ಕೆಲವೇ ಗಂಟೆಯಲ್ಲಿ ರಾಮ ಮಂಟಪ ಮುಳುಗಡೆ?
– ಶಾಸಕ ಜ್ಞಾನೇಂದ್ರರಿಂದ ಇಂದು ಬಾಗಿನ ಅರ್ಪಣೆ
– ತೀರ್ಥಹಳ್ಳಿ, ಶೃಂಗೇರಿ ಸೇರಿ ಮಲೆನಾಡಲ್ಲಿ ಭಾರೀ ಮಳೆ
– ತೀರ್ಥಹಳ್ಳಿ ತಾಲೂಕು ಆಡಳಿತ ಎಚ್ಚರ ಎಚ್ಚರ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಭಾಗದಲ್ಲಿ ಕಳೆದ 4-5ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ನೀರು ಸಂಪೂರ್ಣ ಹೆಚ್ಚಾಗಿದ್ದು, ರಾಮ ಮಂಟಪ ಮುಳುಗುವ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ಗಂಟೆಯಲ್ಲಿ ರಾಮ ಮಂದಿರ ಮುಳುಗಡೆ ಆಗಲಿದೆ. ರಾಮ ಮಂಟಪದ ಕೊನೆಯ ಹಂತಕ್ಕೆ ನೀರು ಬಂದಿದ್ದು, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಹೀಗೆ ಮಳೆ ಸುರಿದಲ್ಲಿ ಕೆಲವೇ ಗಂಟೆಯಲ್ಲಿ ರಾಮ ಮಂಟಪ ಮುಳುಗಡೆ ಆಗಲಿದೆ.
ಶಾಲಾ ಕಾಲೇಜುಗಳಿಗೆ ರಜೆ
ತೀರ್ಥಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಕೊಡಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಬಹುತೇಕ ಕಡೆ ಮರಗಳು ಧರೆಗೆ ಉರುಳಿವೆ. ನೂರಾರು ಹಳ್ಳಿಗಳು ವಿದ್ಯುತ್, ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಮಳೆ ಹೆಚ್ಚಳ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪಿಯು ಕಾಲೇಜುಗಳಿಗೆ ಆಯಾ ಆಡಳಿತ ಮಂಡಳಿ ನಿರ್ಧಾರ ಮಾಡಿ ರಜೆ ಘೋಷಣೆ ಮಾಡಿವೆ.
ಆರಗ ಜ್ಞಾನೇಂದ್ರ ಬಾಗಿನ!
ತುಂಗಾ ನದಿ ತೀರ್ಥಹಳ್ಳಿ ತಾಲೂಕಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆ ಸೋಮವಾರ ಮಧ್ಯಾಹ್ನ 12ಗಂಟೆಗೆ ಶಾಸಕ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ಜನರ ಪರವಾಗಿ ತುಂಗಾ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯತ್ ಮತ್ತು ವಿವಿಧ ಸಂಘಟನೆಗಳು ಭಾಗಿಯಾಗಲಿವೆ.
ತೀರ್ಥಹಳ್ಳಿ ತಾಲೂಕು ಆಡಳಿತ ಎಚ್ಚರ ಎಚ್ಚರ!
ಮಳೆ ಹೆಚ್ಚಳ ಹಾಗೂ ಅನಾಹುತ ತಡೆ ಹಿನ್ನೆಲೆ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಕುರಿತಾಗಿ ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆದಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಲ್ಲಾ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಶಾಸಕರು ಸೂಚನೆ ನೀಡಿದ್ದಾರೆ. ಮನೆ, ಕೊಟ್ಟಿಗೆ, ಇತರೆ ಹಾನಿ ಬಗ್ಗೆ ಗಮನ ವಹಿಸಬೇಕಿದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023