ಮೋದಿ ಸರ್ಕಾರದ ವಿರುದ್ಧ ಕಿಮ್ಮನೆ ಉಪವಾಸ!
– ಜುಲೈ 3ರಂದು ಶಿವಮೊಗ್ಗದಲ್ಲಿ ಉಪವಾಸ ಸತ್ಯಾಗ್ರಹ
– ರಾಜ್ಯ ಸರ್ಕಾರಕ್ಕೆ ಆಹಾರ ಧಾನ್ಯ ವಿತರಣೆ ಲೋಪ
– ಕೇಂದ್ರ ಸರ್ಕಾರ ಜನರ ಬೇಡಿಕೆ ಈಡೇರಿಸುವಲ್ಲಿ ವಿಫಲ
NAMMUR EXPRESS NEWS
ಶಿವಮೊಗ್ಗ: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಆಹಾರಧಾನ್ಯ ವಿತರಣೆಯ ವಿಷಯದಲ್ಲಿ ಕರ್ನಾಟಕದ ವಿರುದ್ದ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಹಾಗಗೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ,ಮಣಿಪುರದಲ್ಲಿ ಹಿಂಸೆ ಗಲಭೆಗಳು ತಾರಕಕ್ಕೆ ಏರಿದ್ದು ಈ ವಿಷಯದಲ್ಲಿ ಕೇಂದ್ರಸರ್ಕಾರದ ಬೇಜವಾಬ್ದಾರಿ ನಿಲುವು ಹಾಗು ಸರ್ವ ಕ್ಷೇತ್ರಗಳಲ್ಲೂ ವಿಫಲವಾಗಿರುವ ಕೇಂದ್ರಸರ್ಕಾರದ ನಿಲುವು ನಡವಳಿಕೆಗಳನ್ನು ಖಂಡಿಸುವ ಸಲುವಾಗಿ ಮಾಜಿ ಸಚಿವರು ಕೆಪಿಸಿಸಿ ವಕ್ತಾರರು, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆರತ್ನಾಕರ್ ಅವರು ಶಿವಮೊಗ್ಗದಲ್ಲಿ ಜುಲೈ 7ರಂದು ಉಪವಾಸ ಸತ್ಯಾಗ್ರಹ ನಡೆಯಲಿದೆ.
ಜುಲೈ 3ರ ಸೋಮವಾರದಂದು ಶಿವಮೊಗ್ಗದ ಗಾಂಧಿ ಪಾರ್ಕಿನ ಗಾಂಧಿ ಪ್ರತಿಮೆ ಎದುರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರ ತನಕ ಉಪವಾಸ ಸತ್ಯಾಗ್ರಹ ನಡೆಸಲಿದ್ದು ,ಈ ಸತ್ಯಾಗ್ರಹದಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರಾದ ಆರ್.ಎಂ ಮಂಜುನಾಥ್ ಗೌಡ , ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಚ್.ಎಸ್.ಸುಂದರೇಶ್ ಮತ್ತು ಜಿಲ್ಲಾ ಪ್ರಮುಖರು, ಮಲೆನಾಡಿನ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.
ಈ ಸತ್ಯಾಗ್ರಹದಲ್ಲಿ ಶಿವಮೊಗ್ಗ ಜಿಲ್ಲೆಯ ಪಕ್ಷದ ಎಲ್ಲಾ ಮುಂಚೂಣಿ ನಾಯಕರು , ಎಲ್ಲಾ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು , ವಿವಿಧ ಘಟಕದ ಪದಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಿಮ್ಮನೆ ರತ್ನಾಕರ್ ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023