ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ರೈತರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ.
-ಆನ್ಲೈನ್ನಲ್ಲಿ ವಂಚನೆ ಹೆಚ್ಚಳ 2.79 ಲಕ್ಷ ರೂ. ಕಳೆದುಕೊಂಡ ಮಹಿಳೆ
– ಮಾನವೀಯತೆ ಮೆರೆದ ಸಾಗರದ ಹೈವೆ ಪೆಟ್ರೋಲ್ ಪೊಲೀಸರು
NAMMUR EXPRESS NEWS : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಹಾಗೂ ಸಾಮಾಜಿಕ ಜಾಲತಾಣ ಉದ್ಘಾಟನೆ ವೇಳೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿಕೊಟ್ಟ ರೈತರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.
ವಿಮಾನಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ , ಶಿವಮೊಗ್ಗ ಏರ್ಪೋರ್ಟ್ಗಾಗಿ ಭೂಮಿಕೊಟ್ಟ ರೈತರನ್ನು ಸನ್ಮಾನಿಸಲು ಮಾಜಿ ಸಿಎಂ ಯಡಿಯೂರಪ್ಪನವರು ಮುಂದಾದರು, ಈ ವೇಳೆ ಕಾಂಗ್ರೆಸ್ನ ವಿಜಯಕುಮಾರ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನೀವು ರೈತರಿಗಲ್ಲ, ಬ್ರೋಕರ್ಗಳಿಗೆ ಸನ್ಮಾನ ಮಾಡುತ್ತಿದ್ದೀರಾ ಎಂದು ಘೋಷಣೆ ಕೂಗಿದರು. ಅಲ್ಲದೆ ನಿಜವಾದ ರೈತರನ್ನು ಸನ್ಮಾನಿಸುವಂತೆ ಆಗ್ರಹಿಸಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಂಸದ ಬಿ.ವೈ.ರಾಘವೇಂದ್ರರವರು, ನಮಗೆ ಎಲ್ಲರೂ ಸಹ ರೈತರೇ, ಇದರಲ್ಲಿ ಭೇದಭಾವ ತೋರಲು ಆಗದು ಎಂದು ಅಸಮಾಧಾನಗೊಂಡವರನ್ನು ಸಮಾಧಾನಪಡಿಸಿದರು. ಇನ್ನೊಂದೆಡೆ ಸ್ಥಳದಲ್ಲಿದ್ದ ಪೊಲೀಸರು ಸನ್ನಿವೇಶವನ್ನು ತಿಳಿಗೊಳಿಸಿದರು.
ಆನ್ಲೈನ್ನಲ್ಲಿ ವಂಚನೆ ಹೆಚ್ಚಳ 2.79 ಲಕ್ಷ ರೂ. ಕಳೆದುಕೊಂಡ ಮಹಿಳೆ
ಶಿವಮೊಗ್ಗ : ಸಾಮಾಜಿಕ ಜಾಲತಾಣದಲ್ಲಿ ವಂಚನೆಗೊಳಗಾಗಿ ಮಹಿಳೆಯೊಬ್ಬರು 2.79 ಲಕ್ಷ ರೂಪಾಯಿಯನ್ನು ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ಶಿವಮೊಗ್ಗ ನಗರದ ನಿವಾಸಿಯಾದ ಮಹಿಳೆಯು ಆನ್ಲೈನ್ ಕೆಲಸವನ್ನು ಹುಡುಕಾಡುತ್ತಿದ್ದರು. ಈ ವೇಳೆ ಅವರ ಮೊಬೈಲ್ಗೆ ಒಂದು ಮೆಸೇಜ್ ಬಂದಿದ್ದು, ಅದರಲ್ಲಿ ಆನ್ ಲೈನ್ ಕೆಲಸ ನೀಡುವುದಾಗಿ ಮಾಹಿತಿ ಇತ್ತು, ಅಲ್ಲದೆ, ಯುಟ್ಯೂಬ್ನಲ್ಲಿ ನಮ್ಮ ವೀಡಿಯೊಗಳನ್ನು ಲೈಕ್, ಶೇರ್ ಮಾಡಿದರೆ ನಿಮಗೆ ಕಮಿಷನ್ ನೀಡುವುದಾಗಿ ಬರೆಯಲಾಗಿತ್ತು. ಇದನ್ನು ಖಾತರಿಪಡಿಸಲು ಮಹಿಳೆ ಪರೀಕ್ಷಿಸಿದ್ದರು. ಈ ವೇಳೆ ಮಹಿಳೆ ಖಾತೆಗೆ 150 ರೂ, ಬಂದಿತ್ತು. ಹೀಗಾಗಿ ಆ ಮೆಸೇಜನ್ನು ಮಹಿಳೆ ನಂಬಿದರೆನ್ನಲಾಗಿದೆ.
ತಕ್ಷಣವೇ ಟೆಲಿಗ್ರಾಂ ಅಕೌಂಟ್ನಲ್ಲಿ ಲಿಂಕ್ ಕಳಿಸಿರುವ ಬಗ್ಗೆ ಮಾಹಿತಿ ನೀಡಿದ ಆನ್ಲೈನ್ ವಂಚಕರು, ಅದರಲ್ಲಿ ಹಲವು ಪ್ರೀಪೈಡ್ ಟಾಸ್ಕ್ ಕೊಟ್ಟು ಒಟ್ಟು 2,79,070 ರೂನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಂಚನೆಗೊಳಗಾಗಿದ್ದನ್ನು ಅರಿತ ಮಹಿಳೆಯು, ಸಿಐಎನ್ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮಾನವೀಯತೆ ಮೆರೆದ ಸಾಗರದ ಹೈವೆ ಪೆಟ್ರೋಲ್ ಪೊಲೀಸರು
ಸಾಗರ: ಸಾಗರ ಇಲ್ಲಿನ ತ್ಯಾಗರ್ತಿ ಕ್ರಾಸ್ ಬಳಿ ರಸ್ತೆ ಅಪಘಾತ ಸಂಭಸಿವಿದ್ದು ಇದನ್ನ ಕಂಡ ಸಾಗರದ ಹೈವೇ ಪೆಟ್ರೋಲ್ ಪೊಲೀಸರಾದ ನವೀನ್ ಹಾಗು ಸಂದೀಪ್ ಅವರು ತಕ್ಷಣ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ ಇಂತಹ ಮಹಾನ್ ಕಾರ್ಯ ಮಾಡಿದ ಪೊಲೀಸ್ ಸಿಬ್ಬಂದಿಗಳಾದ ನವೀನ್ ಹಾಗು ಸಂದೀಪ್ ಅವರಿಗೆ ಎಲ್ಲಾ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.