ಶಿಗ್ಗಾವಿ, ಚನ್ನಪಟ್ಟಣ ಮಾಜಿ ಸಿಎಂ ಮಕ್ಕಳಿಗೆ ಸೋಲು ಸಾಧ್ಯತೆ
– ಸಂಡೂರಲ್ಲಿ ಕೈ ಮುನ್ನಡೆ: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್
– ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಕಾಂಗ್ರೆಸ್ ಟಕ್ಕರ್
– ನಿಖಿಲ್ ಕುಮಾರಸ್ವಾಮಿಗೆ ಮುಖಭಂಗ ಸಾಧ್ಯತೆ?
– ಶಿಗ್ಗಾವಲ್ಲಿ ಮಾಜಿ ಮುಖ್ಯಮಂತ್ರಿ ಮಗನಿಗೆ ಹಿನ್ನಡೆ
NAMMUR EXPRESS NEWS
ಬೆಂಗಳೂರು: ಕರ್ನಾಟಕದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ 2024ರ ನವೆಂಬರ್ 13ರಂದು ನಡೆದಿದ್ದು ನವೆಂಬರ್ 23ರಂದು ಶನಿವಾರ ಮತ ಎಣಿಕೆ ವೇಳೆ ಮೂರು ಕಡೆ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಶಿಗ್ಗಾವಿ ಮತ್ತು ಚನ್ನಪಟ್ಟಣ ಬಹುತೇಕ ಕಾಂಗ್ರೆಸ್ ಗೆಲುವಿನ ಸನಿಹ ಬಂದು ನಿಂತಿದೆ. ಆದರೆ ಕೊನೆ ಕ್ಷಣದ ರೋಚಕ ಫಲಿತಾಂಶ ನಿರೀಕ್ಷೆ ಮಾಡಬಹುದು.
ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ಒಡ್ಡಿದ್ದು, ಶಿಗ್ಗಾವಲ್ಲಿ ಕಾಂಗ್ರೆಸ್ ಗೆಲುವು ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ 94, 148, ನಿಖಿಲ್ ಕುಮಾರಸ್ವಾಮಿ 69,259 ಮತ 12 ಗಂಟೆ ವೇಳೆಗೆ
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲುವು?
ಬಿಜೆಪಿಯ ಭರತ್ ಬೊಮ್ಮಾಯಿ ಅವರು 74870, ಯಾಸಿರ್ ಪಠಾಣ್ 88,985 ಮತ ಪಡೆದು ಗೆಲುವಿನತ್ತ ಸಾಗಿದ್ದಾರೆ. ಅಧಿಕೃತ ಘೋಷಣೆ ಬಾಕಿಯಾಗಿದ್ದಾರೆ.
ಸಂಡೂರು ಅಲ್ಪ ಹಿನ್ನಡೆ
ಕಾಂಗ್ರೆಸ್ ಪಕ್ಷದ ಅನ್ನಪೂರ್ಣ ತುಕಾರಾಮ್ 83,368, ಬಿಜೆಪಿಯ ಬಂಗಾರು ಹನುಮಂತು 74,487 ಮತ ಪಡೆದಿದ್ದಾರೆ.
ಮತ ಎಣಿಕೆಯಲ್ಲಿ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ಕೊಟ್ಟಿದೆ. ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ ಹಾವು ಏಣಿ ಆಟ ಜೋರಾಗಿತ್ತು. ಇದೀಗ ಸಿಪಿ ಯೋಗೇಶ್ವರ್ ಭರ್ಜರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು ಚನ್ನಪಟ್ಟಣ ಅಖಾಡ ಭಾರೀ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಈಗ ಚನ್ನಪಟ್ಟಣ, ಶಿಗ್ಗಾಂವ, ಸಂಡೂರು ಮೂರೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.