ತೀರ್ಥಹಳ್ಳಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಕ್ಷಣಗಣನೆ
– ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಆಯೋಜನೆ
– ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅವರಣದಲ್ಲಿ ಯಕ್ಷಗಾನ
– ನೀವೂ ಬನ್ನಿ…ನಿಮ್ಮವರನ್ನೂ ಕರೆತನ್ನಿ!
NAMMUR EXPRESS NEWS
ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ( ರಿ) ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗ ವೃಜ ಕ್ಷೇತ್ರ ಪಾವಂಜೆ, ಇವರಿಂದ ಶುಕ್ರವಾರ( ಇಂದು ಸಂಜೆ ) ಸಂಸ್ಕೃತಿ ಮಂದಿರ ಆವರಣ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಎದುರು, ಸೊಪ್ಪು ಗುಡ್ಡೆ ತೀರ್ಥಹಳ್ಳಿಯಲ್ಲಿ ಸಂಜೆ 6ರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಹರಿ ಲೀಲಾಮೃತ ಯಕ್ಷಗಾನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅದ್ದೂರಿ ಸಿದ್ಧತೆಗಳು ನಡೆಯುತ್ತಿದ್ದು, ಇದರ ಸಂಪೂರ್ಣ ಸಿದ್ಧತೆ ನಡೆದಿದ್ದು, ಸಾವಿರಾರು ಜನ ಸೇರುವ ನಿರೀಕ್ಷೆ ಇದೆ. ಇದು ನಮ್ಮ ರಾಜ್ಯದಲ್ಲಿ ಅಪರೂಪದ ಕಾರ್ಯಕ್ರಮ ಆಗಿದ್ದು ಜನಸಾಗರ ಸೇರಲು ಸಿದ್ಧರಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿ ಎಂದರೆ ದೃವತಾರೆ ಇದ್ದಂತೆ ಇವರ ಸಾರಥ್ಯದಲ್ಲಿ ಆಯೋಜನೆ ಮಾಡಲಾಗಿದೆ. ಈ ಯಕ್ಷಗಾನ ಬಯಲಾಟ 6 ಗಂಟೆಗೆ ಪ್ರಾರಂಭವಾಗಿ 10 ಗಂಟೆಯ ವೇಳೆಗೆ ಮುಕ್ತಾಯಾವಾಗಲಿದೆ. ದಶಾವತಾರದಲ್ಲಿ ಒಂದು ಅವತಾರ ವರಹಾವತಾರ ಈ ಮೂಲಕ ವಿಶೇಷವಾದ ಯಕ್ಷಗಾನ ಕಲೆಯನ್ನು ಜನರ ಮುಂದೆ ಪ್ರಸ್ತುತ ಮಾಡುವ ಕಾರ್ಯಕ್ರಮ ಇದಾಗಿದ್ದು, ನೀವು ಹಾಗೂ ನಿಮ್ಮ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಮ್ಮ ನಾಡಿನ ಕಲೆಯನ್ನು ಉಳಿಸಿ ಬೆಳೆಸಬೇಕಾಗಿ ಈ ಮೂಲಕ ತಿಳಿಸಲಾಗಿದೆ.
ಸರ್ವರಿಗೂ ಸ್ವಾಗತ