ವಾಗ್ದೇವಿ ಶಿಕ್ಷಣ ಸಂಸ್ಥೆಯ ಸಾಧಕರಿಗೆ ಸನ್ಮಾನದ ಗೌರವ
– ಸತ್ಪಥ ಎಜುಕೇಷನ್ ಟ್ರಸ್ಟ್ ಬೆಳ್ಳಿಹಬ್ಬ: ಸಾಧಕ ವಿದ್ಯಾರ್ಥಿಗಳು, ನೌಕರರಿಗೆ ಪ್ರತಿಭಾ ಪುರಸ್ಕಾರ
– ಗಮನ ಸೆಳೆದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ 25ನೇ ವರ್ಷದ ಸಂಭ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿ ಸಾಧಕರಿಗೆಮತ್ತು ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನದ ಗೌರವ ನೀಡಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಉದ್ಘಾಟಿಸಿ ಮಾತನಾಡಿ, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಾ ನಮ್ಮ ತೀರ್ಥಹಳ್ಳಿಯ ಹೆಸರನ್ನು ನಾಡಿನಾದ್ಯಂತ ಬೆಳಗಿಸುತ್ತ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಅಂತ ಸಾಧಕರನ್ನು ವಾಗ್ದೇವಿ ಶಾಲೆ ನೀಡುತ್ತಿದೆ ಎಂದರು. ಒಂದು ಕಾಲದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪೋಷಕರು ಅವರನ್ನು ಕರಾವಳಿ ಅಥವಾ ಬೆಂಗಳೂರು ನಗರಗಳಿಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುವ ಸನ್ನಿವೇಶವಿತ್ತು. ಆದರೆ ಇಲ್ಲಿ ವಾಗ್ಗೇವಿ ಶಿಕ್ಷಣ ಸಂಸ್ಥೆ ಆರಂಭವಾದ ನಂತರ ಆ ಕೊರತೆ ನೀಗಿದೆ ಎಂದರು.
ಕಾರ್ಯಕ್ರಮದಲ್ಲಿ 2022 -23 ಮತ್ತು 2023-24 ರಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳನ್ನು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಕ್ರೀಡೆ ಸಾಂಸ್ಕೃತಿಕ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅವರ ಪೋಷಕರನ್ನು ಗೌರವಿಸಲಾಯಿತು. ಸತ್ಪಥ ಎಜುಕೇಶನ್ ಟ್ರಸ್ಟ್ ಸದಸ್ಯರಾದ ಧರ್ಮೇಶ ಸಿರಿಬೈಲು, ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಶೆಟ್ಟಿ ಮುನ್ನೂರು, ತುಂಗಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರಕಾಶ್ ರಾವ್, ಸತ್ವಥ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್ ಜಗದೀಶ್ ಉಪಸ್ಥಿತರಿದ್ದರು.
ಪತ್ರಕರ್ತರ ಜತೆ ವಿದ್ಯಾರ್ಥಿಗಳ ಸಂವಾದದ ಜೋಶ್
ಪ್ರತಿಭಾ ಪುರಸ್ಕಾರದ ನಂತರ ತೀರ್ಥಹಳ್ಳಿಯ ಪತ್ರ ಕರ್ತರ ಜೊತೆಗೆ ವಾಗ್ರೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಶೆಟ್ಟಿ ಮುನ್ನೂರು ಪತ್ರಿಕೋದ್ಯಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ್ ಶೆಟ್ಟಿ, ಶಿವಾನಂದ್ ಕರ್ಕಿ, ರಮೇಶ್ ಶೆಟ್ಟಿ ಇವರು ಪತ್ರಿಕೆ ಹಾಗೂ ಪತ್ರಕರ್ತರ ಬದುಕು- ಬರಹ ಕುರಿತು ಸಂಕ್ಷಿಪ್ತವಾದ ಮಾಹಿತಿಯನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಪತ್ರಿಕೋದ್ಯಮ ಮತ್ತು ಡಿಜಿಟಲ್ ಮಾಧ್ಯಮದ ಕುರಿತು ನೇರ ಹಾಗೂ ದಿಟ್ಟ ಮತ್ತು ಬಿರುಸಿನ ಪ್ರಶ್ನೆಗಳನ್ನು ಕೇಳುವುದರ ಮೂಲಕ ಉತ್ತಮವಾದ ಸಂವಾದಕ್ಕೆ ಮುನ್ನುಡಿ ಯನ್ನು ಬರೆದರು. ವೇದಿಕೆಯಲ್ಲಿ ಸತ್ಪಥ ಎಜ್ಯುಕೇಷನ್ ಟ್ರಸ್ಟ್ನ ಖಜಾಂಚಿ ಶಶಿಧರ ಹೆಚ್.ಪಿ, ಹಿರಿಯ ಪತ್ರಕರ್ತರಾದ ಸತ್ಯನಾರಾಯಣ್, ರಾಮಚಂದ್ರ ಕೊಪ್ಪಲು, ನಮ್ಮೂರ್ ಎಕ್ಸ್ ಪ್ರೆಸ್ ರಾಘವೇಂದ್ರ, ಪ್ರಸನ್ನ, ಹೊಳ್ಳ, ಅಕ್ಷಯ್ ಕುಮಾರ್, ಸಂತೋಷ್,ಜಗದೀಶ್ ಪ್ರಭು, ಗಾಯತ್ರಿ ಶೇಷಗಿರಿ, ಮುರುಘರಾಜ್, ಸಂತೋಷ್ ನಾಯಕ್ ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು.