– ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ ಇಬ್ಬರು ಯುವಕರ ಬಂಧನ.
-ಗಾಂಜಾ ಮಾರಾಟ ಐವರು ಯುವಕರ ಸೆರೆ.
-ಕೆಳದಿ ಕೆರೆಯಲ್ಲಿ ಶವ ಪತ್ತೆ!
-ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಆಕ್ಸಿಡೆಂಟ್ ರೂಪದಲ್ಲಿ ಕೊಲೆ!
-ಸಿಗಂದೂರು ಲಾಂಚ್ ಸೇವೆ ಆರಂಭ.ನಿಟ್ಟುಸಿರು ಬಿಟ್ಟ ಸ್ಥಳೀಯರು, ಭಕ್ತರು.
ಭದ್ರಾವತಿ : ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೋರ್ವರ ಬಳಿಯಿದ್ದ ನಗನಾಣ್ಯ ಅಪಹರಿಸಿ ಪರಾರಿಯಾಗಿದ್ದ ಆರೋಪದ ಮೇರೆಗೆ, ಇಬ್ಬರನ್ನು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಭದ್ರಾವತಿ ತಾಲೂಕು ಸುಲ್ತಾನ್ ಮಟ್ಟಿ ಗ್ರಾಮದ ನಿವಾಸಿಗಳಾದ ಚೇತನ ಹಾಗೂ ಕೀರ್ತನ್ ಕೆ ಬಂಧಿತ ಯುವಕರೆಂದು ಗುರುತಿಸಲಾಗಿದೆ. ಆರೋಪಿತರಿಂದ 11,300 ನಗದು, 2 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಕಾರ್ಮಿಕ ರವೀಂದ್ರ ಯಾದವ್ ಅವರು ಮಾಚೇನಹಳ್ಳಿಗೆ ಹೋಗಲು ಭದ್ರಾವತಿ ಬಸ್ ನಿಲ್ದಾಣದ ಬಳಿ ಬಸ್ ಗೆ ಕಾದು ನಿಂತಿದ್ದರು. ಈ ವೇಳೆ ಬೈಕ್ ನಲ್ಲಿ ಸ್ಥಳಕ್ಕಾಗಮಿಸಿದ ಆರೋಪಿಗಳು ಡ್ರಾಪ್ ಕೊಡುವುದಾಗಿ ಬೈಕ್ ನಲ್ಲಿ ಹತ್ತಿಸಿಕೊಂಡಿದ್ದರು.
ಜೇಡಿಕಟ್ಟೆ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರವೀಂದ್ರ ಯಾದವ್ ಗೆ ಬೆದರಿಸಿ ಅವರ ಬಳಿಯಿದ್ದ ನಗದು, ಎಟಿಎಂ ಕಾರ್ಡ್, ಮೊಬೈಲ್ ಫೋನ್ ಸುಲಿಗೆ ಮಾಡಿದ್ದರು. ಈ ಕುರಿತಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ನಾಗರಾಜ್ ಕೆ.ಆರ್. ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಶೈಲ ಕುಮಾರ್ ಜೆ, ಪಿಎಸ್ಐ ರಮೇಶ್ ಟಿ, ಭಾರತಿ, ಸಿಬ್ಬಂದಿಗಳಾದ ನವೀನ್, ಪ್ರವೀಣ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಗಾಂಜಾ ಮಾರಾಟ ಐವರು ಯುವಕರ ಸೆರೆ.
ಭದ್ರಾವತಿ : ಗಾಂಜಾ ಮಾರಾಟ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಐವರು ಯುವಕರನ್ನು ಬಂಧಿಸಿದ ಘಟನೆ ಭದ್ರಾವತಿ ಪಟ್ಟಣದ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾ ರೈಸ್ ಮಿಲ್ ಸಮೀಪ ನಡೆದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಅಜ್ಜು ಭದ್ರಾವತಿ ಮೋಮಿನ್ ಮೊಹಲ್ಲಾದ ಇಲಿಯಾಜ್ ಬೇಗ್ ಯಾನೆ ಇಲ್ಲು, ಸಮೀರ್ ಖಾನ್ ಯಾನೆ ಮೋಟಾ ಸಮೀರ್, ಕೇರಳ ರಾಜ್ಯದ ಮಲಪ್ಪುರಂನ ಸೈನುದ್ದೀನ್ ಯಾನೆ ಸೈನು , ಶಿವಮೊಗ್ಗದ ಜೆಪಿ ನಗರದ ಅರ್ಬಾಜ್ ಯಾನೆ ಹಜರತ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಕೆಳದಿ ಕೆರೆಯಲ್ಲಿ ಶವ ಪತ್ತೆ!
