ಬಂತು ಹ್ಯುಂಡೈ ಎಕ್ಸ್ಟರ್ ಎಸ್ ಯುವಿ!
– ತೀರ್ಥಹಳ್ಳಿಯ ರಾಹುಲ್ ಹ್ಯುಂಡೈ ಶೋ ರೂಂ ಅಲ್ಲಿ ಲಾಂಚ್
NAMMUR EXPRESS NEWS
ಹ್ಯುಂಡೈ ಮೋಟಾರ್ಸ್ ಇಂಡಿಯಾ ತನ್ನ ಹೊಸ ಎಸ್ಯುವಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಎಕ್ಸ್ ಶೋರೂಮ್ನಲ್ಲಿ ಈ ಎಸ್ ಯುವಿ ಬೆಲೆ 5,99,900 ರೂಪಾಯಿಯಿಂದ ಆರಂಭವಾಗಲಿದೆ. ಹ್ಯುಂಡೈ ಎಕ್ಸ್ಟರ್ 3 ವರ್ಷ ಅನಿಯಮಿತ ಕಿಲೋಮೀಟರ್ ವಾರಂಟಿ ಸಿಗುತ್ತದೆ. ಇದರ ಜೊತೆಗೆ ಗ್ರಾಹಕರು 7 ವರ್ಷಗಳ ವಿಕೃತ ವಾರಂಟಿಯನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಹ್ಯುಂಡೈ ಗ್ರಾಂಡ್ ಐ10, ಔರಾ ಸೆಡಾನ್ನಂತೆಯೇ ಅದೇ ಪ್ಲಾಟ್ಫಾರ್ಮ್ ಅನ್ನು ಆಧರಿಸಿ ಹ್ಯುಂಡೈ ಎಕ್ಸ್ಟರ್ ಸಿದ್ಧವಾಗಿದ್ದು, ಇದು ವಿಶೇಷವಾದ ಬಾಹ್ಯ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿದೆ.
5 ವೆರಿಯೆಂಟ್ ಕಾರುಗಳು ಲಭ್ಯ!
ಹ್ಯುಂಡೈ ಎಕ್ಸ್ಟರ್ ಐದು ರೂಪಾಂತರಗಳಲ್ಲಿ ಲಭ್ಯವಿರಲಿದೆ. EX, S, SX, SX(0) ಮತ್ತು SX(0) ಕನೆಕ್ಟ್ ಎಂಬ ಹ್ಯುಂಡೈ ಎಕ್ಸ್ಟರ್ ವೆರಿಯೆಂಟ್ಗಳು ಲಭ್ಯವಿರಲಿದೆ. ಹೊಸ ಎಕ್ಸ್ಟರ್ ಹ್ಯುಂಡೈ ಇಂಡಿಯಾದ ಅತ್ಯಂತ ಕೈಗೆಟುಕುವ ಎಸ್ಯುವಿ ಆಗಿರಲಿದೆ.
