ತೀರ್ಥಹಳ್ಳಿಯಲ್ಲಿ ಜುಲೈ 29ಕ್ಕೆ ಪತ್ರಿಕಾ ದಿನಾಚರಣೆ
– 9 ಮಂದಿ ತೀರ್ಥಹಳ್ಳಿ ಸಾಧಕರಿಗೆ ಸನ್ಮಾನ
– ಸರ್ವರನ್ನು ಸ್ವಾಗತಿಸಿದ ಕಾರ್ಯನಿರತ ಪತ್ರಕರ್ತರ ಸಂಘ
NAMMUR EXPRESS NEWS
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ಘಟಕದ ವತಿಯಿಂದ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ಸಮೀಪ ಇರುವ ಬಂಟರ ಭವನದಲ್ಲಿ ಸಂಜೆ 4 ಗಂಟೆಗೆ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಮುನ್ನೂರು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಆರಗ ಜ್ಞಾನೇಂದ್ರ ನೆರವೇರಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ರಾಜ್ಯದ ಹಿರಿಯ ಪತ್ರಕರ್ತ ವೆಂಕಟೇಶ್ ಎಂ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಪ್ರಾಥಮಿಕ ಶಿಕ್ಷಕರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತುಳುನಾಡುಸಿರಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್.ರಾಘವೇಂದ್ರ ಶೆಟ್ಟಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ನಾಗರಾಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್, ರಾಜ್ಯ ನಿರ್ದೇಶಕ ಟೆಲೆಕ್ಸ್ ರವಿಕುಮಾರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿ.ಟಿ.ಅರುಣ್, ಜಿಲ್ಲಾ ಪ್ರತಿನಿಧಿ ಟಿ.ಕೆ.ರಮೇಶ್ ಶೆಟ್ಟಿ, ಜಿಲ್ಲಾ ಪ್ರತಿನಿಧಿ ಟಿ.ಜೆ.ಅನಿಲ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುರುಘರಾಜ್ ಕೋಣಂದೂರು ಉಪಸ್ಥಿತಿ ಇರಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೋಣಂದೂರು ಸುಧೀರ್ ಕುಮಾರ್ ಶೆಟ್ಟಿ, ಹಿರಿಯ ಪತ್ರಕರ್ತ ಕೆ.ನಾಗಭೂಷಣ್, ಸಂಗೀತ ಕ್ಷೇತ್ರಕ್ಕೆ ವಿಭಿನ್ನ ಕೊಡುಗೆ ನೀಡಿದ ತೀರ್ಥಹಳ್ಳಿ ನಾಗಭೂಷಣ್, ನಾಟಿ ವೈದ್ಯರಾಗಿ ಜನಾನುರಾಗಿಯಾದ ಗೊರಕೋಡು ಶೇಷನಾಯ್ಕರು, ವಕೀಲಿಕೆ ಜೊತೆಗೆ ಕೃಷಿಕರಾದ ಮೇದೊಳಿಗೆ ರಾಮಸ್ವಾಮಿ, ಮಳೆಗಾಲದಲ್ಲಿ ಜೀವದ ಹಂಗು ತೊರೆದು ನಾಗರೀಕರಿಗೆ ಬೆಳಕು ನೀಡುವ ಮೆಸ್ಕಾಂ ಲೆನ್ ಮನ್ ಪ್ರತಿನಿಧಿಯಾದ ಲಿಂಗರಾಜು, ಕಾಯಕವೇ ಕೈಲಾಸವೆಂದು ಹಗಲಿರುಳು ಪಾರ್ಸೆಲ್ ಸೇವೆ ನೀಡುವ ಶ್ರಮಿಕ ವರ್ಗದಿಂದ ಕೆ.ರಾಜೇಶ್ ಅವರಿಗೆ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2024ರ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 93 ಅಂಕ ಪಡೆದ ಪ್ರಾರ್ಥನಾ ಮುರುಘರಾಜ್ ಮತ್ತು ಎಸ್ಎಸ್ಎಲ್ಸಿಯಲ್ಲಿ ಶೇಕಡಾ 96.83 ಅಂಕ ಪಡೆದ ವಿಧಿತಾ ಗೌಡ ಟಿ.ಎ. ಇವರಿಗೆ ಸಂಘದ ವತಿಯಿಂದ ವಿಶೇಷವಾಗಿ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.