ಸಾಗರ : ಸಾಗರ ತಾಲೂಕಿನ ಕೆಳದಿ ಗ್ರಾಮಪಂಚಾಯಿತಿ ಕೆಳದಿ ಕೆರೆಯಲ್ಲಿ ಪುರುಷನ ಶವ ಪತ್ತೆಯಾಗಿದೆ ಮೂಲತಃ ಚಿಕ್ಕಬಳ್ಳಾಪುರದ ಚೆಲುವನೇನ ಹಳ್ಳಿವ್ಯಕ್ತಿ ಕಿಶೋರ್ ಮೂವತ್ತೆರಡು ವರ್ಷ ಬಂದಗದ್ದೆ
ಮಹಿಳೆಯನ್ನು ಮದುವೆ ಆಗಿದ್ದ ಎಂದು ಸ್ಥಳಿಯರ ಮಾಹಿತಿ ಸ್ಥಳಕ್ಕೆ ಸಾಗರದ ಗ್ರಾಮಾಂತರ ಪೋಲಿಸ್ ಬೇಟಿ ನೀಡಿ ಪರಿಶೀಲನೆ ನೆಡೆಸುತಿದ್ದಾರೆ ಎಂದು ಮಾಹಿತಿ.
ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಆಕ್ಸಿಡೆಂಟ್ ರೂಪದಲ್ಲಿ ಕೊಲೆ!
ಶಿಕಾರಿಪುರ : ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿ, ಇನ್ನೊಬ್ಬರ ಸಂಸಾರ ಹಾಳು ಮಾಡಬೇಡ ಎಂದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಘಟನೆ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಂದ್ರನಾಯ್ಕ್ ಎಂಬವರು ಕೊಲೆಯಾದ ದುರ್ಧೈವಿ. ಈ ಮೊದಲು ಪ್ರಕರಣವನ್ನು ಹಿಟ್ ಆ್ಯಂಡ್ ರನ್ ಕೇಸ್ ಎಂದುಕೊಳ್ಳಲಾಗಿತ್ತು. ಆನಂತರ ಗಾಯಾಳು ಹೇಳಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇದೊಂದು ಕೊಲೆ ಎಂದು ಪತ್ತೆಮಾಡಿದ್ದಾರೆ.
ಸಿಗಂದೂರು ಲಾಂಚ್ ಸೇವೆ ಆರಂಭ.ನಿಟ್ಟುಸಿರು ಬಿಟ್ಟ ಸ್ಥಳೀಯರು, ಭಕ್ತರು.
ತುಮರಿ : ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಮುಪ್ಪಾನೆ ಲಾಂಚ್ ಸೇವೆ ಪುನಾರಂಭವಾಗುತ್ತಿದೆ. ತುಮರಿ ಗ್ರಾಮ ಪಂಚಾಯಿತಿಯಿಂದ ಕಾರ್ಗಲ್ಗೆ ಸಂಪರ್ಕ ಕಲ್ಪಿಸುತ್ತಿತ್ತು. ಸೆ. 3ರಿಂದ ಎಂದಿನಂತೆ ಹಲ್ಲೆ, ಮುಪ್ಪಾನೆ ಲಾಂಚ್ ಕಾರ್ಯನಿರ್ವಹಿಸಲಿದೆ. ಆಗಸ್ಟ್ 25ರಂದು ಮುಪ್ಪಾನೆ ಲಾಂಚ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಸೇವೆ ಸ್ಥಗಿತಗೊಂಡಿತ್ತು. ಲಾಂಚ್ ಸೇವೆ ಇಲ್ಲದೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗಿತ್ತು. ಈಗ ಲಾಂಚ್ ಪುನಾರಂಭ ಆಗುತ್ತಿದ್ದು ಸ್ಥಳೀಯ ನಿವಾಸಿಗಳು, ಸಿಗಂದೂರು ಪ್ರವಾಸಿ ನಿಟ್ಟುಸಿರು ಬಿಡುವಂತಾಗಿದೆ.