ತೀರ್ಥಹಳ್ಳಿ -ಹೊಸನಗರ ಗಡಿಯಲ್ಲಿ ನೆಟ್ವರ್ಕ್ ಗೋವಿಂದಾ…!
– ಬಿಎಸ್ಎನ್ಎಲ್ ಕೆಲವೆಡೆ 4ಜಿ ಇದ್ದರೂ 2 ಜಿ ಇಲ್ಲ
– ಹೋರಾಟಕ್ಕೆ ಸಿದ್ಧರಾದ ಜನ: ಅಧಿಕಾರಿಗಳೇ ಎನ್ ಮಾಡ್ತಿದ್ದೀರಿ?
NAMMUR EXPRESS NEWS
ತೀರ್ಥಹಳ್ಳಿ /ಹೊಸನಗರ: ತೀರ್ಥಹಳ್ಳಿ ಮತ್ತು ಹೊಸನಗರ ಗಡಿ ಭಾಗದಲ್ಲಿ ಇದೀಗ ಬಿಎಸ್ಎನ್ಎಲ್ ಟವರ್ ಸರಿ ಇಲ್ಲದೆ ಸಾಮಾನ್ಯ ಗ್ರಾಹಕರಿಗೆ ದಿನ ನಿತ್ಯ ಕರೆ ಮಾಡುವುದು ಸಮಸ್ಯೆಯಾಗಿದೆ.ಇತ್ತೀಚಿಗೆ 4ಜಿ ನೆಟ್ವರ್ಕ್ ಸಿಕ್ಕರೂ 2ಜಿ ನೆಟ್ವರ್ಕ್ ಇಲ್ಲದಾಗಿದೆ. ಈ ಭಾಗದಲ್ಲಿ ಹಳ್ಳಿ, ರೈತರು ಹೆಚ್ಚಿರುವ ಭಾಗ. ಇಲ್ಲಿ ಜನ ಸಾಮಾನ್ಯ ಕೀಪ್ಯಾಡ್ ಮೊಬೈಲ್ ಬಳಸುತ್ತಾರೆ. ಆದರೆ ಇಲ್ಲಿ 2ಜಿ ನೆಟ್ವರ್ಕ್ ಸಿಗಲ್ಲ. ಇದರಿಂದ ಜನತೆ ತೊಂದರೆಗೆ ಒಳಗಾಗಿದ್ದಾರೆ. ಮನೆಯಲ್ಲಿ ಯಾವುದೇ ತುರ್ತು ಇದ್ದರೂ ಯಾರನ್ನು ಸಂಪರ್ಕಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಿಎಸ್ಎನ್ ಎಲ್ ಮತ್ತು ಜನ ಪ್ರತಿನಿಧಿಗಳು ಗಮನಿಸಬೇಕಿದೆ.
ಹೊಸನಗರ ತೀರ್ಥಹಳ್ಳಿ ಗಡಿ ಭಾಗದ ಕೌರಿ, ಮೇಕೇರಿ, ಕೊಳವಾಡಿ, ಯಡೂರು, ಸುಳುಗೋಡು, ಉಳುಕೊಪ್ಪ ಮೇಲುಸುಂಕ ಈ ಭಾಗದಲ್ಲಿ ನೆಟ್ವರ್ಕ್ ಇಲ್ಲದಾಗಿದೆ.ಹೋರಾಟಕ್ಕೆ ಸಿದ್ದರಾದ ಜನ: ಈ ಭಾಗದಲ್ಲಿ ಜನ ಈಗ ಬಿಎಸ್ಎನ್ಎಲ್ ಟವರ್ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.ಮೊಬೈಲ್ ನೆಟ್ವರ್ಕ್ ಇಲ್ಲದೆ ಯಾವುದೇ ಸರ್ಕಾರದ ಯೋಜನೆ ಪಡೆಯಲು ಕೂಡ ಇಲ್ಲಿಯ ಜನ ವಿಫಲರಾಗಿದ್ದಾರೆ.
ತೀರ್ಥಹಳ್ಳಿ, ಹೊಸ ನಗರ ತಾಲೂಕಿಗೆ ಅನ್ಯಾಯ!?
ನಕ್ಸಲ್ ಪ್ರದೇಶ ಹಾಗೂ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇವೆರಡು ತಾಲೂಕು ಕೂಡ ಸೇರಿವೆ. ನಕ್ಸಲ್ ಪ್ರದೇಶವಾದ ಮೇಲುಸುಂಕ ಮತ್ತು ನೀರು ತೊಟ್ಲು ಭಾಗದಲ್ಲಿ ನೆಟ್ವರ್ಕ್ ಇಲ್ಲ. ಇಲ್ಲಿ ಮೂಲಭೂತ ಸೌಲಭ್ಯ ಕೆಲವು ಕಡೆ ಇಲ್ಲದಾಗಿದೆ. ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕು ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.