ತೀರ್ಥಹಳ್ಳಿಯ ಇಬ್ಬರೂ ಮಾಜಿ ಸಚಿವರು ಪವರ್ ಫುಲ್!
– ಅಡಿಕೆ ರೈತರ ಪರ ನಿಲ್ಲುವಂತೆ ಸಿಎಂಗೆ ಆರಗ ಮನವಿ
– ಬೆಂಗಳೂರಲ್ಲಿ ಕೇಂದ್ರದ ವಿರುದ್ಧ ಧರಣಿ ಕುಳಿತ ಕಿಮ್ಮನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಇಬ್ಬರು ಮಾಜಿ ಸಚಿವರು ಇದೀಗ ರಾಜ್ಯ ಮಟ್ಟದಲ್ಲಿ ತಮ್ಮದೇ ಸಂಘಟನೆ, ಮಾತು, ಹೋರಾಟದ ಮೂಲಕ ಸದ್ದು ಮಾಡುತ್ತಿದ್ದಾರೆ. ಮಾಜಿ ಗೃಹ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರು, ಅಡಿಕೆ ಬೆಳೆಗಾರರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅಡಿಕೆ ಬೆಳೆಗಾರರ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಅಡಿಕೆಗೆ ಬೆಲೆ, ಗೌರವ ತರುವಲ್ಲಿ ಇವರ ಪಾತ್ರ ಹಿರಿದು. ಎಲೆಚುಕ್ಕಿ ರೋಗ ತಡೆಗೆ ವಿಶೇಷ ಅಧ್ಯಯನ ತಂಡವನ್ನು ಕೇಂದ್ರದಿಂದ ಕರೆಸಿ ಸಂಶೋಧನೆ ನಡೆಸಿದ್ದರು,ಅಲ್ಲದೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ತೋಟಕ್ಕೆ ಕರೆದುಕೊಂಡು ಹೋಗಿ ಅಡಿಕೆ ಬೆಳೆಗಾರರ ಸಮಸ್ಯೆ ಅರ್ಥ ಮಾಡಿಸಿದ್ದರು.
ಬಳಿಕ ಮಂಡಿಸಿದ ಬಜೆಟ್ಟಿನಲ್ಲಿ 10 ಕೋಟಿ ಮಂಜೂರು ಮಾಡಿಸಿದ್ದರು. ಆದರೆ ಈ ಬಾರಿಯ ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಬಜೆಟ್ ನಲ್ಲಿ ಅಡಿಕೆ ಬೆಳೆಗಾರರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದ ಕಾರಣ, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರಾಜ್ಯ ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ನೇತೃತ್ವದಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನುಭೇಟಿಯಾಗಿ, ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮನವಿ ಪತ್ರ ಸಲ್ಲಿಸಿದರು.
ಕೇಂದ್ರದ ವಿರುದ್ಧ ಹೋರಾಟದಲ್ಲಿ ಕಿಮ್ಮನೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀಯುತ “ರಾಹುಲ್ ಗಾಂಧಿಯವರ ವಿರುದ್ದ ಕೇಂದ್ರ ಸರ್ಕಾರ ನಡೆಸುತ್ತಿರುವ ರಾಜಕೀಯ ಷಡ್ಯಂತ್ರದ” ವಿರುದ್ದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಮೌನ ಪ್ರತಿಭಟನೆ ಯಲ್ಲಿ ಕೆಪಿಸಿಸಿ ವಕ್ತಾರರು, ಮಾಜಿ ಸಚಿವರಾದ ಶ್ರೀಯುತ ಕಿಮ್ಮನೆ ರತ್ನಾಕರ್ ರವರು ಭಾಗವಸಿದರು.
ಕಳೆದ ವಾರವಷ್ಟೇ ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಕಿಮ್ಮನೆ ರತ್ನಾಕರ್ ಅವರು ಶಿವಮೊಗ್ಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟ ಮಾಡಿದ್ದರು.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023