ಮಂಜುನಾಥ್ ಗೌಡರಿಗೆ ಬಿಗ್ ಶಾಕ್!.. ಇ ಡಿ ದಾಳಿ!
– ಕರಕುಚ್ಚಿ, ಶಿವಮೊಗ್ಗ, ತೀರ್ಥಹಳ್ಳಿ ನಿವಾಸಗಳ ಮೇಲೆ ಇಡಿ ದಾಳಿ: ಹಲವು ದಾಖಲೆಗಳ ಪರಿಶೀಲನೆ
– ಬೆಳ್ಳಂಬೆಳಿಗ್ಗೆ ಏಕ ಕಾಲದಲ್ಲಿ ದಾಳಿ
– ರಾಜಕೀಯ ಪ್ರೇರಿತ ದಾಳಿ ಆಯ್ತಾ..?
NAMMUR EXPRESS NEWS
ತೀರ್ಥಹಳ್ಳಿ/ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಆಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸಹಕಾರಿ ನಾಯಕ ಡಾ.ಆರ್ಎಂ ಮಂಜುನಾಥ್ ಗೌಡರಿಗೆ ಸೇರಿದ ಆಸ್ತಿಪಾಸ್ತಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇತ್ತೀಚಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡರಿಗೆ ಅ.6ರಂದು ತೀರ್ಥಹಳ್ಳಿಯಲ್ಲಿ ಅದ್ದೂರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಡುವೆ ಅವರಿಗೆ ಸೇರಿದ ಸೇರಿದ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ್ದು,ಆನಂತರ ತೀರ್ಥಹಳ್ಳಿಯ ಹಣಗೆರೆ ಕಟ್ಟೆಯ ಸಮೀಪದ ಸಕರಕುಚ್ಚಿ ನಿವಾಸದ ಮನೆ ಮೇಲೂ ದಾಳಿಯಾಗಿದೆ. ಶಿವಮೊಗ್ಗದ ಶರಾವತಿ ನಗರದಲ್ಲಿರುವ ನಿವಾಸದ ಮನೆ ಮೇಲೂ ದಾಳಿ ನಡೆದಿದೆ. ಹೆಚ್ಚುವರಿ ಸಿಬ್ಬಂದಿಯೊಂದಿಗೆ ಬಂದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಜುನಾಥ್ ಗೌಡರ ಮನೆ ಮೇಲೆ ದಾಳಿ ನಡೆಸಿದ್ದು, ಈಗ ಪರಿಶೀಲನೆ ನಡೆಯುತ್ತಿದೆ. ಡಾ.ಆರ್ ಎಂ ಮಂಜುನಾಥ್ ಗೌಡರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
5 ವಾಹನ…15 ಅಧಿಕಾರಿಗಳ ತಂಡ!
5ಕ್ಕೂ ಹೆಚ್ಚು ವಾಹನಗಳಲ್ಲಿ 15 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ಮಾಡಿದ್ದೂ ಪ್ರತ್ಯೇಕ ಫೋರ್ಸ್ ನೊಂದಿಗೆ ಇಡಿ ಟೀಂ ಬಂದಿದೆ. ಡಿಸಿಸಿ ಬ್ಯಾಂಕ್ ನಕಲಿ ಬಂಗಾರದ ಹಗರಣ ತನಿಖೆ ಸಂಬಂಧ ಈಡಿ ದಾಳಿ ನಡೆಸಿರುವ ಸಾಧ್ಯತೆ ಇದ್ದು ಕೆಲ ತಿಂಗಳ ಹಿಂದೆಯೇ ಈ ಸಂಬಂಧ ಡಿಸಿಸಿ ಬ್ಯಾಂಕ್ ನಿಂದ ಮಾಹಿತಿ ಕೇಳಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ರಾಜಕೀಯ ಪ್ರೇರಿತ ದಾಳಿ?!
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಭಾವಿ ಮುಖಂಡರಾಗಿ ಬೆಳೆಯುತ್ತಿರುವ ಮಂಜುನಾಥ ಗೌಡರನ್ನು ತಣ್ಣಗೆ ಮಾಡಲು ರಾಜಕೀಯ ದಾಳಿ ಇದಾಗಿದೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆ ಈ ದಾಳಿ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು, ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.