* ಪೋಷಕರಿಗಾಗಿ ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳ ಆಯೋಜನೆ
* ಸಹ್ಯಾದ್ರಿ ಬೆಟ್ಟಮಕ್ಕಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಸಹ್ಯಾದ್ರಿ ಪ್ರಾಥಮಿಕ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜು ಕುಶಾವತಿ, ತೀರ್ಥಹಳ್ಳಿಯಲ್ಲಿ ಪೋಷಕರ ದಿನಾಚರಣೆ ಅಂಗವಾಗಿ ಪೋಷಕರಿಗೆ ನವೆಂಬರ್ 24ನೇ ಭಾನುವಾರ ಬೆಳಿಗ್ಗೆ 10-00ಗಂಟೆಯಿಂದ ಸಹ್ಯಾದ್ರಿ ಐ.ಸಿ.ಎಸ್.ಇ. ಶಾಲಾ ಆವರಣ, ಬೆಟ್ಟಮಕ್ಕಿ, ತೀರ್ಥಹಳ್ಳಿಯಲ್ಲಿ ಪೋಷಕರಿಗಾಗಿ ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಬಾಳೇಹಳ್ಳಿ ಪ್ರಭಾಕರ್ ಇವರು ವಹಿಸಲಿದ್ದಾರೆ.ಹಿರಿಯ ಬಾಲ್ಬ್ಯಾಡ್ಮಿಂಟನ್ ಕ್ರೀಡಾಪಟು ಮತ್ತು ಜೀವವಿಮಾ ಪ್ರತಿನಿಧಿ ರೇವಣ್ಣಸ್ವಾಮಿ ಜಿ. ಉದ್ಘಾಟಸಲಿದ್ದು,ಮುಖ್ಯ ಅತಿಥಿಗಳಾಗಿ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತ್, ತೀರ್ಥಹಳ್ಳಿ ಡಿ. ನಾಗರಾಜ,ಪಟ್ಟಣ ಪಂಚಾಯತ್ ತೀರ್ಥಹಳ್ಳಿ ಸದಸ್ಯರು ಜ್ಯೋತಿ ಗಣೇಶ್ ಭಾಗವಹಿಸಲಿದ್ದಾರೆ.
ಉಪಸ್ಥಿತಿ : ಶ್ರೀ ಚಂದವಳ್ಳಿ ಸೋಮಶೇಖರ್, ಉಪಾಧ್ಯಕ್ಷರು, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ತೀರ್ಥಹಳ್ಳಿ ಶ್ರೀ ಸುಧೀರ್ ಬಿ.ಬಿ. ಹೆಗ್ಗೋಡು, ಪ್ರಧಾನ ಕಾರ್ಯದರ್ಶಿಗಳು, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ತೀರ್ಥಹಳ್ಳಿ ಶ್ರೀ ಕೆರೆಕೊಪ್ಪ ವಿರೇಂದ್ರ, ಖಜಾಂಚಿಗಳು, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ತೀರ್ಥಹಳ್ಳಿ ಶ್ರೀಮತಿ ಧನ್ಯ ಅಶ್ವಲ್, ಸಹ ಕಾರ್ಯದರ್ಶಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ತೀರ್ಥಹಳ್ಳಿ
ಅಧ್ಯಕ್ಷರು ಮತ್ತು ನಿರ್ದೇಶಕರು, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ತೀರ್ಥಹಳ್ಳಿ,
ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಬೋಧಕ ಮತ್ತು ಬೋಧಕೇತರ ವೃಂದ ಸಹ್ಯಾದ್ರಿ ಪ್ರಾ .ಮತ್ತು ಸ.ಪ.ಪೂ. ಕಾ., ಕುಶಾವತಿ-ತೀರ್ಥಹಳ್ಳಿ, ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಅಧ್ಯಕ್ಷರು ಮತ್ತು ನಿರ್ದೇಶಕರು, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಸಹ್ಯಾದ್ರಿ ಪ್ರಾ .ಮತ್ತು ಸ.ಪ.ಪೂ. ಕಾ., ಕುಶಾವತಿ-ತೀರ್ಥಹಳ್ಳಿ ಈ ಮೂಲಕ ಸ್ವಾಗತವನ್ನು ಕೋರುತ್ತಿದ್ದಾರೆ.
ಸಹ್ಯಾದ್ರಿ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ: ಸಮೂಹ ಸಂಪನ್ಮೂಲ ಕೇಂದ್ರ ( ಬಿ.ಆರ್.ಸಿ) ತೀರ್ಥಹಳ್ಳಿ, ಇಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 2024-25ನೇ ಸಾಲಿನ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸಹ್ಯಾದ್ರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅಕ್ಷಯ ಪ್ರಥಮ ಸ್ಥಾನ ಹಾಗೂ ರೇಣುಕಾ ಎನ್ ಹೆಚ್ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪ್ರಣಮ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದದವರು ಪಾಧಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.