ಮಲೆನಾಡಲ್ಲಿ ಕೊಡೆ ಅಮಾವಾಸ್ಯೆ ಆಚರಣೆ!
– ಒಂದು ಕಡೆ ಭೀಮನ ಅಮಾವಾಸ್ಯೆ, ಇನ್ನೊಂದು ಕಡೆ ರೊಟ್ಟಿ ಹಬ್ಬ
– ದೇವಸ್ಥಾನಗಳಲ್ಲಿ ಫುಲ್ ರಶ್: ಭಕ್ತಿಯ
NAMMUR EXPRESS NEWS
ತೀರ್ಥಹಳ್ಳಿ: ಭೀಮನ ಅಮಾವಾಸ್ಯೆ ಹಾಗೂ ಕೊಡೆ ಅಮಾವಾಸ್ಯೆಯನ್ನು ಮಲೆನಾಡಲ್ಲಿ ಜನ ಸೋಮವಾರ ಆಚರಣೆ ಮಾಡಿದರು. ಶ್ರೀರಾಮೇಶ್ವರ ದೇವಸ್ಥಾನ ಹಾಗೂ ಭೀಮನ ಕಟ್ಟೆಯ ಭೀಮೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಹೆಚ್ಚಾಗಿದ್ದು ಕಂಡು ಬಂತು. ಭೀಮನ ಅಮಾವಾಸ್ಯೆ ಸೋಮವಾರ ಬಂದಿರುವುದು ಈ ಸಾಲಿನ ವಿಶೇಷ. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ ಹಾಗೂ ಭೀಮನ ಕಟ್ಟೆಯ ದೇವಸ್ಥಾನಕ್ಕೆ ಭಕ್ತಾದಿಗಳು ಬೆಳಗಿನಿಂದಲೇ ಸಾಕಷ್ಟು ಜನ ದೇವಸ್ಥಾನಕ್ಕೆ ಬಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಇನ್ನು ಭೀಮನ ಅಮಾವಾಸ್ಯೆ ಅಂಗವಾಗಿ ಪತ್ನಿಯರು ತಮ್ಮ ಪತಿಗಳ ಪಾದಪೂಜೆ ಮಾಡಿದರು. ಶೃಂಗೇರಿ, ಹೊರನಾಡು ಸೇರಿ ಈಶ್ವರ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಭಕ್ತಾದಿಗಳು ಶ್ರೀರಾಮೇಶ್ವರ ನಿತ್ಯ ಅನ್ನ ಸಂರ್ಪಣ ಹಾಗೂ ಧಾರ್ಮಿಕ ಸೇವಾ ಸಮಿತಿ( ರಿ ) ವತಿಯಿಂದ ಏರ್ಪಡಿಸಿದ್ದರು. ಸುಮಾರು 500 ರಿಂದ 600 ಜನ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ರೊಟ್ಟಿ ಹಬ್ಬದ ಸಂಭ್ರಮ!
ಕೊಡೆ ಅಮಾವಾಸ್ಯೆ ಅಂಗವಾಗಿ ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ ಭಾಗದಲ್ಲಿ ರೊಟ್ಟಿ ಹಬ್ಬ ಆಚರಣೆ ಮಾಡಲಾಯಿತು. ರೊಟ್ಟಿ ಮತ್ತು ಮಾಂಸಹಾರಿ ಅಡುಗೆ ಮಾಡಿ ಕುಟುಂಬದವರ ಜತೆ ಆಚರಣೆ ಮಾಡಿದರು.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023