ಆಗುಂಬೆ ಬಳಿ ಕಾಡಾನೆ ದಾಳಿ!
– ಅಪಾರ ಅಸ್ತಿ ಪಾಸ್ತಿ ಹಾನಿ: ರೈತರ ಕಣ್ಣೀರು
– 10 ವರ್ಷದ ಕಾಡಾನೆ ಸಮಸ್ಯೆಗೆ ಪರಿಹಾರ ಇಲ್ಲ
– ಮಳೆಗಾಲದಲ್ಲಿ ಮತ್ತೆ ಕಾಡಾನೆ ಉಪಟಳ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದ ಅಗಸರಕೋಣೆ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ.
ಕಳೆದ 10 ವರ್ಷಗಳಿಂದ ಮಲ್ಲ0ದೂರು, ಅಗಸರಕೋಣೆ ಭಾಗದಲ್ಲಿ ಕಾಡಾನೆ ನಡುವೆಯೇ ಜನ ಬದುಕುತ್ತಿದ್ದಾರೆ. ಆದರೆ ಆನೆ ಭಾನುವಾರ ರಾಜು ಮೇಲಿನಮನೆ ಎಂಬುವರ ತೋಟ, ಬಾಳೆ ಮರ ತಿಂದು ಹಾನಿ ಮಾಡಿದೆ. ಆನೆ ದಾಳಿಯಿಂದ ಬೆಳೆ, ಫಸಲು ಎಲ್ಲಾ ಹಾನಿಯಾಗಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಗಮನ ವಹಿಸುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.
ಆನೆ ಹಾವಳಿ ಬಗ್ಗೆ ಮತ್ತು ಅಲ್ಲಿನ ಗ್ರಾಮಸ್ಥರ ಜೀವನದ ಬಗ್ಗೆ ಯಾರಿಗೆ ಬೇಡವಾಗಿದೆ. 10 ವರ್ಷದ ಹಿಂದೆ ಧರ್ಮಪ್ಪ ಎಂಬ ರೈತ ಈ ಆನೆ ದಾಳಿಗೆ ಬಲಿಯಾಗಿದ್ದಾನೆ. ಇನ್ನು ಪ್ರತಿ ಮನೆಯ ಜಮೀನು ವರ್ಷವೂ ಹಾಳಾಗುತ್ತಿದೆ. ರಾಜಕೀಯಕ್ಕೆ ರಾಜಕಾರಣಿಗಳು ಆನೆಯನ್ನು ಬಳಸಿಕೊಳ್ಳುತ್ತಾರೆಯೇ ಹೊರತು ಜನಪರ ಕಾಳಜಿ ಇಲ್ಲ ಎನ್ನುತ್ತಾರೆ ರೈತರು.
ಇನ್ನಾದರೂ ಈ ಬಗ್ಗೆ ಗಮನ ವಹಿಸಬೇಕು ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಕಾಳಜಿ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023