ಗೋ ವಸ್ತು ಬಳಸಿ ಸಾಕುಪ್ರಾಣಿ ಆಹಾರ ತಯಾರಿಕೆ?
– ಶಿವಮೊಗ್ಗದ ಕಂಪನಿ ಮೇಲೆ ಪೊಲೀಸರ ದಾಳಿ
– ಆಗಸದಲ್ಲಿಯೇ 5 ಸುತ್ತು ರೌಂಡ್ ಹಾಕಿದ ವಿಮಾನ!
– ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲ ಕ್ಷಣ ಆತಂಕ
– ಶಿವಮೊಗ್ಗ ಜಿಲ್ಲೆಯಲ್ಲಿ ಪಟಾಕಿ ಮೇಲೆ ದಾಳಿ
– 2000 ಕೆಜಿ ಪಟಾಕಿ ವಶ: 4 ಕೇಸ್ ದಾಖಲು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ದಾಳಿ ಕುತೂಹಲ ಮೂಡಿಸಿದೆ. ಶಿವಮೊಗ್ಗದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸಾಕು ಪ್ರಾಣಿಗಳಿಗೆ ನೀಡುವ ಆಹಾರವನ್ನು ತಯಾರು ಮಾಡುವ ಕಾರ್ಖಾನೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಖಾನೆಯ ಮೇಲೆ ಗುರುವಾರ ದಾಳಿ ಮಾಡಿದ್ದು,ಪ್ರಾಥಮಿಕ ಹಂತದಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಗೋವುಗಳಿಗೆ ಸಂಬಂಧಿಸಿದ ವಸ್ತು ಬಳಸಿಕೊಂಡು ಸಾಕುಪ್ರಾಣಿಗಳಿಗೆ ಹಾಕುವ ಫೀಡ್ಗಳನ್ನು ತಯಾರು ಮಾಡುತ್ತಿದ್ದರು ಎನ್ನಲಾಗಿದೆ. ಯಾವುದೇ ಮಾಹಿತಿಯನ್ನು ಪೊಲೀಸ್ ಇಲಾಖೆ ಇನ್ನೂ ದೃಢ ಪಡಿಸಿಲ್ಲ. ದಾಳಿ ನಡೆಸಿರುವ ತಂಡ, ಫ್ಯಾಕ್ಟರಿಯ ಮಾಲಿಕತ್ವದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸ್ತಿದೆ.
ಆಗಸದಲ್ಲಿಯೇ 5 ಸುತ್ತು ರೌಂಡ್ ಹಾಕಿದ ವಿಮಾನ!
ಬೆಂಗಳೂರು- ಶಿವಮೊಗ್ಗ ಇಂಡಿಗೋ ವಿಮಾನ ಲ್ಯಾಂಡಿಂಗ್ ವಿಳಂಬ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕೆ ಇಂಡಿಗೋ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡಿಗ್ ಆಗಿದೆ.
ಮೋಡ ಕವಿದ ವಾತವರಣ ಹಿನ್ನೆಲೆ ಲ್ಯಾಂಡಿಂಗ್ ವಿಳಂಬವಾಗಿದೆ. ವಿಸಿಬಲಿಟಿ ಇಲ್ಲದ ಹಿನ್ನಲೆಯಲ್ಲಿ ಇಂಡಿಗೋ ವಿಮಾನ ಆಗಸದಲ್ಲಿಯೇ 5 ಸುತ್ತು ರೌಂಡ್ ಹೊಡೆದಿದೆ. ಈ ಹಿಂದೆಯೂ ವಿಮಾನ ಒಮ್ಮೆ ಶಿವಮೊಗ್ಗಕ್ಕೆ ಬಂದು ವಾಪಾಸ್ ಬೆಂಗಳೂರಿಗೆ ಹೋಗಿತ್ತು. ನಿಗಧಿತ ಸಮಯಕ್ಕಿಂತ 20 ನಿಮಿಷ ತಡವಾಗಿ ವಿಮಾನ ಲ್ಯಾಂಡ್ ಆಗಿದೆ. ಮಾಜಿ ಸಿಎಂ ಬಿಎಸ್ ವೈ ಕೂಡ ಇದೇ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದರು. ಬೆಳಿಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ 11.05ಕ್ಕೆ ಲ್ಯಾಂಡ್ ಆಗಬೇಕಿತ್ತು. ಇದು ಕೆಲ ಕಾಲ ಗೊಂದಲ ಮೂಡಿಸಿತು.
ಶಿವಮೊಗ್ಗ ಜಿಲ್ಲೆಯಲ್ಲಿ ಪಟಾಕಿ ಮೇಲೆ ದಾಳಿ
ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಮೇಲೆ ದಾಳಿ ಮಾಡಿರುವ ಜಿಲ್ಲಾಡಳಿತ ಸುಮಾರು 2000 ಕೆಜಿ ಪಟಾಕಿ ವಶಪಡಿಸಿಕೊಂಡು 4 ಕೇಸ್ ದಾಖಲಿಸಿದೆ. ರಾಜ್ಯ ಸರ್ಕಾರ ಅಂಗಡಿ, ಮಳಿಗೆ, ಮನೆ, ಗೋದಾಮುಗಳಲ್ಲಿ ಪಟಾಕಿ ದಾಸ್ತಾನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ಪಟಾಕಿ ದುರಂತದಲ್ಲಿ 16 ಮಂದಿ ಜೀವ ಕಳೆದುಕೊಂಡ ಘಟನೆ ಬಳಿಕ ಈ ಆದೇಶ ಮಾಡಲಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಸೊರಬ, ಭದ್ರಾವತಿ, ಹೊಸನಗರ, ಶಿಕಾರಿಪುರ ತಾಲೂಕಲ್ಲಿ ತಂಡ ರಚನೆ ಮಾಡಲಾಗಿದೆ.