ಚೆಸ್ ಲೋಕಕ್ಕೆ 18ರ ಹುಡುಗ ಗುಕೇಶ್ ಸಾಮ್ರಾಟ!
– ಸ್ಮಾರ್ಟ್ ಫೋನ್ ಅಲ್ಲ, ಚೆಸ್ ಬೆರಳಲ್ಲಿ ಹಿಡಿದ ಡಿ ಗುಕೇಶ್
– ದೇಶಕ್ಕೆ ಮಾದರಿಯಾದ ತಮಿಳುನಾಡು ಹುಡುಗ
NAMMUR EXPRESS NEWS
ಸಿಂಗಾಪುರ: ಸಿಂಗಾಪುರದಲ್ಲಿ ನಡೆದ ಚೆಸ್ ಚಾಂಪಿಯನ್ ಶಿಪ್ ನಲ್ಲಿ 18ರ ಹರೆಯದ ಡಿ ಗುಕೇಶ್, ಚೀನಾದ ಡಿಂಗ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಭಾರತದಲ್ಲಿ ಸಾಮಾಜಿಕ ಜಾಲ ತಾಣ, ಬೆಟ್ಟಿಂಗ್, ಶೋಕಿ ಹುಚ್ಚಿಗೆ ಇಂದಿನ ಯುವ ಜನತೆ ತಮ್ಮ ಜೀವನ ಹಾಗೂ ಜೀವ ಕಳೆದುಕೊಳ್ಳುತ್ತಿರುವ ನಡುವೆ ಗುಕೇಶ್ ಸಾಧನೆ 70 ಕೋಟಿಗೂ ಹೆಚ್ಚಿರುವ ಭಾರತಕ್ಕೆ ಮಾದರಿ ಆಗಿದೆ. ದೊಮ್ಮರಾಜು ಗುಕೇಶ್ ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದು 29 ಮೇ 2006ರಲ್ಲಿ ಜನಿಸಿದವರು. ತಂದೆ ರಜನಿಕಾಂತ್ ಮತ್ತು ತಾಯಿ. ಡಾ. ಪದ್ಮ ಕುಮಾರಿ, ಚೆನ್ನೈ ತಮಿಳ್ ನಾಡಿನವರಾಗಿದ್ದು, ಇಂದು ಇಡೀ ದೇಶವೇ ಗುರುತಿಸುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
18ನೇ ವಯಸ್ಸಿನಲ್ಲಿ ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಟೈಮ್ ಪಾಸ್ ಮಾಡುವ ಆಧುನಿಕ ಯುಗದಲ್ಲಿ ಅಲ್ಲೊಬ್ಬ ಭಾರತೀಯ ಸಾಮ್ರಾಟ ಎಂದೆನಿಸಿಕೊಂಡಿದ್ದಾನೆ. ಡಿ ಗುಕೇಶ್ ಅವರು 2017ರಲ್ಲಿ ತಾನೊಬ್ಬ ಚೆಸ್ ಚಾಂಪಿಯನ್ ಆಗಬೇಕು ಎಂದು ಹೇಳಿಕೊಂಡಿದ್ದರು. ಅದೇ ರೀತಿ 2024ರ ವೇಳೆಯಲ್ಲಿ ಇಡೀ ದೇಶವೇ ಗುರುತಿಸುವಂತೆ ಹೊಸ ಕ್ರೀಡಾ ತಾರೆಯಾಗಿ ಹೊರಹೊಮ್ಮಿದ್ದಾರೆ. ವಯಸ್ಸು 16 ಕಳೆದು 17ಕ್ಕೆ ಕಾಲಿಡುತ್ತಿದ್ದಂತೆ ಮನಸ್ಸು ಇಲ್ಲಸಲ್ಲದನ್ನು ಬೇಡಲು ಶುರು ಮಾಡುತ್ತದೆ. ಈಗಿನ ಸ್ಮಾರ್ಟ್ ಕಾಲದಲ್ಲಿ ಕಾಲೇಜಿನ ಮೆಟ್ಟಿಲೇರುವ ಯುವ ಮನಸುಗಳ ಮೊದಲ ಆದ್ಯತೆ ಸೆಲ್ ಫೋನ್ ಗಳು. ಕಂಪ್ಯೂಟರ್ ಯುಗದ ಜಾಯಮಾನದಲ್ಲಿ ಮೊಬೈಲ್ ಫೋನ್ ಗಳದ್ದೇ ಹಾವಳಿ. ಹತ್ತಾರು ಕನಸುಗಳನ್ನು ಕಟ್ಟಿಕೊಂಡು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕಾಲೇಜುಗಳನ್ನು ಸೇರುವ ವಿದ್ಯಾರ್ಥಿಗಳ ಮನಸ್ಸು ಕಾಲೇಜ್ ಮುಗಿಸುವವರೆಗೂ ಇರುವುದಿಲ್ಲ.
ಮನೆ ಪರಿಸ್ಥಿತಿ ಹೇಗೆ ಇದ್ದರೂ ಸ್ಮಾರ್ಟ್ ಫೋನ್ ಗಳು ಬೇಕೇ ಬೇಕು! ಬೆರಳುಗಳು ಮೊಬೈಲ್ ನ ಕೀಲಮಣಿಗಳ ಮೇಲೆ ಹರಿದಾಡುತ್ತಿರುತ್ತದೆ. ಆದರೆ ಇಲೊಬ್ಬ ಚೆಸ್ ಹಿಡಿದು ತನ್ನ ಗುರಿಯನ್ನು ಸಾಧಿಸಿ ದೇಶಕ್ಕೆ ಮಾದರಿಯಾಗಿದ್ದಾರೆ. ಏನೇ ಇರಲಿ ಪ್ರತಿ ಯುವ ಜನತೆಗೆ ಗುಕೇಶ್ ಮಾದರಿ. ಹಳ್ಳಿ ಹಳ್ಳಿಯಲ್ಲೂ ಯುವ ಜನತೆ ಸಾಧನೆ ಮಾಡಬೇಕು. ಒಳ್ಳೆ ಕೆಲಸ ಮಾಡಬೇಕು, ಸ್ವ ಉದ್ಯೋಗ ಹುಡುಕಬೇಕು. ತಮ್ಮ ಜ್ಞಾನ ವೃದ್ಧಿ ಮಾಡಿಸಿಕೊಳ್ಳಬೇಕು. ಆಗ ಅವರಿಗೆ, ಅವರ ಪೋಷಕರಿಗೆ, ದೇಶಕ್ಕೆ ಅಸ್ತಿಯಾಗುತ್ತಾರೆ.
ಹ್ಯಾಟ್ಸ್ ಆಫ್ ಗುಕೇಶ್…!