ರಾಗಿಗುಡ್ಡದ ಗಲಭೆ: ಪಿಎಫ್ಐ ಸಂಘಟನೆ ಶಂಕೆ!
– ನಿಷೇಧಿತ ಸಂಘಟನೆ ಕಾರ್ಯಕರ್ತರ ಕೈವಾಡ?
– ಬಸ್ಸಿನಿಂದ ಬಿದ್ದು ಮಹಿಳೆ ಸಾವು
– ಬೈಕಲ್ಲಿ ಹೋಗುವಾಗ ಸ್ಕಿಡ್ ಆಗಿ ಬಿದ್ದು ಸಾವು
– ಪ್ರತಿಮೆ ಹಾಕಿದ್ದಕ್ಕೆ ಸುಮೋಟೋ ಪ್ರಕರಣ ದಾಖಲು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಮಾಚೇನಹಳ್ಳಿಯ ಗ್ಲಾಸ್ಹೌಸ್ ಬಳಿ ಕೆಎಸ್ ಆರ್ ಟಿ ಸಿ ಬಸ್ ಹತ್ತಲು ಹೋದ ಮಹಿಳೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಮಾಚೇನಹಳ್ಳಿಯ ಗ್ಲಾಸ್ ಹೌಸ್ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಒಂದು ಕಡೆಯ ಸಂಚಾರವನ್ನಬಂದ್ ಮಾಡಲಾಗಿದೆ. ಈ ವೇಳೆ ಶಿವಮೊಗ್ಗ ಭದ್ರಾವತಿ ಬಸ್ ಗಾಗಿ ಕಾಯುತ್ತಿದ್ದ ರಾಜೇಶ್ವರಿಯವರು ಬಸ್ ಬರುತ್ತಿದ್ದಂತೆ ಬಸ್ ಹತ್ತಲು ಮುಂದಾಗಿದ್ದಾರೆ. ಜನ ಹೆಚ್ಚಾಗಿದ್ದರಿಂದ ಕಂಡಕ್ಟರ್ ರೈಟ್ ಕೊಟ್ಟ ಕಾರಣ ಬಸ್ ಮೂವ್ ಆಗಿದೆ ರಾಜೇಶ್ವರಿ ಕೆಳಗೆ ಬಿದ್ದಿದ್ದಾರೆ. ರಾಜೇಶ್ವರಿ ಅವರ ಬಾಯಿ ಮತ್ತು ಕಿವಿಯಲ್ಲಿ ರಕ್ತಬಂದಿದೆ. ತಕ್ಷಣವೇ ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅವರ ಸಾವನ್ನ ದೃಢಪಡಿಸಿದ್ದಾರೆ.
ಬೈಕಲ್ಲಿ ಸ್ಕಿಡ್ ಆಗಿ ಬಿದ್ದು ಮಹಿಳೆ ಸಾವು
ಹೊಳೆಹೊನ್ನೂರು: ಹೊಳೆಹೊನ್ನೂರಿನ ದರ್ಗಾದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸ್ಕಿಡ್ ಆಗಿ ಬಿದ್ದು ಮಹಿಳೆಯೋರ್ವರು ಸಾವನ್ಬಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗುರುಮ್ಮ ಕೆಲಸ ನಿಮಿತ್ತ ಮಗ ಸಾಯಿ ಪುನೀತ್ ಜೊತೆ ಟಿವಿಎಸ್ ವಿಗೋ ವಾಹನದಲ್ಲಿ ಹೊಳೆಹೊನ್ನೂರಿಗೆ ತೆರಳಿದ್ದರು. ಇಬ್ಬರೂ ಬುಕ್ಲಾಪುರದ ನಿವಾಸಿಗಳಾಗಿದ್ದರು. ಮಗ ಹೊಳೆಹೊನ್ನೂರು ಸರ್ಕಲ್ ಬಳಿ ಇಳಿದುಕೊಂಡಿದ್ದು ತಾಯಿ ಚನ್ನಗಿರಿ ರಸ್ತೆಯ ಬಳಿ ಹಣ್ಣು ಖರೀದಿಸಲು ವಾಹನದಲ್ಲಿ ತೆರಳಿದ್ದಾರೆ.
