ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ
– ಅಧ್ಯಕ್ಷರಾಗಿ ಯುವ ಮುಂದಾಳು ಪಣತ ಶ್ರೀಕಾಂತ್ ಉಪಾಧ್ಯಕ್ಷರಾಗಿ ಶ್ವೇತ ನವೀನ್ ಆಯ್ಕೆ
– ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರಾಗಿ ಆಯ್ಕೆಯಾಗಿರುವವರಿಗೆ ಅಜಿತ್ ಅಣ್ಣುವಳ್ಳಿ ಶುಭ ಹಾರೈಕೆ
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಯುವ ಮುಂದಾಳು ಪಣತ ಶ್ರೀಕಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ವೇತ ನವೀನ್, ಹಾಗೆಯೇ ಸದಸ್ಯರಾಗಿ ಮನೋಹರ್ ತೋಟದ ಮನೆ, ರಂಜಿತಾ ನವೀನ್, ಸಂಗೀತ ಅಜಿತ್ ಅಣ್ಣುವಳ್ಳಿ, ರಾಘವೇಂದ್ರ ಶಿರೂರು, ಮಂಜುನಾಥ್ ಕೋಳಿಗೆ, ಸುಕನ್ಯಾ ಪ್ರವೀಣ್, ಶಬ್ಬೀರ್, ಕಿಶೋರ್ ದೊಡ್ಡಿನ್ ಮನೆ, ಮಹೇಶ್, ಆಶಾ, ಸಾನಿಯಾ, ರೇವತಿ, ಸುಮಾ ವಿಜಯ್, ಯೋಗೇಂದ್ರ ಪಡುವಳ್ಳಿ, ಸುದರ್ಶಿನಿ ರಾಘವೇಂದ್ರ ಹಲಗೇರಿ, ಇವರುಗಳು ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ, ಆಯ್ಕೆಯಾದ ಎಲ್ಲರಿಗೂ ಮುಖ್ಯೋಪಾಧ್ಯಾಯರಾದ ಸುಮಾ ಹಾಗೂ ಎಲ್ಲ ಶಿಕ್ಷಕರು ಪೋಷಕರು ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಅಜಿತ್ ಅಣ್ಣುವಳ್ಳಿ ಶುಭಹಾರೈಸಿದ್ದಾರೆ.