ಮೂರು ಪವರ್ಟ್ರೇನ್ ಆಯ್ಕೆಗಳೊಂದಿಗೆ ಹ್ಯುಂಡೈ ಎಕ್ಸ್ಟರ್ ಲಭ್ಯವಿರಲಿದೆ. 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ನೊಂದಿಗೆ ಜೋಡಿಸಲಾದ 5-ಸ್ಪೀಡ್ ಮ್ಯಾನ್ಯುವಲ್ ಮತ್ತು ಸ್ಮಾರ್ಟ್ ಆಟೋ ಎಎಂಟಿ ಎಂಜಿನ್ ಅನ್ನು ಇದು ಹೊಂದಿರಲಿದೆ. ಇದು 6000ಆರ್ಎಂಪಿಯಲ್ಲಿ 83 ಪಿಎಸ್ ಮತ್ತು 4000ಆರ್ಎಂಪಿಯಲ್ಲಿ 113.8 ನ್ಯೂಟನ್ ಮೀಟರ್ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಟೋಮೇಟೆಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಕೂಡಾ 83 ಪಿಎಸ್ ಮತ್ತು 113.8 ನ್ಯೂಟನ್ ಮೀಟರ್ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ 19.4km/Iಹಾಗೂ ಆಟೋಮೇಟೆಡ್ ಮ್ಯಾನ್ಯುವಲ್ ದಕ್ಷತೆಯನ್ನು ಹೊಂದಿದೆ. ಇದರ ಜತೆಗೆ ಸಿಎನ್ಜಿಯನ್ನು ಬೆಂಬಲಿಸುವ 1.2-ಲೀಟರ್ ಬೈಫ್ಯುಯಲ್ ಕಪ್ಪಾ ಪೆಟ್ರೋಲ್ ಎಂಜಿನ್ನೊಂದಿಗೆ ಇದು ಬರಲಿದೆ. ಇದು ಕೂಡಾ 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ನೊಂದಿಗೆ ಲಭ್ಯವಿರಲಿದೆ. ಇದು 69PS ಮತ್ತು 95.2 Nm ಟಾರ್ಕ್ ಹೊರಹಾಕುತ್ತದೆ. ಹೊಸ ಎಕ್ಸ್ಟರ್ 3815 ಎಂಎಂ ಉದ್ದ 1710 ಎಂಎಂ ಅಗಲ ಮತ್ತು 1631 ಎಂಎಂ ಎತ್ತರ ಹೊಂದಿದ್ದು, ಇದರ ವೀಲ್ಬೇಸ್ 2450 ಎಂಎಂ ಇರಲಿದೆ.
ಹ್ಯುಂಡೈ ಎಕ್ಸ್ಟರ್ ಭಾರತದಲ್ಲಿ ಒಟ್ಟು 8 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಹೊಸ ಎಕ್ಸ್ಟರ್ನ ಬಾಹ್ಯ ವಿನ್ಯಾಸದ ಬಗೆಗಿನ ಚಿತ್ರಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿತ್ತು. ಹೊಸ ಎಕ್ಸ್ಟರ್ ಮುಂಭಾಗದಲ್ಲಿ ಸ್ಪಿಟ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಜೊತೆಗೆ, ಎಚ್ ಆಕಾರದ ಎಲ್ಇಡಿ ಡಿಆರ್ಎಲ್ಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳು ಮತ್ತು ಟೈಲ್- ಲೈಟ್ಗಳು ಸುಂದರವಾದ ಎಚ್ ಮಾದರಿಯ ಸಿಗ್ರೇಚರ್ ಅನ್ನು ಒಳಗೊಂಡಿದೆ. ಇದಲ್ಲದೆ, ಎಕ್ಸ್ಟರ್ ವೀಲ್ ಆರ್ಚ್ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಬಂಪರ್ಗಳಲ್ಲಿ ಫಾಕ್ಸ್ ಸ್ಕಿಡ್ ಪ್ಲೇಟ್ಗಳನ್ನೂ ಇದು ಹೊಂದಿರಲಿದೆ.
ತೀರ್ಥಹಳ್ಳಿಯಲ್ಲೂ ಕಾರು ಲಾಂಚ್!
ತೀರ್ಥಹಳ್ಳಿ ರಾಹುಲ್ ಹ್ಯುಂಡೈ ಶೋ ರೂಂ ಅಲ್ಲಿ ಜು.14ರಂದು ಕಾರು ಲಾಂಚ್ ಆಗಿದೆ. ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಶಿವಮೊಗ್ಗ ಡಿವಿಜನಲ್ ಮ್ಯಾನೇಜರ್ ಹಾಗೂ ಸಿಬ್ಬಂದಿ, ಸ್ಥಳೀಯ ಪ್ರಮುಖರು ಹಾಜರಿದ್ದರು.
ಇದನ್ನೂ ಓದಿ : ಗೃಹ ಲಕ್ಷ್ಮೀ ಯೋಜನೆಗೆ ಜು.16ಕ್ಕೆ ಚಾಲನೆ!
HOW TO APPLY : NEET-UG COUNSELLING 2023