ಕ್ರಿಕೆಟ್ ಪಟು ಕ್ರಿಕೆಟ್ ಬೆಟ್ಟಿಂಗಿಗೆ ಬಲಿ!
– ತೀರ್ಥಹಳ್ಳಿಯಲ್ಲಿ ಬೆಟ್ಟಿಂಗ್ ಜಾಲ: ಸಾಲದಿಂದ ಮನನೊಂದು ಸಾವು
– ಮಲೆನಾಡಲ್ಲಿ ಹಬ್ಬಿದ ಕ್ರಿಕೆಟ್ ಬೆಟ್ಟಿಂಗ್ ದಂಧೆ!
– ಹುಡುಗರಿಂದ ಹಿಡಿದು ಮುದುಕರವರೆಗೆ ಬೆಟ್ಟಿಂಗ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕ್ರಿಕೆಟ್ ಕ್ರೀಡಾಪಟುವೊಬ್ಬ ಬೆಟ್ಟಿಂಗ್ ಆಡಲು ಸಾಲ ಮಾಡಿ ಸಾಲಗಾರರ ಕಿರಿಕಿರಿಯಿಂದ ಇದೀಗ ಶುಕ್ರವಾರ ನೇಣಿಗೆ ಶರಣಾಗಿದ್ದಾನೆ. ತೀರ್ಥಹಳ್ಳಿಯ ಕಟ್ಟೆಹಕ್ಲುವಿನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ 22 ವಯಸ್ಸಿನ ಮಿಥುನ್ ಶೆಟ್ಟಿ ಎಂಬ ಯುವಕ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಮ್ಮನಹಳ್ಳಿ ಸಂಜೀವ್ ಶೆಟ್ಟಿ ಅವರ ಪುತ್ರ ಮಿಥುನ್ ಶೆಟ್ಟಿ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು ಬೆಟ್ಟಿಂಗ್ ಸಾಲ ಕ್ಕೆ ಬಲಿಯಾಗಿದ್ದಾನೆ ಎನ್ನಲಾಗಿದೆ.
ಮಿಥುನ್ ಶೆಟ್ಟಿ ಉತ್ತಮ ಕ್ರಿಕೆಟ್ ಪಟುವಾಗಿದ್ದು, ಆನ್ ಲೈನ್ ಬೆಟ್ಟಿಂಗ್ ಗೆ ಬಲಿಯಾಗಿರುವುದಾಗಿ ನೆರೆಹೊರೆಯವರ ಆರೋಪವಾಗಿದೆ. ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದಾಖಲಾಗಿದ್ದೆ. ಆತನ ಆತ್ಮಹತ್ಯೆಯ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಡಿವೈಎಸ್ಪಿ ಗಜಾನನ ಸುತಾರ ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಬೆಟ್ಟಿಂಗ್!
ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಈಗ ಆನ್ಲೈನ್ ಹಾಗೂ ಆಫ್ ಲೈನ್ ಬೆಟ್ಟಿಂಗ್ ದಂಧೆ ಜೋರಾಗಿದೆ. ಅಂಗಡಿ ಕಟ್ಟೆ, ಕಾಲೇಜು, ಮನೆ ಮನೆಗಳಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಯುವ ಸಮುದಾಯ ವಿವಿಧ ಆಪ್ ಕ್ರಿಕೆಟ್ ಬೆಟ್ಟಿಂಗ್ ಆಡಲು ಅಪರಾಧಗಳಿಗೆ ಭಾಗಿಯಾಗುತ್ತಿದ್ದಾರೆ.
ಉತ್ತಮ ಕ್ರೀಡಾಪಟುವಾಗಿದ್ದ ಮಿಥುನ್!
ಕಟ್ಟೆಹಕ್ಕಲು ಸಮೀಪದ ಬೊಮ್ಮನಹಳ್ಳಿ ದೇಗುಲದ ಪಾತ್ರಿಗಳ ಪುತ್ರನಾದ ಮಿಥುನ್ ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಟೆನ್ನಿಸ್ ಬಾಲ್ ಕ್ರೀಡಾಪಟುವಾಗಿದ್ದರು. ಹಲವು ಟೂರ್ನಿ ಗೆದ್ದಿದ್ದರು. ಇದೀಗ ಕ್ರಿಕೆಟ್ ಆಟ, ಕ್ರಿಕೆಟ್ ಚಟವೇ ಬದುಕನ್ನು ತೆಗೆದಿದೆ.
2 ತಿಂಗಳ ಹಿಂದಷ್ಟೇ ಓರ್ವ ಸಾವು?
ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಡುಪಿಯಲ್ಲಿದ್ದ ಯುವಕನೊಬ್ಬ ಕ್ರಿಕೆಟ್ ಬೆಟ್ಟಿಂಗ್ ಸಾಲ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023