ಹೊಸನಗರಕ್ಕೂ ಕಾಲಿಟ್ಟ ಕಾಡಾನೆಗಳು!
– ಗ್ರಾಮಸ್ಥರಿಗೆ ಆನೆ ಸಂಕಟ: ಜೀವ ಭಯ
– ತುಂಗಾ ನಾಲೆಯಲ್ಲಿ ಪುರುಷನ ಶವ ಪತ್ತೆ
ಗಾಂಧಿ ಪಾರ್ಕ್ ಸಮೀಪ ಸ್ಕೂಟಿ ಕಳ್ಳತನ
-ಶಿವಮೊಗ್ಗದಲ್ಲಿ ಫೈನಾನ್ಸ್ ಸಂಸ್ಥೆಯ ಕಳ್ಳತನ
– ಸಾಮಾಜಿಕ ಜಾಲತಾಣ ವಿಡಿಯೋ ಮೇಲೆ ಕೇಸ್
NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗಾಳಿಬೈಲ್ ಗ್ರಾಮದಲ್ಲಿ ಕಾಡಾನೆ ಹಿಂಡು ಆಗಮಿಸಿ ಅಡಿಕೆ ಗಿಡಗಳನ್ನು ನಾಶಪಡಿಸಿವೆ. ಗಾಳಿಬೈಲು ಗ್ರಾಮದ ರೈತರೊಬ್ಬರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು,ಬಾಳೆ ಮತ್ತು ಅಡಿಕೆ ಗಿಡಗಳನ್ನು ನಾಶಗೊಳಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಇತ್ತೀಚೆಗೆ ಚಿರತೆ ಹಾವಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರಿಗೆ ಈಗ ದಿಢೀರ್ ಪ್ರತ್ಯಕ್ಷವಾದ ಕಾಡಾನೆಯ ಭೀತಿಯೂ ಆವರಿಸಿದೆ. ಕಳೆದ 2-3 ದಿನಗಳ ಹಿಂದೆ ಆಲುವಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಆನೆಗಳು ಭಾನುವಾರ ರಾತ್ರಿ ಗಾಳಿಬೈಲ್ ಗ್ರಾಮದ ತೋಟದಲ್ಲಿ ಸೇರಿಕೊಂಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.ಗಾಳಿಬೈಲು ಗ್ರಾಮದ ರೈತರೊಬ್ಬರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು,ಬಾಳೆ ಮತ್ತು ಅಡಿಕೆ ಗಿಡಗಳನ್ನು ನಾಶಗೊಳಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಶಿವಮೊಗ್ಗದಲ್ಲಿ ಪುರುಷ ಶವ ಪತ್ತೆ!
ಶಿವಮೊಗ್ಗ : ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟೇಶ ನಗರ ಸಮೀಪದ ತುಂಗಾ ನಾಲೆಯಲ್ಲಿ ಭಾನುವಾರ ಸಂಜೆ ಅನಾಮಧೇಯ ಪುರುಷನೋರ್ವನ ಶವ ಪತ್ತೆಯಾದ ಘಟನೆ ನಡೆದಿದೆ. ನಾಲೆಯಲ್ಲಿ ಶವ ತೇಲಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಲಕ್ಷ್ಮಿ ಚಿತ್ರಮಂದಿರ ಸಮೀಪ ಗಸ್ತಿನಲ್ಲಿದ್ದ ವಿನೋಬನಗರ ಠಾಣೆಯ 112 ವಾಹನದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ 112 ವಾಹನದ ಸಿಬ್ಬಂದಿಗಳಾದ ರಾಘವೇಂದ್ರ ಎಸ್.ಕೆ. ಹಾಗೂ ಪವಾರ್ ಎಸ್.ಪಿ. ಅವರು ನೀರಿನಲ್ಲಿ ತೇಲಿ ಹೋಗುತ್ತಿದ್ದ ಶವವನ್ನು ಬಿದಿರಿನ ಬೊಂಬು ಬಳಸಿ ತಡೆದು ನಿಲ್ಲಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ನಾಲೆಯಿಂದ ಶವವನ್ನು ಹೊರ ತೆಗೆದಿದ್ದಾರೆ. ಭಾಗಶಃ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಗಾಂಧಿ ಪಾರ್ಕ್ ಸಮೀಪ ಸ್ಕೂಟಿ ಕಳ್ಳತನ
ಶಿವಮೊಗ್ಗ : ಗಾಂಧಿ ಪಾರ್ಕ್ ಸಮೀಪ ನಿಲ್ಲಿಸಿದ್ದ ಸ್ಕೂಟಿ ಕಳ್ಳತನವಾಗಿದೆ ಎಂದು ಶೇಷಾದ್ರಿಪುರಂ ನಿವಾಸಿ ಗೌತಮ್ ಎಂಬುವವರು ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಾಂಧಿ ಪಾರ್ಕ್ ಸಮೀಪದ ಸಾರ್ವಜನಿಕ ಶೌಚಾಲಯದ ಮುಂಭಾಗ ಸ್ಕೂಟಿ ನಿಲ್ಲಿಸಿದ್ದರು. ಅದೇ ರಾತ್ರಿ 10 ಗಂಟೆಗೆ ಹಿಂತಿರುಗಿದಾಗ ಸ್ಕೂಟಿ ಕಾಣಿಸಲಿಲ್ಲ. ಸ್ಕೂಟಿಯಲ್ಲಿ ಗೌತಮ್ ಅವರ ಪತ್ನಿಯ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಇತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಫೈನಾನ್ಸ್ ಅಲ್ಲಿ ಕಳ್ಳತನ
