ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.!
– ಸಿಟಿ ರವಿ ಗೆ ಲಕ್, ಸುಮಲತಾ ಗೆ ಕೋಕ್
– ಇನ್ನುಳಿದ ಅಭ್ಯರ್ಥಿಗಳು ಯಾರು…!?
NAMMUR EXPRESS NEWS
ಎಂಎಲ್ಸಿ ಚುನಾವಣೆಗೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಅದರಲ್ಲೂ ಪ್ರಮುಖವಾಗಿ ಮಂಡ್ಯ ಲೋಕಸಭಾ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಅಂತಿಮವಾಗಿ ಬಿಜೆಪಿ ವರಿಷ್ಠರು, ಮಾಜಿ ಸಚಿವ ಸಿ.ಟಿ ರವಿ( ಒಕ್ಕಲಿಗ ಸಮುದಾಯ), ಎನ್.ರವಿಕುಮಾರ್ (ಗಂಗಾಮತಸ್ಥ) ಮತ್ತು ಎಂ.ಜಿ ಮೂಳೆ (ಮರಾಠಾ) ಅವರಿಗೆ ಮಣೆ ಹಾಕಲಾಗಿದೆ ಹೀಗಾಗಿ ಹಲವರಿಗೆ ಭಾರಿ ನಿರಾಸೆಯಾಗಿದೆ.
ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ನಾಪಮತ್ರ ಸಲ್ಲಿಸಲು ನಾಳೆಯೇ(ಜೂನ್ 03) ಕೊನೆ ದಿನವಾಗಿದೆ. ನಾಮಪತ್ರ ಸಲ್ಲಿಸಲು ಕೊನೆ ದಿನಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಹೈಕಮಾಂಡ್ ಕೊನೆಗೂ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಮಣೆ ಹಾಕಿದೆ. ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ. ಹೀಗಾಗಿ ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಎನ್ ರವಿ ಕುಮಾರ್ ಅವರಿಗೆ ಮತ್ತೊಮ್ಮೆ ಅವಕಾಶ ಕೊಟ್ಟರೆ, ಸಿಟಿ ರವಿ ಅವರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ.
ಆದರೆ ಮಂಡ್ಯ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್ಗೆ ನಿರಾಸೆಯಾಗಿದೆ. ಮುಂದೆ ಇವರಿಗೆ ಯಾವ ಹುದ್ದೆ ನೀಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಕೋರ್ ಕಮಿಟಿ ಸಭೆಯಲ್ಲೂ ಬಿ ಎಸ್ ಯಡಿಯೂರಪ್ಪರು ಸಹ ಸಿ ಟಿ ರವಿಯವರ ಹೆಸರು ಉಲ್ಲೇಖಿಸಿದ್ದ ಪಟ್ಟಿಯಲ್ಲಿ ಸಿಟಿ ರವಿ, ಲೋಕಸಭಾ ಟಿಕೆಟ್ ವಂಚಿತ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ಹೆಸರುಗಳನ್ನು ಸಹ ಹೈಕಮಾಂಡ್ಗೆ ಕಳುಹಿಸಲಾಗಿತ್ತು. ಅಂತಿಮವಾಗಿ ಹೈಕಮಾಂಡ್ ಸಿಟಿ ರವಿಗೆ ಅವಕಾಶ ನೀಡಿದೆ.