ಕೆಲಸಕ್ಕೆ ಸರಿಯಾದ ಟೈಮಿಗೆ ಬಾರದವರ ವಿರುದ್ಧ ಆರಗ ಗರಂ!
– ತೀರ್ಥಹಳ್ಳಿ ತಾಲೂಕು ಕಚೇರಿ ನೌಕರರಿಗೆ ಫೋನಲ್ಲೇ ಅಧಿಕಾರಿಗಳು, ನೌಕರರಿಗೆ ಚಾರ್ಜ್
– ಬಯೋಮೆಟ್ರಿಕ್ ಇಲ್ಲ.. ಹೇಳೋರು ಕೇಳೋರು ಇಲ್ಲ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕಚೇರಿ ನೌಕರರು ಕೆಲಸಕ್ಕೆ ಸರಿಯಾದ ಟೈಮಿಗೆ ಬಾರದವರ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕಚೇರಿಗೆ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದ ನೌಕರರ ಚಾಳಿ ಇದೀಗ ಶಾಸಕರ ಸಿಟ್ಟಿಗೆ ಕಾರಣ ಆಗಿದೆ. ಮಳೆ ಬಗ್ಗೆ ತುರ್ತು ಸಭೆಗೆ ತಹಸೀಲ್ದಾರ್ ಕಚೇರಿಗೆ ಹೋಗಿದ್ದ ವೇಳೆ ಕೆಲವು ನೌಕರರು ತಮ್ಮ ಕುರ್ಚಿಯಲ್ಲಿ ಇಲ್ಲದ ಕಾರಣ ಫೋನಲ್ಲೇ ಅಧಿಕಾರಿಗಳು, ನೌಕರರಿಗೆ ಚಾರ್ಜ್ ತೆಗೆದುಕೊಂಡ ಆರಗ ಜ್ಞಾನೇಂದ್ರ ಅವರು ಕೆಲಸದ ಸಮಯದ ಬಗ್ಗೆ ಪಾಠ ಮಾಡಿದರು.
11 ಗಂಟೆ ಆದ್ರೂ ಕಚೇರಿಗೆ ಸಿಬ್ಬಂದಿ ಬರಲಿಲ್ಲ
ತೀರ್ಥಹಳ್ಳಿ ತಾಲೂಕು ಕಚೇರಿ ಅಧಿಕಾರಿಗಳಿಂದ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬ ದೂರಿನ ಹಿನ್ನೆಲೆ ಫೋನಲ್ಲೇ ಕೆಂಡ ಮಂಡಲರಾದ ಆರಗ ಇನ್ನು ಈ ತರದ ನಿರ್ಲಕ್ಷ್ಯ ನಡೆದರೆ ಸುಮ್ಮನಿರಲ್ಲ ಎಂದು ಗುಡುಗಿದರು.
ಬಯೋಮೆಟ್ರಿಕ್ ಇಲ್ಲ.. ಹೇಳೋರು ಕೇಳೋರು ಇಲ್ಲ!
ತೀರ್ಥಹಳ್ಳಿಯ ತಾಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿದರು. ಕಚೇರಿಯ ಒಳಗಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ 11 ಗಂಟೆಯಾದರೂ ಕಚೇರಿಗೆ ಬರದ ನೌಕರರಿಗೆ ಏನು ಮಾಡುತ್ತೀರಾ ನೀವು? ನಿಮಗೆ ಯಾರು ಹೇಳುವವರು ಕೇಳುವವರು ಇಲ್ಲವಾ? ಏನು ತಿಳಿದುಕೊಂಡಿದ್ದೀರಿ? ಸರಿಯಾದ ಸಮಯಕ್ಕೆ ಬಂದು ಕುಳಿತುಕೊಳ್ಳಬೇಕಲ್ಲವೇ? ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು, 11 ಗಂಟೆಯಾದರೂ ಬರುವುದಿಲ್ಲ ಎಂದರೆ ಅದೇನು ಕೆಲಸ ಮಾಡುವುದು ಅವರು? ಲೇಟಾಗಿ ಕಚೇರಿಗೆ ಬರುವವರ ನೌಕರರ ಮೇಲೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಜನರ ಕೆಲಸ ಮಾಡಬೇಕಾದ ಕಚೇರಿಯಲ್ಲಿ ಬಯೋಮೆಟ್ರಿಕ್ ಇಲ್ಲ. ಈ ಬಗ್ಗೆ ಈವರೆಗೂ ಯಾರೂ ಗಮನ ವಹಿಸದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಯಕ್ಕೂ ಉದಾಹರಣೆ ಆಗಿದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023