ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಭೆ
– ನಾಬಳ ಶಚಿಂದ್ರ ಹೆಗ್ಡೆ ನೇತೃತ್ವ ದಲ್ಲಿ ಪ್ರಗತಿ ಪರಿಶೀಲನ ಸಭೆ
– ಪಂಚ ಗ್ಯಾರೆಂಟಿಯಿಂದ ವಂಚಿದರಾದವರ ಸಮಸ್ಯೆ ಕೇಳಿದ ಸದಸ್ಯರು
– ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಪ್ರಥಮ
NAMMUR EXPRESS NEWS
ತೀರ್ಥಹಳ್ಳಿ: ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನ ಸಭೆ 9.12.24 ಮತ್ತು 10.12.24 ರಂದು ಬೆಜ್ಜವಳ್ಳಿ,ಕೋಣಂದೂರು , ಹೊಸಳ್ಳಿ ಹಾಗೂ ಬಸವಾನಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ನಾಬಳ ಶಚಿಂದ್ರ ಹೆಗ್ಡೆ ನೇತೃತ್ವ ದಲ್ಲಿ ನಡೆಯಿತು. ಶಿವಮೊಗ್ಗ ಜಿಲ್ಲೆಯಲ್ಲಿಯೇ ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಥಮವಾಗಿ ಹೊಬಳಿ ಮಟ್ಟದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಯಿತು. ಈ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಇ ಓ , ಸಿಡಿಪಿಒ, ನ್ಯಾಯಬೆಲೆ ಅಂಗಡಿಯವರು, ಅಂಗನವಾಡಿ ಕಾರ್ಯಕರ್ತೆಯರು, ಪಿ ಡಿ ಓ ಗಳು, ಕೆ ಪಿ ಟಿ ಸಿ ಎಲ್ ಅಧಿಕಾರಿಗಳು, ಆಹಾರ ಅಧಿಕಾರಿಗಳು ಭಾಗವಹಿಸಿದ್ದರು, ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಹ ಪಾಲ್ಗೊಂಡಿದ್ದರು, ಫಲಾನುಭವಿಗಳು ಯೋಜನೆಯಿಂದ ತಮಗಾದ ಅನುಕೂಲವನ್ನು, ಸಂತಸದಿಂದ ಹಂಚಿಕೊಂಡರು, ಪಂಚ ಗ್ಯಾರೆಂಟಿಯಿಂದ ವಂಚಿದರಾದವರ ಸಮಸ್ಯೆ ಕೇಳಿ ಪರಿಹರಿಸುವ ಕೆಲಸ ಮಾಡಲಾಯಿತು. ಅಧ್ಯಕ್ಷರಾದ ಶಚಿಂದ್ರ ಹೆಗ್ಡೆ ಅಧಿಕಾರಿಗಳಿಗೆ ಈ ಯೋಜನೆ ಎಲ್ಲರಿಗೂ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು, ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರುಗಳಾದ ರಾಘವೇಂದ್ರ ಶೆಟ್ಟಿ, ಹುಂಚದಕಟ್ಟೆ ಆದರ್ಶ, ಅಶ್ವಲ್ ಗೌಡ, ನಾಗೇಶ್ ನಾಯ್ಕ್, ಕಬಸೆ ವಿಕ್ರಂ, ಚಿಪ್ಪಿನ ಕೋಡಿಗೆ ವೆಂಕಟೇಶ್, ದಿಲೀಪ್ ಪತ್ರೊಳ್ಳಿ , ಸಯ್ಯದ್ ಯಾಸಿನ್, ಜಿಲ್ಲಾ ಸಮಿತಿ ಸದಸ್ಯರಾದ ಬಿ ಕೆ ಉದಯ ಕುಮಾರ್ ಭಾಗವಹಿಸಿದ್ದರು.
ತೀರ್ಥಹಳ್ಳಿ ತಾಲೂಕಿಗೆ 10 ಕೋಟಿಗೂ ಹೆಚ್ಚಿನ ಹಣ!
ಗೃಹ ಲಕ್ಷ್ಮಿ 30, 800 ಮಹಿಳೆಯರಿಗೆ 6 ಕೋಟಿ 16 ಲಕ್ಷ, ಅನ್ನಭಾಗ್ಯ 29ಸಾವಿರ ಕುಟುಂಬಕ್ಕೆ 1ಕೋಟಿ 56 ಲಕ್ಷ, ಗೃಹ ಜ್ಯೋತಿ 34ಸಾವಿರ ಸ್ಥಾವರಕ್ಕೆ 1 ಕೋಟಿ 60 ಲಕ್ಷ, ಯುವ ನಿಧಿ 514 ಜನರಿಗೆ 14 ಲಕ್ಷ ಹೀಗೆ ತೀರ್ಥಹಳ್ಳಿ ತಾಲೂಕಿಗೆ ತಿಂಗಳಿಗೆ 10 ಕೋಟಿಗೂ ಹೆಚ್ಚಿನ ಹಣ ಬರುತ್ತಿದೆ, ಶಕ್ತಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು ಕೆ ಎಸ್ ಆರ್ ಟಿ ಸಿ ಡಿಪೋ ಮಂಜೂರು ಮಾಡಿಸಲು ಪ್ರಯತ್ನ ಮಾಡೋಣ ಎಂದು ಅಧ್ಯಕ್ಷರಾದ ನಾಬಳ ಸಚಿಂದ್ರ ಹೆಗ್ಡೆ ತಿಳಿಸಿದರು.