ಲಕ್ಷಾನುಗಟ್ಟಲೆ ಹಣ ಸೀಜ್- ಲಿಕ್ಕರ್ ವಶ!
NAMMUR EXPRESS NEWS
ಶಿವಮೊಗ್ಗ: ಚುನಾವಣೆ ಮಾದರಿ ನೀತಿ ಜಾರಿಯಾದ ಬೆನ್ನಲ್ಲೇ ಅನಾಮಧೇಯ ಹಣವೊಂದು ದೊರೆತಿದೆ. ಇದರ ಜೊತೆಗೆ ಅಕ್ರಮ ಮದ್ಯ ವಶ ಪಡಿಸಿಕೊಳ್ಳಲಾಗಿದೆ.
ಒಬ್ಬ ಮನುಷ್ಯ ದಾಖಲಾತಿಯಿಲ್ಲದೆ 50 ಸಾವಿರ ರೂ. ಹಣ ಹೊತ್ತಯ್ಯಲು ನೀತಿ ಸಂಹಿತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. 50 ಸಾವಿರ ರೂ.ಗಿಂತ ಹೆಚ್ಚಿಗೆ ಹೊತ್ತಯ್ಯಲು ಸೂಕ್ತ ದಾಖಲಾತಿ ಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಜೈಲ್ ರಸ್ತೆಯಲ್ಲಿ ದೊಡ್ಡಪೇಟೆ ಪೊಲೀಸರುದಾಳಿ ನಡೆಸಿದ್ದಾರೆ.
ಷಣ್ಮುಖ ಎಂಬುವರು ಜೈಲ್ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವಾಗ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಬೈಕ್ ನ ಸೈಡ್ ಬ್ಯಾಗ್ ನಲ್ಲಿ 4 ಲಕ್ಷ ರೂ. ಪತ್ತೆಯಾಗಿದೆ. ಈ ಹಣ ನನ್ನದೆ ಎಂಬುದು ಷಣ್ಮುಖರವರ ವಾದವಾಗಿದೆ.
ಆದರೆ ಸೂಕ್ತ ದಾಖಲಾತಿ ಇಲ್ಲದ ಕಾರಣ 4 ಲಕ್ಷ ರೂ. ಹಣವನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎಫ್ಐಆರ್ ಸಹ ದಾಖಲಾಗಿದೆ.
ಲಿಕ್ಕರ್ ವಶ : ಜಿಲ್ಲೆಯ ಹಲವಾರು ಕಡೆ ಅಬಕಾರಿ ಇಲಾಖೆ ದಾಳಿ ನಡೆಸಿ 82,265 ರೂ. ಮೌಲ್ಯದ 258.18 ಅಕ್ರಮಮದ್ಯ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 16.01 ಲೀಟರ್, ಭದ್ರಾವತಿ 16.25, ಶಿವಮೊಗ್ಗ 82.08, ತೀರ್ಥಹಳ್ಳಿಯಲ್ಲಿ 28.97 ಲೀಟರ್, ಶಿಕಾರಿಪುರದಲ್ಲಿ 10.08, ಸಾಗರದಲ್ಲಿ 107.79 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.