ಶಂಕಿತ ಉಗ್ರರು ಸೆರೆ: ಬೆಂಗಳೂರಿಗೆ ಕರೆ ತಂದ ಎನ್ ಐ ಎ !
– 42 ದಿನಗಳ ಎನ್ಐಎ ಆಪರೇಷನ್: ಕೊನೆಗೂ ಸಿಕ್ಕ ಶಂಕಿತರು
– ಮಲೆನಾಡಿಗೆ ಕರೆ ತಂದು ವಿಚಾರಣೆ ಸಾಧ್ಯತೆ?!
NAMMUR EXPRESS NEWS
ರಾಜಧಾನಿಯಲ್ಲಿ ಬಾಂಬ್ ಸ್ಫೋಟ ನಡೆಸಿ ಪರಾರಿಯಾಗಿದ್ದ ಮುಸಾವೀರ್ ಹಾಗೂ ಅಬ್ದುಲ್ ಮತೀನ್ ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದು ಇದೀಗ ಎನ್ ಐ ಎ ಅಧಿಕಾರಿಗಳು ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆ ವಹಿಸಿಕೊಂಡ ಎನ್ಐಎ ಮೊದಲಿಗೆ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್ ಮುನೀರ್ನನ್ನು ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿತ್ತು. ನಂತರ ಮುನೀರ್ ಸೆಲ್ ಮೇಲೆ ದಾಳಿ ಮಾಡಿತ್ತು. ಆಗ ಅಲ್ಲಿ ಒಂದು ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್ ಪರಿಶೀಲಿಸಿದಾಗ ಹಲವು ಕೋಡ್ ವರ್ಡ್ ಸಿಕ್ಕಿತ್ತು. ಈ ಕೋಡ್ ವರ್ಡ್ ಡಿಕೋಡ್ ಮಾಡಿದಾಗ ಆರೋಪಿಗಳ ಕುರಿತು ಮಾಹಿತಿ ಸಿಕ್ಕಿತು ಎಂದು ಎನ್ಐಎ ಮೂಲಗಳು ತಿಳಿಸಿವೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಾದ ಶಿವಮೊಗ್ಗದ ಮುಸಾವಿರ್ & ಅಬ್ದುಲ್ ಮತೀನ್ ತಾಹನನ್ನು ಎನ್ಐಎ ಅಧಿಕಾರಿಗಳು ಕಳೆದ 42ದಿನಗಳಿಂದ 7 ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇವರಿಬ್ಬರ ಪತ್ತೆಗೆ ಸಾವಿರಾರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು ನಕಲಿ ದಾಖಲೆ ಸೃಷ್ಟಿಸಿ ಓಡಾಡುತ್ತಿದ್ದ ಶಂಕಿತ ಉಗ್ರರ ಚಲನ-ವಲನದ ಜಾಡು ಹಿಡಿಯುವುದ ದೊಡ್ಡ ಸವಾಲಾಗಿತ್ತು. ಶಂಕಿತರು ಬಸ್ ಹೊರತುಪಡಿಸಿ ರೈಲು, ಟ್ಯಾಕ್ಸಿ ಸೇರಿ ಇತರೆ ಯಾವುದೇ ಸಾರಿಗೆ ಬಳಸುತ್ತಿರಲಿಲ್ಲ. ಕೊಲ್ಕತ್ತಾ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್ಐಎಗೆ ಅನುಮತಿ ನೀಡಿದೆ.
ಶಿವಮೊಗ್ಗ, ತೀರ್ಥಹಳ್ಳಿಗೂ ಕರೆ ತರುತ್ತಾರಾ?
ತನಿಖೆ ಮೇಲೆ ಎನ್ಐಎ ಸದ್ಯದಲ್ಲಿಯೇ ತೀರ್ಥಹಳ್ಳಿಗೆ ಬರುವ ಸಾಧ್ಯತೆ ಇದೆ. ಮತೀನ್ ಹಾಗೂ ಶಾಜೀಬ್ನ ಕರೆದುಕೊಂಡು ತೀರ್ಥಹಳ್ಳಿಗೆ ಬರುವ ಸಾಧ್ಯತೆ ಇದ್ದು, ಮಹಜರ್ ಹಾಗೂ ಸಾಕ್ಷ್ಯ ಕಲೆ ಹಾಕಲಿದೆ ಎನ್ನಲಾಗುತ್ತಿದೆ.