ಮೀನು ಹಿಡಿಯಲು ಹೋದ ಇಬ್ಬರು ನೀರು ಪಾಲು!
– ಸಾಗರ: ಗಣೇಶನ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು!
– ಶಿಕಾರಿಪುರ: ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!
– ಭದ್ರಾವತಿ: ಮಹಿಳೆಯೋರ್ವಳ ಕೊಲೆ
NAMMUR EXPRESS NEWS
ಶಿವಮೊಗ್ಗ : ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಮೀನುಗಾರರು ನೀರುಪಾಲಾದ ಘಟನೆ ನಗರದ ಕುರುಬರ ಪಾಳ್ಯ ಬಳಿ ನಡೆದಿದೆ. ಫಯಾಜ್ ಅಹ್ಮದ್ ಅಂಜುಂ ಖಾನ್ ನೀರುಪಾಲಾದ ಮೀನುಗಾರರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ದೊಡ್ಡಪೇಟೆ ಠಾಣಾ ಪೊಲೀಸರು ನೀರುಪಾಲಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ತುಂಗಾ ನದಿ ದಂಡೆ ಮೇಲೆ ಮೊಬೈಲ್ ಹಾಗೂ ಬಟ್ಟೆಗಳು ಪತ್ತೆಯಾಗಿವೆ. ಮೀನು ಹಿಡಿಯಲು ಹೋದ ವೇಳೆ ಯುವಕರು ನೀರು ಪಾಲಾಗಿದ್ದಾರೆ. ಸದ್ಯ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಕಾರ್ಯ ನಡೆಸುತ್ತಿದ್ದಾರೆ.
ಗಣೇಶನ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು!
ಸಾಗರ : ಗಣೇಶನ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ತಾಲೂಕಿನ ಅನಂದಪುರ ಬಳಿಯ ಜೇಡಿಸರದಲ್ಲಿ ನಡೆದಿದೆ. ಸತೀಶ್ ಗೌಡ ನೀರು ಪಾಲಾದ ವ್ಯಕ್ತಿ. ಗಣಪತಿ ವಿಸರ್ಜನೆಗಾಗಿ ಆಳ ನೋಡಲು ಕೆರೆಗೆ ಇಳಿದಿದ್ದ ಸತೀಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಡುಗೆ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಸತೀಶ್ ತಮ್ಮ ಭಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗಾಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!
ಶಿಕಾರಿಪುರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಅಳವಡಿಸಿಕೊಂಡು, ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದ, ಬೈಕ್ ಸವಾರರಿಗೆ ಶಾಕ್ ನೀಡುವ ಕಾರ್ಯಕ್ಕೆ ಜಿಲ್ಲೆಯ ಶಿಕಾರಿಪುರ ಉಪ ವಿಭಾಗ ಪೊಲೀಸರು ಚಾಲನೆ ನೀಡಿದ್ದಾರೆ. ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ಮೂಲಕ, ಡಿಫೆಕ್ಟಿವ್ (ದೋಷಪೂರಿತ) ಹಾಗೂ ಮಾಡಿಫೈಡ್ (ಮಾರ್ಪಾಡು) ಸೈಲೆನ್ಸರ್ ಗಳನ್ನು ಶಿಕಾರಿಪುರ ಪಟ್ಟಣ ಹಾಗೂ ತಾಲೂಕಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದಿದ್ದ ದೋಷಪೂರಿತ – ಮಾರ್ಪಾಡು ಸೈಲೆನ್ಸರ್ ಗಳನ್ನು ಸೆ. 17 ರಂದು ಸಂಜೆ ಶಿಕಾರಿಪುರ ಪಟ್ಟಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಬುಲ್ಡೋಜರ್ ಹರಿಸಿ ಪೊಲೀಸರು ನಾಶಗೊಳಿಸಿದ್ದಾರೆ. ಒಟ್ಟಾರೆ 20 ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶಗೊಳಿಸಲಾಗಿದೆ.
ಭದ್ರಾವತಿ ಭಾಗದಲ್ಲಿ ಮಹಿಳೆಯೋರ್ವಳ ಕೊಲೆ
ಭದ್ರಾವತಿ: ಗ್ರಾಮಾಂತರ ಭಾಗದಲ್ಲಿ ಮಹಿಳೆಯೋರ್ವಳ ಕೊಲೆ ನಡೆದಿದೆ. ಜೊತೆಗಿದ್ದವನೆ ಕುತ್ತಿಗೆ ಹಿಚುಕಿ ಹಾಗೂ ಹೊಟ್ಟೆಗೆ ಬಲವಾಗಿ ಒದ್ದು ಮಹಿಳೆಯ ಕೊಲೆ ಮಾಡಲಾಗಿದೆ. ಆರೋಪಿತ ಪೊಲೀಸರ ಬಂಧಿಯಾಗಿದ್ದಾನೆ. ಭದ್ರಾವತಿಯ ಸಂಕ್ಲೀಪುರದಲ್ಲಿ ಎಂಪಿಎಂನ ನೀಲಗಿರಿ ಮರಗಳ ಕಟ್ ಮಾಡುವ ಕೆಲಸಕ್ಕೆ ಬಂದಿದ್ದ ರೂಪಳಿಗೆ(30) ಸಿಂಗಾರಿ(35) ಎಂಬಾತನೊಂದಿಗೆ ಕಳೆದ ಎರಡು ವರ್ಷದಿಂದ ಜೊತೆಯಲ್ಲೇ ವಾಸವಾಗಿದ್ದರು. ಮೇಸ್ತ್ರಿಯ ಕೆಳಗೆ ಇಬ್ವರು ನೀಲಿಗಿರಿ ಕಟ್ ಮಾಡುವ ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಸಂಜೆ ಮೇಸ್ತ್ರಿಯಿಂದ ಸಂಬಳವಾಗಿದ್ದು ಇಬ್ಬರು ಮದ್ಯ ಸೇವಿಸಿ ಪರಸ್ಪರ ಗಲಾಟೆಗೆ ಬಿದ್ದಿದ್ದಾರೆ. ಗಲಾಟೆಯಿಂದಾಗಿ ಸಿಂಗಾರಿ ರೂಪಳ ಕುತ್ತಿಗೆ ಹಿಸುಕಿ ಹಾಗೂ ಕಾಲಿನಲ್ಲಿ ಒದ್ದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ರೂಪಳಿಗೂ ಗಂಡನಿರಲಿಲ್ಲ. ಸಿಂಗಾರಿಗೂ ಪತ್ನಿ ಇರಲಿಲ್ಲ. ಇಬ್ಬರೂ ಸಹ ಒಟ್ಟಿಗೆ ವಾಸವಾಗಿದ್ದರು. ರೂಪ ಚಿತ್ರದುರ್ಗ ಜಿಲ್ಲೆಯ ಭರ್ಮಸಾಗರದ ನಿವಾಸಿ ಎಂದು ತಿಳಿದು ಬಂದಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರುದಾಖಲಾಗಿದೆ. ಆರೋಪಿ ಸಿಂಗಾರಿಯನ್ನ ಬಂಧಿಸಲಾಗಿದೆ.