ನೀರಿಲ್ಲ.. ನೀರಿಲ್ಲ… ಬಿಸಿಲಿನ ಶಾಖ ಆಗ್ತಿಲ್ಲ!
– ರಾಜ್ಯದಲ್ಲಿ ಬಿಸಿಲಿನ ಶಾಖಕ್ಕೆ ಬೆಂದು ಹೋದ ಜನ
– ಹೋಟೆಲ್, ಆಸ್ಪತ್ರೆಗಳಿಗೂ ತಟ್ಟಿದ ನೀರಿನ ಅಭಾವದ ಬಿಸಿ
– ಬಿಸಿಲಿನ ಹೊಡೆತಕ್ಕೆ ಎಲ್ಲೆಡೆ ಅನಾರೋಗ್ಯ!
– ಎಳನೀರಿಗೆ ಹೆಚ್ಚಿದ ಬೇಡಿಕೆ: ಎಲ್ಲೆಲ್ಲೂ ಡಿಮ್ಯಾಂಡ್
NAMMUR EXPRESS NEWS
ಬೆಂಗಳೂರು: ನೀರಿಲ್ಲ.. ನೀರಿಲ್ಲ… ಬಿಸಿಲಿನ ಶಾಖ ಆಗ್ತಿಲ್ಲ. ರಾಜ್ಯದಲ್ಲಿ ಬಿಸಿಲಿನ ಶಾಖಕ್ಕೆ ಬೆಂದು ಹೋದ ಜನ ಇದೀಗ ಹೊರಗಡೆ ಬರಲು ಕಷ್ಟವಾಗುತ್ತಿದೆ. ಹೋಟೆಲ್, ಆಸ್ಪತ್ರೆಗಳಿಗೂ ತಟ್ಟಿದ ನೀರಿನ ಅಭಾವದ ಬಿಸಿ.ಬಿಸಿಲಿನ ಹೊಡೆತಕ್ಕೆ ಎಲ್ಲೆಡೆ ಅನಾರೋಗ್ಯ. ಒಣಗಿ ನಿಂತ ಗಿಡ ಮರ, ಬೆಳೆ. ಹೀಗೆ ಆದ್ರೆ ಮುಂದೇನು? ಹೌದು. ರಾಜಧಾನಿ ಬೆಂಗಳೂರು ಸೇರಿ ಎಲ್ಲೆಡೆ ನೀರಿನ ಅಭಾವ ಶುರುವಾಗಿದೆ. ಅಪಾರ್ಟ್ಮೆಂಟ್, ಬೀದಿ ಬೀದಿಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಈ ಮಧ್ಯೆ ಸರ್ಕಾರಿ ಆಸ್ಪತ್ರೆಗಳು ಕೂಡ ನೀರಿಲ್ಲದೇ ಪರದಾಟ ನಡೆಸೋ ಸ್ಥಿತಿ ನಿರ್ಮಾಣವಾಗುತ್ತಿದೆ.
ಬೆಂಗಳೂರಿನ ಪ್ರತಿ ಏರಿಯಾ, ಮನೆ ಮನೆಗಳಲ್ಲೂ ನೀರಿನ ಅಭಾವ ತಾಂಡವವಾಡುತ್ತಿದೆ. ಈ ಮಧ್ಯೆ ಸಕಲ ಸೌಕರ್ಯಗಳೊಂದಿಗೆ ಜೀವ ಉಳಿಸಲು ಸಜ್ಜಾಗಿರುವ ಸರ್ಕಾರಿ ಆಸ್ಪತ್ರೆಗಳೂ ಕೂಡ ನೀರಿಲ್ಲದೇ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿಧಾನವಾಗಿ ನೀರಿನ ಅಭಾವ ಶುರುವಾಗಿದೆ. ಹನಿಹನಿ ಉಳಿಸುವ ಪ್ರಯತ್ನ ಆಸ್ಪತ್ರೆ ಸಿಬ್ಬಂದಿಯಿಂದ ನಡೆಯುತ್ತಿದೆ.