ತಾಯಿ ತೆರಳಿದ ಸ್ವಲ್ಪ ಸಮಯದ ವೇಳೆ ಇರ್ಫಾನ್ ಎಂಬುವರು ಕರೆಮಾಡಿ ದರ್ಗಾದ ಬಳಿ ಓರ್ವ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮೊಬೈಲ್ ಡಯಲ್ ನಲ್ಲಿ ನಿಮ್ಮಹೆಸರು ಇತ್ತು ಮಾಡಿರುವೆ ಎಂದು ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಸಾಯಿ ಪುನೀತ್ ಪ್ರಜ್ಞೆತಪ್ಪಿ ಬಿದ್ದಿರುವ ತಾಯಿಯನ್ನ ತಕ್ಷಣವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದು ಅಲ್ಲಿ ವೈದ್ಯರು ಗುರುಮ್ಮ ಸಾವನ್ನಪ್ಪಿರುವುದನ್ನ ದೃಢಕರಿಸಿದ್ದಾರೆ. ಗುರುಮ್ಮ ದ್ವಿಚಕ್ರವಾಹನದಲ್ಲಿ ತೆರಳುವಾಗ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿರುವುದಾಗಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮೋಟೋ ಪ್ರಕರಣ ದಾಖಲು
ಶಿವಮೊಗ್ಗ: ಗಣಪತಿ ಮತ್ತು ಈದ್ ಮೆರವಣಿಗೆಯ ವೇಳೆ ನಗರದಲ್ಲಿ ಮಾಡಿರುವ ಅಲಂಕಾರವನ್ನ ಹಿಡಿದು ಶಕ್ತಿಶಾಲಿ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಹೊರಟವನ ವಿರುದ್ಧ ದೊಡ್ಡಪೇಟೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ವೇಳೆ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಉಗ್ರ ನರಸಿಂಹ ಮೂರ್ತಿಯ ಫೋಟೊಗೆ ಅಮೀರ್ ಅಹ್ಮದ್ ವೃತ್ತದಲ್ಲಿ ನಿರ್ಮಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ನ ಫೋಟೊ ಸೇರಿಸಿ ಟಿಪ್ಪು ಸುಲ್ತಾನ್ ಎಂದು ಬರೆಯಲಾಗಿತ್ತು. ಈ ಫೊಟೊವನ್ನ ರೀಲ್ಸ್ ರೀತಿ ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಇದನ್ನ ಇತರರಿಗೆ ಶೇರ್ ಮಾಡಲಾಗಿತ್ತು. ಇದು ಒಂದು ಕೋಮಿನ ಜನರನ್ನ ಎತ್ತಿಕಟ್ಟುವ ಮತ್ತು ಜನರನ್ನ ಉದ್ರಿಕ್ತಗೊಳಿಸುವ ಹಾಗೂ ನಗರದಲ್ಲಿ ಸಮಾಜದ ಶಾಂತಿ ಕದಡುವ ವಿಡಿಯೋವಾಗಿದೆ ಎಂದು ಸುಮೋಟೋ ಪ್ರಕರಣ ದಾಖಲಾಗಿದೆ.
ರಾಗಿಗುಡ್ಡದ ಗಲಭೆ: ಪಿಎಫ್ಐ ಕಾರ್ಯಕರ್ತರ ಕೈವಾಡ
ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣದಲ್ಲಿ ಗಲಭೆಗೆ ಪ್ರಚೋದನೆ ನೀಡಿದವರು ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಎಂಬ ಶಂಕೆ ವ್ಯಕ್ತವಾಗುತ್ತಿದೆ. ರಾಗಿಗುಡ್ಡದ 27 ಪ್ರಕರಣಗಳು ದಾಖಲಾಗಿದ್ದು, ಅ.7 ರಂದು ಶಿಕ್ಷಕ ಪ್ರಸನ್ನ ಕುಮಾರ್ ಮತ್ತೋರ್ವ ಮಹಿಳೆಯಿಂದ ದೂರು ದಾಖಲಾಗಿದ್ದು ಇದರಿಂದ 29 ಕ್ಕೆ ಎಫ್ಐಆರ್ ಸಂಖ್ಯೆ ಏರಿಕೆಯಾಗಿವೆ. ನಿಷೇಧಿತ ಪಿಎಫ್ ಐ ಕಾರ್ಯಕರ್ತರ ಕೈವಾಡದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಪೊಲೀಸರ ತನಿಖೆ ವೇಳೆ ನಿಷೇಧಿತ ಪಿಎಫ್ಐ ಕಾರ್ಯಕರ್ತರ ಹೆಸರು ಹೇಳಿರುವುದಾಗಿ ತಿಳಿದುಬಂದಿದೆ. ತನಿಖೆ ವೇಳೆ ಒಟ್ಟು 8 ಜನ ನಿಷೇಧಿತ ಪಿಎಫ್ಐ ಕಾರ್ಯಕರ್ತರ ಹೆಸರನ್ನ ಬಂಧಿತರು ಬಾಯಿಬಿಟ್ಟಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈ ಏಳು ಜನರು ಪಿಎಫ್ಐ ಬ್ಯಾನ್ ಆಗ್ತಿದ್ದಂತೆ ಮತ್ತೊಂದು ರಾಜಕೀಯ ಸಂಘಟನೆಯಲ್ಲಿ ಸಕ್ರಿಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ರಾಗಿಗುಡ್ಡ ಗಲಭೆ ವೇಳೆ ಯುವಕರಿಗೆ ಪ್ರಚೋದನೆ ನೀಡಿರುವುದಾಗಿ ಹೇಳಲಾಗುತ್ತಿದೆ. ಸ್ಥಳೀಯ ಯುವಕರಿಗೆ ಉದ್ರಿಕ್ತರಾಗುವಂತೆ ಪ್ರೇರೆಪಿಸಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಲಾಟೆ ವಿಕೋಪಕ್ಕೆ ತಲುಪಿದ ಬೆನ್ನಲ್ಲೇ 8 ಜನ ನಿಷೇಧಿತ ಪಿಎಫ್ಐ ಕಾರ್ಯಕರ್ತರು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.