ಪತ್ನಿ ಸಾವಿನ ನೋವಿಗೆ ಸಮವಸ್ತ್ರದಲ್ಲೇ ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ!
– ಶಿವಮೊಗ್ಗದಲ್ಲಿ ನಡೆದ ಕರುಣಾಜನಕ ಘಟನೆ
– ತೀರ್ಥಹಳ್ಳಿಯಲ್ಲಿ ಪ್ರಧಾನಿಗೆ ರಕ್ತದಲ್ಲಿ ಬರೆದ ಪತ್ರ!
– ಕಾವೇರಿಗಾಗಿ ಕರವೇ ಕಾರ್ಯಕರ್ತರ ಹೋರಾಟ
NAMMUR EXPRESS NEWS
ಶಿವಮೊಗ್ಗ: ಕರ್ತವ್ಯ ಮುಗಿಸಿಕೊಂಡು ಬಂದಿದ್ದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾಸ್ಟೇಬಲ್ ಜಯಪ್ಪ ಉಪ್ಪಾರ್ (43) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿನೋಬ ನಗರದ ಮನೆಯಲ್ಲಿ ಜಯಪ್ಪನವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮೂರು ದಿನಗಳ ಹಿಂದೆ ಜಯಪ್ಪ ಅವರ ಪತ್ನಿ ಮೆದುಳು ಜ್ವರದಿಂದ ಸಾವನ್ನಪ್ಪಿದ್ದರು. ಪತ್ನಿಯ ಅಗಲಿಕೆಯಿಂದ ಜಯಪ್ಪ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಜಯಪ್ಪನವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಭಾನುವಾರ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿರುವ ಅವರು ಸಮವಸ್ತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತೀರ್ಥಹಳ್ಳಿಯಲ್ಲಿ ಪ್ರಧಾನಿಗೆ ರಕ್ತದಲ್ಲಿ ಬರೆದ ಪತ್ರ!
ತೀರ್ಥಹಳ್ಳಿ: ತೀರ್ಥಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ವತಿಯಿಂದ ಕಾವೇರಿ ನೀರು ಬಿಡದಂತೆ ಪ್ರಧಾನಿ ಯವರಿಗೆ ರಕ್ತದ ಮೂಲಕ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾವೇರಿ ಸಂಕಷ್ಟ ಸೂತ್ರವನ್ನು ಜಾರಿಗೊಳಿಸಿ, ಕಾವೇರಿ ನಮ್ಮದು, ರಕ್ತ ಕೊಟ್ಟೆವು/ ಕಾವೇರಿ ಬಿಡೆವು ಎಂದು ಘೋಷಣೆ ಮೊಳಗಿಸಿದ್ದಾರೆ. ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು, ಪ್ರಮುಖರಾದ ವೆಂಕಟೇಶ್ ಹೆಗ್ಡೆ, ಜ್ಯೋತಿ ದಿಲೀಪ್, ಮಲ್ಲಕ್ಕಿ ರಾಘವೇಂದ್ರ ಇತರರು ಇದ್ದರು.