ಗುತ್ತಿಗೆದಾರರ ಬಿಲ್ ಬಾಕಿ: ಕಿಮ್ಮನೆ ಮನವಿ ಪತ್ರ!
– ಗ್ರಾಮೀಣ ಅಭಿವೃದ್ಧಿ ಸಚಿವರ ಭೇಟಿ ಮಾಡಿ ಮನವರಿಕೆ
– ತೀರ್ಥಹಳ್ಳಿ ಕಾಂಗ್ರೆಸ್ ಪ್ರಮುಖರ ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ 60ರಿಂದ 100 ಕೋಟಿ ಹಣ ಬಾಕಿ ಇದ್ದು ಕೂಡಲೇ ಹಣ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಪ್ರಮುಖರ ನಿಯೋಗ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿ ಗುತ್ತಿಗೆದಾರರ ಪರವಾಗಿ ಮನವಿ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗುತ್ತಿಗೆದಾರರ ಪರವಾಗಿ ಸಂಕಷ್ಟದಲ್ಲಿ ಇರುವ ಗುತ್ತಿಗೆದಾರರ ಪರವಾಗಿ ಕಿಮ್ಮನೆಯವರು ಪಕ್ಷಾತೀತವಾಗಿ ಮನವಿ ಮಾಡಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಹಲವೆಡೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಸಂಕಷ್ಟದಲ್ಲಿದ್ದು ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಲವು ಯೋಜನೆ ಮಾಡಿದ್ದು ಕಾಮಗಾರಿ ಅವ್ಯವಹಾರ ಹಿನ್ನೆಲೆ ಹೊಸ ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ ತಡೆ ಹಿಡಿಯಲಾಗಿದೆ. ಈ ಹಿನ್ನೆಲೆ ಅನೇಕ ಬಿಲ್ ಬಾಕಿ ಇದೆ. ಮನವಿ ವೇಳೆ ಪ್ರಮುಖರಾದ ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಶೆಟ್ಟಿ, ರಾಘವೇಂದ್ರ ಪುಟ್ಟೋಡ್ಲು, ಶಶಿದರ್, ಪಣಿರಾಜ್, ಸಂದೀಪ್ ಇತರರು ಇದ್ದರು.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023