ವಿದ್ಯುತ್ ತಗುಲಿ ಇಬ್ಬರು ಸಾವು!
– ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವಿನ ವೇಳೆ ನಡೆದ ದುರಂತ
– ಮಲೆನಾಡಲ್ಲಿ ವಿದ್ಯುತ್ ಬಗ್ಗೆ ಎಚ್ಚರ ಎಚ್ಚರ!
– ಪೊಲೀಸಪ್ಪನ ಲವ್ ಸ್ಟೋರಿ ಈಗ ಠಾಣೆ ಮೆಟ್ಟಿಲೇರಿತು!
NAMMUR EXPRESS NEWS
ಶಿವಮೊಗ್ಗ: ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕಟಾವು ಮಾಡಲು ಹೋಗಿದ್ದ ಇಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ನಗರದ ಊರುಗಡೂರ್ ಬಳಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಓರ್ವರು ಗುಂಟೂರು ಮೂಲದ ಚಲ್ಲಾ ಸೋಮಶೇಖರ್ ಎಂದು ಗೊತ್ತಾಗಿದ್ದು, ಇನ್ನೊಬ್ಬರ ಸುಳಿವು ಸಿಗಬೇಕಿದೆ.
ಘಟನೆಯಲ್ಲಿ ಮರ ಕಡಿಯುತ್ತಿರುವ ಸಂದರ್ಭದಲ್ಲಿ ಮೇನ್ ಲೇನ್ ಸಂಪರ್ಕಗೊಂಡಿದ್ದು, ಅದರಿಂದ ಹರಿದ ವಿದ್ಯುತ್ನಿಂದಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ತಕ್ಷಣವೇ ಸ್ಥಳೀಯರು 108 ಗೆ ಕರೆ ಮಾಡಿ ಆ್ಯಂಬುಲೆನ್ಸ್ನ್ನ ಕರೆಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಇಬ್ಬರನ್ನು ಶಿಫ್ಟ್ ಮಾಡಲಾಗಿದ್ದು, ಅಲ್ಲಿನ ವೈದ್ಯರು ಇಬ್ಬರು ಮೃತಪಟ್ಟಿರುವುದನ್ನ ದೃಡಿಕರಿಸಿದ್ದಾರೆ.
ತುಂಗಾ ನಗರ ಪೊಲೀಸ್ ಸ್ಟೇಷನ್ನಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ಪೊಲೀಸಪ್ಪ ನಾಪತ್ತೆ.!
ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್ಟೇಬಲ್ ಒಬ್ಬರು 41 ವರ್ಷದ ವಿವಾಹಿತ ಮಹಿಳೆ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡು, ಈಗ ನಾಪತ್ತೆಯಾಗಿದ್ದಾರೆ. ಇತ್ತ ಮಹಿಳೆ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾಳೆ.
ಕಾನ್ಸ್ಟೇಬಲ್ ಅಶೋಕ್ ಎಂಬಾತ ಮಹಿಳೆಗೆ ಕೈಕೊಟ್ಟು ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದಾನೆ.
ಚಾಮರಾಜನಗರ ತಾಲೂಕಿನ ಗ್ರಾಮವೊಂದರ 41 ವರ್ಷದ ಮಹಿಳೆ ಹಾಗೂ ಕಾನ್ಸ್ಟೇಬಲ್ ಅಶೋಕ್ ಕಳೆದ 2020 ರಿಂದ ಪರಿಚಿತರಾಗಿದ್ದು ಪರಿಚಯ ವಿವಾಹೇತರ ಸಂಬಂಧದ ತನಕ ಹೋಗಿದೆ.
ಕಳೆದ ಕೆಲವು ತಿಂಗಳುಗಳಿಂದ ಚಾಮರಾಜನಗರದಲ್ಲೇ ಮನೆ ಮಾಡಿ ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದರು. ಈ ವೇಳೆ ಅಶೋಕ್ ದೇವರ ಫೋಟೋ ಮುಂದೆ ಅರಿಶಿನ ಕೊಂಬು ಕಟ್ಟಿದ್ದ ಎನ್ನಲಾಗಿದೆ. ಆದರೆ, ಪೋಷಕರ ಒತ್ತಾಯದಿಂದ ಅಶೋಕ್ ಪ್ರೇಯಸಿ ಜೊತೆ ಅಂತರ ಕಾಯ್ದುಕೊಂಡು ಬೇರೆ ಮದುವೆಯಾಗಲು ರೆಡಿಯಾಗಿದ್ದು, ತನಗೇ ಆತನ ಜೊತೆಯೇ ಜೀವನ ಸಾಗಿಸಬೇಕೆಂದು ವಿವಾಹಿತೆ ಪಟ್ಟು ಹಿಡಿದಿದ್ದಾಳೆ.
ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಅಶೋಕ್ ಸೇರಿದಂತೆ ಅವರ ಪಾಲಕರ ವಿರುದ್ಧ ಮಹಿಳೆ ದೂರು ನೀಡಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023