ಮತ್ತೆ ಮೊಳಗಲಿದೆ ಜೈ ಶ್ರೀರಾಮ್ ಘೋಷ!
– ಏ.ಪ್ರಿಲ್ 17ಕ್ಕೆ ಶ್ರೀ ರಾಮ ನವಮಿ ಸಂಭ್ರಮ
– ಬಿಜೆಪಿಗೆ ಈ ರಾಮ ನವಮಿ ಲಾಭ ಆಗುತ್ತಾ?
NAMMUR EXPRESS NEWS
ಏ.ಪ್ರಿಲ್ 17ಕ್ಕೆ ಶ್ರೀ ರಾಮನವಮಿ. ಪ್ರತಿ ವರ್ಷವೂ ರಾಮನವಮಿಯನ್ನು ದೇಶದ ಬೀದಿ ಬೀದಿಯಲ್ಲಿ ಆಚರಿಸಲಾಗುತ್ತದೆ . ಪಾನಕ – ಮಜ್ಜಿಗೆ ಹಂಚುವ ಮೂಲಕ ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿ, ಸಂಭ್ರಮ ಸಡಗರದಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿಯ ರಾಮನವಮಿ ಬಿಜೆಪಿಯ ಪಾಲಿಗೆ ಮಹತ್ತರ ನವಮಿಯಾಗಲಿದೆ. ಜನವರಿ 22 2024 ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆಗೊಳಿಸಿದ ದಿನ. ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ದಿನ. ಬಹುದೊಡ್ಡ ಶತಮಾನಗಳ ಹೋರಾಟವೊಂದಕ್ಕೆ ಫಲ ಸಿಕ್ಕದಿನ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ , ಆ ಭರವಸೆಯನ್ನು ಈಡೇರಿಸಿದ್ದ ದಿನ. ಹೀಗಾಗಿ ಈ ರಾಮ ನವಮಿ ವಿಶೇಷವಾಗಿದೆ.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ , ದೇಶದಲ್ಲಿ ಚುನಾವಣೆ ನಡೆದಿದ್ದರೆ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವರದಿಗಳು ಭಾರಿ ಸದ್ದು ಮಾಡಿದ್ದವು . ಆದರೆ ನಂತರದಲ್ಲಿ ರಾಮನ ಅಲೆ ಸ್ವಲ್ಪ ಕುಗ್ಗಿದ ಹಾಗೆ ಭಾಸವಾಗಿತ್ತು . ಇದೀಗ ಏಪ್ರಿಲ್ 17ರಂದು ರಾಮನವಮಿ ಆಚರಣೆ ಬಿಜೆಪಿಯ ಪಾಲಿಗೆ ವರವಾಗಿ ಪರಿಣಮಿಸುವ ಸಾಧ್ಯತೆಗಳು ಕಂಡುಬರುತ್ತಿದೆ.
ಜನವರಿಯಲ್ಲಿ ಇದ್ದ ಆ ರಾಮನ ಅಲೆಯನ್ನ ಮತ್ತೆ ಸೃಷ್ಟಿಸಿ ಚುನಾವಣೆಯಲ್ಲಿ ಅದರ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ , ಬಿಜೆಪಿ ಏಪ್ರಿಲ್ 17ರಂದು ದೇಶದ ಗಲ್ಲಿ ಗಲ್ಲಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಮಾಡಿ , ರಾಮನವಮಿ ಆಚರಿಸಲು ಬಿಜೆಪಿ ಮುಂದಾಗಿದೆ. ರಾಮ ನಾಮ ಜಪದ ಮೂಲಕವೇ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮತ ಕಸಿದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ ಎಂದು ಹೇಳಲಾಗುತ್ತಿದೆ.