ವ್ಯಾಪ್ತಿಯಲ್ಲಿ ನಿಷೇಧಿತ ಅವಧಿಯಲ್ಲಿ ಐದು ಜನಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ.
ನಿಷೇಧಾಜ್ಞೆಯ ಅವಧಿಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಹಾಗೂ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಘೋಷಣೆಗಳನ್ನು ಕೂಗುವುದು, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ಹಾಗೂ ಪ್ರಚೋದನಾಕಾರಿ ಪ್ಲೆಕ್ಸ್, ಟ್ಯಾನರ್, ಬಂಟಿಂಗ್ಸ್ ಕಟ್ಟುವುದನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಮತ್ತು ಉಪಯೋಗಿಸುವುದನ್ನು ಹಾಗೂ ಯಾವುದೇ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ಮತ್ತು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಈ ಹಿಂದೆಯೇ ಪೂರ್ವಾನುಮತಿಯನ್ನು ಪಡೆದು ನಿಗಧಿಯಾದಂತಹ ಕಾರ್ಯಕ್ರಮಗಳನ್ನು ಮಾಡಬಹುದು.