ರಾಜ್ಯದಲ್ಲಿ ಮತ್ತೆ ಡೆಂಘಿ ಅಬ್ಬರ: 2,500 ಪ್ರಕರಣಗಳು ದಾಖಲು
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ನಿತ್ಯ ಸರಾಸರಿ 50 ಮಂದಿಯಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗುತ್ತಿದೆ. ಜೊತೆಗೆ ರಾಜ್ಯದಲ್ಲಿಯೂ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಏಪ್ರಿಲ್ 10 ರಿಂದ ಮೇ. 10 ರವರೆಗೆ ಬೆಂಗಳೂರಿನಲ್ಲಿ 950 ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ 2,500 ರ ಗಡಿ ದಾಟಿವೆ.
ಹೆಣ್ಣು ಸೊಳ್ಳೆಯಿಂದ ಡೆಂಗ್ಯೂ ಡೆಂಗ್ಯೂ.!
ಡೆಂಗ್ಯೂ ರೋಗವು ಈಡಿಸ್ ಈಡಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಈ ಸೋಂಕಿತ ಸೊಳ್ಳೆ ವ್ಯಕ್ತಿಯನ್ನ ಕಚ್ಚಿದ ನಂತ್ರ ಸೋಂಕಿತ ವೈರಸ್’ನ್ನ ಅವನ ದೇಹದಲ್ಲಿ ಬಿಡುತ್ತದೆ. ಡೆಂಗ್ಯೂ ಬಂದಾಗ ರಕ್ತದಲ್ಲಿನ ಪ್ಲೇಟ್ಲೆಟ್ಗಳು ವೇಗವಾಗಿ ಕಡಿಮೆಯಾಗುತ್ವೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು 1.5 ಲಕ್ಷದಿಂದ 4.5 ಲಕ್ಷದವರೆಗೆ ಪ್ಲೇಟ್ಲೆಟ್ಗಳನ್ನ ಹೊಂದಿರಬೇಕು, ಆದರೆ ಡೆಂಗ್ಯೂನಲ್ಲಿ, ಇದು ಬಹಳ ವೇಗವಾಗಿ ಕಡಿಮೆಯಾಗುತ್ತದೆ, ಕೆಲವೊಮ್ಮೆ ಕೇವಲ 10 ರಿಂದ 20 ಸಾವಿರ ಪ್ಲೇಟ್ಲೆಟ್ ಗಳು ರೋಗಿಯಲ್ಲಿ ಉಳಿಯುತ್ತವೆ. ಇದು ದೇಹದ ವಿವಿಧ ಭಾಗಗಳಿಂದ ರಕ್ತಸ್ರಾವದ ಅಪಾಯವನ್ನ ಹೆಚ್ಚಿಸುತ್ತದೆ. ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳಲು 5 ರಿಂದ 7 ದಿನಗಳು ಬೇಕಾಗುತ್ತದೆ.