– ದಿನೇ ದಿನೇ ವಿವಿಧ ಕಾಯಿಲೆಗಳು ಉಲ್ಬಣ
ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿದ್ದು, ಮಕ್ಕಳು ಮತ್ತು ವೃದ್ಧರಂತಹ ದುರ್ಬಲ ಗುಂಪುಗಳ ಮೇಲೆ ಪರಿಣಾಮ ಬೀರುತ್ತಿದ್ದು, ಎಲ್ಲೆಡೆ ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ ಹೆಚ್ಚುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿದಿನ ಹೆಚ್ಚು ಹೆಚ್ಚು ರೋಗಿಗಳ ಸಂಖ್ಯೆ ವರದಿಯಾಗುತ್ತಿದೆ. ಕಾಲೋಚಿತ ಕಾಯಿಲೆಗಳಿಗೆ ವೈದ್ಯಕೀಯ ಆರೈಕೆಯನ್ನು ಪಡೆಯುವ ರೋಗಿಗಳಲ್ಲಿ ಗಮನಾರ್ಹ ಹೆಚ್ಚಳವಿದೆ .
ತಾಪಮಾನ ವ್ಯತ್ಯಾಸಗಳು ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತವೆ, ದೀರ್ಘಕಾಲದ ಪರಿಸ್ಥಿತಿಗಳನ್ನು ಹದಗೆಡಿಸುತ್ತವೆ.
ಇದರಿಂದ ಬೇಸಿಗೆಯಲ್ಲಿ ಹೆಚ್ಚಿನ ಮಟ್ಟದ ಅಲರ್ಜಿಗಳು, ಅಲರ್ಜಿಯು ಉಸಿರಾಟದ ಪರಿಸ್ಥಿತಿಗಳನ್ನು ಉಂಟುಮಾಡಬಹುದು ಮತ್ತು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ, ಜನರು ವೈರಲ್ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಬೆಚ್ಚಗಿನ ತಾಪಮಾನವು ಪ್ರತಿರಕ್ಷೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ದೀರ್ಘಕಾಲದ ಕಾಯಿಲೆಗಳು ಜನರ ಮೇಲೆ ಪರಿಣಾಮ ಬೀರುತ್ತದೆ.
ಎಳೆ ನೀರು ಬಾಟಲ್ನಲ್ಲಿ ತುಂಬಿಸಿ ಮಾರಾಟ
ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ದಣಿವಾರಿಸಿಕೊಳ್ಳಲು ಸಹಜವಾಗಿಯೇ ಜನರು ಎಳನೀರಿಗೆ ಮೊರೆ ಹೋಗುತ್ತಿದ್ದಾರೆ. ತುಮಕೂರು, ಹಾಸನ, ಮೈಸೂರು, ಮಂಡ್ಯ, ದಣ ಕನ್ನಡ, ಉಡುಪಿ ಸೇರಿ ಕೆಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿದ್ದರೂ ಬೆಂಗಳೂರಿನಲ್ಲಿ ಎಳನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ವಾರದಿಂದ ವಾರಕ್ಕೆ ದರ ಏರಿಕೆಯಾಗುತ್ತಿದೆ. ಹಲವೆಡೆ ಕೆಲ ವ್ಯಾಪಾರಿಗಳು ಮಧ್ಯವರ್ತಿಗಳಿಂದ ಎಳನೀರನ್ನು ಖರೀದಿಸಿ, ಬಳಿಕ ನೀರನ್ನು 200 ಎಂಎಲ್ನ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ. ತಂಪು ಪಾನೀಯ ಮಾರಾಟ ಕೂಡ ಜೋರಾಗಿದೆ.
ದಿನ ನಿತ್ಯದ ಚಟುವಟಿಕೆ ಅಡ್ಡಿ
ಬಿಸಿಲಿನ ಎಫೆಕ್ಟ್ ದಿನ ನಿತ್ಯದ ಚಟುವಟಿಕೆಗೆ ಅಡ್ಡಿ ಮಾಡಿದೆ. ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕ್ಷೇತ್ರಕ್ಕೆ ದೊಡ್ಡ ಹಾನಿ ಉಂಟು ಮಾಡಿದೆ.