ಶಿವಮೊಗ್ಗ: ಕಿಟಕಿಯ ಕಬ್ಬಿಣದ ರಾಡ್ಗಳನ್ನು ಮುರಿದು ಫೈನಾನ್ಸ್ ಸಂಸ್ಥೆಯೊಂದರಲ್ಲಿ ನಗದು ಮತ್ತು ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿರುವ ಫೈವ್ ಸ್ಟಾರ್ ಬಿಸ್ನೆಸ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಘಟನೆ ಸಂಭವಿಸಿದೆ. ಅ.12ರಂದು ರಾತ್ರಿ ಉದ್ಯೋಗಿಗಳು ಸಂಸ್ಥೆಯ ಬಾಗಿಲು ಬಂದ್ ಮಾಡಿ ತೆರಳಿದ್ದರು. ಅ.13ರಂದು ಬೆಳಗ್ಗೆ 9.30ಕ್ಕೆ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಚನ್ನಕೇಶವ ಮತ್ತು ಸಂಸ್ಥೆಯ ಉದ್ಯೋಗಿ ಗುರುರಾಜ್ ಸಂಸ್ಥೆಯ ಬೀಗ ತೆಗೆದು ಒಳ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬೀರುವಿನ ಲಾಕರ್ನಲ್ಲಿ ಇಟ್ಟಿದ್ದ 1.05 ಲಕ್ಷ ರೂ. ನಗದು, ಸಿಸಿಟಿವಿಯ ಡಿವಿಆರ್ ಅನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಿಟಕಿಯ ಕಬ್ಬಿಣದ ರಾಡ್ಗಳನ್ನು ಮುರಿದು ಕಳ್ಳರು ಒಳ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ವಿಡಿಯೋ ಮೇಲೆ ಕೇಸ್!
ಶಿವಮೊಗ್ಗ: ಹರ್ಷನ ವಿರುದ್ಧ ಅವಹೇಳನ ಪೋಸ್ಟ್ ಮಾಡಿದವನ ವಿರುದ್ಧ ಮತ್ತೊಂದು ಸುಮೋಟೋ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಜಾಲತಾಣದ ಮೇಲೆ ಮಾನಿಟರಿಂಗ್ ಮಾಡುವ ಸೆಲ್ ನಿಂದ ಯಾರು ಯಾರು ಏನೇನು ಪೋಸ್ಟ್ ಮಾಡ್ತಾರೆ ಅವರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ. ಸೋಶಿಯಲ್ ಮೀಡಿಯಾವಾದ ವಾಟ್ಯಪ್ ನಲ್ಲಿ ನಿಹಾಲ್ ಎಂಬು ವ್ಯಕ್ತಿಯು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಶಿವಮೊಗ್ಗದಲ್ಲಿ, ಹತ್ಯೆಯಾದ ಹಿಂದೂ ಹರ್ಷನ ಬಗ್ಗೆ ಸ್ಟೇಟಸ್ ಹಾಕಿ ಕೊಂಡಿದ್ದನು. 24 ಸೆಕೆಂಡ್ ವಿಡಿಯೋ ಉರ್ದು ಭಾಷೆಯಲಿತ್ತು, ಅದರಲ್ಲಿ ಹರ್ಷನ ಬಾವ ಚಿತ್ರಕ್ಕೆ ಓಂ ಶಾಂತಿ ಎಂದು ಇತ್ತು.
ನಂತರ ಹರ್ಷ ಕೊಲೆಯಾದ ಸಂದರ್ಭದಲ್ಲಿ, ರಕ್ತಸಿಕ್ತವಾಗಿ ಬಿದ್ದಿದ್ದ ವಿಡಿಯೋವಿದ್ದು, ತನ್ನ ವಾಟ್ಸ್ ಪ್ ಸ್ಫೋಟಿಸ್ ಗೆ ಹಾಕಿಕೊಂಡು ಮತ್ತು ಇತರೆಯವರಿಗೆ ಶೇರ್ ಮಾಡಿರುವುದು ತಿಳಿದು ಬಂದಿದೆ. ಒಂದು ಕೋಮಿನ ಜನರನ್ನು ಎತ್ತಿಕಟ್ಟುತ್ತಾ ಜನರನ್ನು ಉದ್ರಿಕ್ತಗೊಳಿಸಿ ಪ್ರೇರೇಪಿಸುತ್ತಾ ಸಮಾಜದ ಶಾಂತಿ ಕದಡುತ್ತಿರುವ ವಿಡಿಯೋದೊಂದಿಗೆ ಆರೋಪಿ ನಿಹಾಲ್ ವಾಸ್ಕ್ರಿಪ್ ಸ್ಟೇಟಸ್ ಹಾಕಿಕೊಂಡಿದ್ದ ಬಗ್ಗೆ ಸ್ಕ್ರೀನ್ ಶಾಟ್ ಪ್ರತಿಯನ್ನು ಪಡೆದು ಕೊಂಡ ಪೊಲೀಸರು ವಿಡಿಯೋವನ್ನು ಸಿಡಿ ಯಲ್ಲಿ ಡೌನ್ ಲೋಡ್ ಮಾಡಿ ಕೊಂಡು ದೂರು ದಾಖಲಿಸಿಕೊಂಡಿದ್ದಾರೆ.