ತೀರ್ಥಹಳ್ಳಿ ಪ್ರಮುಖ ಸುದ್ದಿಗಳು
ಹೊದಲ ಶಾಲೆ ಹಳೆ ವಿದ್ಯಾರ್ಥಿ, ಉದ್ಯಮಿ ಎಚ್.ಜಿ. ಚಂದ್ರಶೇಖರ್ ಅವರಿಗೆ ಡಾಕ್ಟರೇಟ್
– ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿ ಮಕ್ಕಳ ಸಾಧನೆ
– ತೀರ್ಥಹಳ್ಳಿ ವಿದ್ಯಾರ್ಥಿನಿ ನಿಶಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ
ಹೊದಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರೋಟರಿ, ರೆಡ್ ಕ್ರಾಸ್ ಹಾಗೂ ಟೂಡ ಮಾಜಿ ಅಧ್ಯಕ್ಷರು , ಪ್ರಸಿದ್ಧ ಕೈಗಾರಿಕೋದ್ಯಮಿಗಳೂ, ಕೊಡುಗೈದಾನಿಗಳೂ ಆದ ಎಚ್.ಜಿ. ಚಂದ್ರಶೇಖರ್ ಅವರಿಗೆ ತುಮಕೂರು ವಿಶ್ವವಿಧ್ಯಾಲಯವು, ಆಗಸ್ಟ್ ಏಳರಂದು ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಹೆಚ್.ಜಿ. ಚಂದ್ರಶೇಖರ್ ಅವರಿಗೆ ತೀರ್ಥಹಳ್ಳಿ ಜನತೆಯ ಪರವಾಗಿ ಅಭಿನಂದನೆಗಳು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿ ಮಕ್ಕಳ ಸಾಧನೆ
ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ನಡೆದ ವಿದ್ಯಾಭಾರತಿಯ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿಯ ವಿದ್ಯಾರ್ಥಿಗಳು 2
ಸ್ಪರ್ಧೆಗಳಲ್ಲಿ ಪ್ರಥಮ, ಎರಡು ಸ್ಪರ್ಧೆಗಳಲ್ಲಿ ದ್ವಿತೀಯ
ಹಾಗೂ ನಾಲ್ಕು ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ
ಕೀರ್ತಿ ತಂದಿರುತ್ತಾರೆ. ವಿಜೇತರಿಗೆ ಮತ್ತು ಕಲಿಸಿದ ಗುರುಗಳಿಗೆ ಸೇವಾಭಾರತಿ ವಿದ್ಯಾಕೇಂದ್ರವು ಅಭಿನಂದನೆಯನ್ನು ಸಲ್ಲಿಸಿದೆ ಹಾಗೂ
ರಾಜ್ಯಮಟ್ಟದಲ್ಲೂ ಉತ್ತಮ ಸಾಧನೆ ಮಾಡಲಿ ಎಂದು ಶುಭ
ಹಾರೈಸಿದೆ.
ವಿಜೇತರು
ಶ್ರವಂತಿ.ಜೆ.ಎಸ್ ಹರ್ಡಲ್ಸ್-ಪ್ರಥಮ, ಹೈ ಜಂಪ್ -ತೃತೀಯ.
ನಿಶಿಕಾ.ಎಸ್- ಲಾಂಗ್ ಜಂಪ್-ದ್ವಿತೀಯ, 100ಮೀ ಓಟ-ತೃತೀಯ..
ಅನನ್ಯ ಎಂ.ಜೆ- 600ಮೀ ಓಟ-ಪ್ರಥಮ, ಸಾನ್ವಿ ಬಿ.ಎಸ್- ಹೈಜಂಪ್-ದ್ವಿತೀಯ, ಅದ್ವೈತ್.ಕೆ.ಎಸ್- ಶಾಟ್ ಪುಟ್-ತೃತೀಯ..
ಪ್ರಥಮ್.ಬಿ.ಆರ್ ಹರ್ಡಲ್ಸ್-ತೃತೀಯ.
ತೀರ್ಥಹಳ್ಳಿ ವಿದ್ಯಾರ್ಥಿನಿ ನಿಶಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ ಬಂಟ ಸಮುದಾಯದ ಸೊಪ್ಪುಗುಡ್ಡೆ ಸುರೇಶ್ ಶೆಟ್ಟಿ ಮತ್ತು ಮಾಲತಿ ಶೆಟ್ಟಿ ದಂಪತಿಗಳ ಮಗಳಾದ ಕುಮಾರಿ ನಿಶಿಕಾ ಶೆಟ್ಟಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ದಿನಾಂಕ 4.8.2024ರ ಭಾನುವಾರ ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ನಡೆದ ವಿದ್ಯಾ ಭಾರತಿ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಸೇವಾ ಭಾರತಿ ಶಾಲೆಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕುಮಾರಿ ನಿಶಿಕಾ ಶೆಟ್ಟಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಲಾಂಗ್ ಜಂಪ್ ನಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಬೀದರ್ ನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.