ರಾಮ ಮಂಟಪ ಮುಚ್ಚಲು 4 ಅಡಿ ಬಾಕಿ!?
– ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಭಾರೀ ಮಳೆ
– ಶೃಂಗೇರಿಯಲ್ಲಿ ದೇವಸ್ಥಾನ ಸುತ್ತಮುತ್ತ ಮುಳುಗಡೆ
– ತುಂಗಾ, ಭದ್ರಾ, ಶರಾವತಿ ನದಿ ನೀರು ಹೆಚ್ಚಳ
NAMMUR EXPRESS NEWS : ತೀರ್ಥಹಳ್ಳಿ ಸೇರಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ತೀರ್ಥಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಕೊಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಬಹುತೇಕ ಕಡೆ ಮರಗಳು ಧರೆಗೆ ಉರುಳಿವೆ. ನೂರಾರು ಹಳ್ಳಿಗಳು ವಿದ್ಯುತ್, ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಇನ್ನು ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನದಿ ತುಂಬಿ ಹರಿಯುತ್ತಿದೆ.
ಶೃಂಗೇರಿ, ಕೊಪ್ಪದಲ್ಲಿ ಭಾರೀ ಮಳೆ!
ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದೆ. ಶೃಂಗೇರಿ ದೇವಾಲಯದ ಗಾಂಧಿ ಮೈದಾನದ ಅಂಗಡಿ-ಮಳಿಗೆಗಳನ್ನು ತೆರವು ಮಾಡಲಾಗುತ್ತಿದೆ. ಜೊತೆಗೆ ಪ್ಯಾರಲಲ್ ರಸ್ತೆ ಮತ್ತು ಕರುಬಕೇರಿ ರಸ್ತೆಗಳೂ ಮುಳುಗಡೆಯಾಗಿವೆ. ಇದರಿಂದ ವಾಹನ ಸವಾರರು ಪಾರದಾಡುವಂತಾಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ ಆಗಿದೆ. ಹೆಬ್ಬಾಳ ಸೇತುವೆ ಮುಳುಗಡೆಯಿಂದ ಕಳಸ- ಹೊರನಾಡು ಸಂಪರ್ಕ ಬಂದಾಗಿದ್ದು, ಹತ್ತಾರು ಹಳ್ಳಿಗಳ ಜನ ಸಂಪರ್ಕ ಕಳೆದುಕೊಂಡಿದ್ದಾರೆ. ಅನ್ಯ ಮಾರ್ಗವಿದ್ದರೂ 8 ರಿಂದ 10 ಕಿ. ಮೀ ದೂರ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಬಂದೊದಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾರೀ ಗಾಳಿ- ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023