ಸಂಭ್ರಮದ ಯುಗಾದಿ ಆಚರಣೆ..!
– ದೇವಸ್ಥಾನಗಲ್ಲಿ ವಿಶೇಷ ಪೂಜೆ: ಮನೆ ಮನೆಯಲ್ಲೂ ಸಂಭ್ರಮ
– ಮಾವಿನೆಲೆಯ ತೋರಣದಿಂದ ಸಿಂಗಾರಗೊಂಡ ಮನೆಗಳು
NAMMUR EXPRESS NEWS
ರಾಜ್ಯಾದ್ಯಂತ ಮಂಗಳವಾರ ಶ್ರದ್ಧೆಯಿಂದ ಯುಗಾದಿ ಆಚರಣೆ ನಡೆಯಿತು. ಜನರು ಹೊಸ ವರ್ಷವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದರು, ಉಳಿದ ವರ್ಷವು ಉತ್ತಮವಾಗಲಿ ಎಂದು ಹಾರೈಸಿದರು. ಮುಂಜಾನೆಯಿಂದಲೇ ಜನರು ತಮ್ಮ ಮನೆಗಳನ್ನು ಮಾವಿನ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಿ ಹೊಸ ಬಟ್ಟೆ ಧರಿಸಿ ವಿವಿಧ ಬಗೆಯ ಅಡುಗೆ ಮಾಡಿ ಊಟ ಮಾಡುವ ಮೂಲಕ ಶುಭ ದಿನವನ್ನು ಆಚರಿಸಿದರು. ಜೀವನವು ಸಂತೋಷ ಹಾಗೂ ದುಃಖದ ಮಿಶ್ರಣವಾಗಿದೆ ಎಂದು ಸೂಚಿಸುವ ಬೇವು ಬೆಲ್ಲವನ್ನು ಸಮನಾಗಿ ಸ್ವೀಕರಿಸಿ ಸಂಭ್ರಮಿಸಿದರು. ತಮ್ಮ ಅಕ್ಕ ಪಕ್ಕದ ಮನೆಗಳಿಗೆ ಹಂಚಿದರು.
ಇನ್ನು ದೇವಾಲಯಗಳು ಬೆಳಗಿನಿಂದಲೇ ವಿಶೇಷ ಪೂಜೆ ಸಲ್ಲಿಸಿದ ಭಕ್ತರಿಂದ ತುಂಬಿ ತುಳುಕುತ್ತಿದ್ದವು. ದೇವಾಲಯಗಳಲ್ಲಿ ಬೆಳಗಿನಿಂದಲೆ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಬಸ್, ರೈಲು ರಶ್ ರಶ್!
ಯುಗಾದಿ ಹಬ್ಬಕ್ಕೆ ಊರಿಗೆ ಬಂದ ಜನ ಮರಳಿ ಬೆಂಗಳೂರು ಸೇರಿದಂತೆ ವಿವಿಧ ಕಡೆ ಪಯಣ ಬೆಳೆಸುವ ಕಾರಣ ಬಸ್, ರೈಲು, ಸರ್ಕಾರಿ ಬಸ್ ಫುಲ್ ರಶ್ ಆಗಿವೆ.