ತೀರ್ಥಹಳ್ಳಿಯಲ್ಲಿ ಸತೀಶ್ ಶೆಟ್ಟಿ ಪಟ್ಲ ಯಕ್ಷಗಾನಕ್ಕೆ ಮನ ಸೋತ ಜನ!
– ಕೊಡಚಾದ್ರಿ ಟ್ರಸ್ಟ್ ವತಿಯಿಂದ ಅತ್ಯುತ್ತಮ ಆಯೋಜನೆ
– ಯಕ್ಷಗಾನ ಸೇವಕರಿಗೆ ಸನ್ಮಾನ: ಮಂಜುನಾಥ ಗೌಡರ ಪ್ರೇರಣಾ ಮಾತು
– 3000ಕ್ಕೂ ಹೆಚ್ಚು ಯಕ್ಷಗಾನ ಪ್ರಿಯರಿಂದ ವೀಕ್ಷಣೆ
NAMMUR EXPRESS NEWS
ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ( ರಿ) ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗ ವೃಜ ಕ್ಷೇತ್ರ ಪಾವಂಜೆ, ಇವರಿಂದ ಶುಕ್ರವಾರ ಸಂಜೆ ತೀರ್ಥಹಳ್ಳಿಯ ಸಂಸ್ಕೃತಿ ಮಂದಿರ ಆವರಣದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಹರಿ ಲೀಲಾಮೃತ ಯಕ್ಷಗಾನ ಸಾವಿರಾರು ಪ್ರೇಕ್ಷಕರ ಗಮನ ಸೆಳೆಯಿತು. ರಾಜ್ಯದಲ್ಲಿ ಅಪರೂಪದ ಕಾರ್ಯಕ್ರಮ ಇದಾಗಿದ್ದು ಯಕ್ಷಗಾನದ ವೇಳೆ ಜತೆ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಮಾಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಸಂಜೆ 6 ಗಂಟೆಗೆ ಪ್ರಾರಂಭವಾಗಿ ಮಧ್ಯ ರಾತ್ರಿವರೆಗೆ ನಡೆಯಿತು. ಪಾತ್ರಧಾರಿಗಳ ಅತ್ಯುತ್ತಮ ನಟನೆ, ಭಾಗವತಿಕೆ ಮೂಲಕ ಗಮನ ಸೆಳೆಯಿತು.
ಯಕ್ಷಗಾನದ ವೇಳೆ ಆಯೋಜಕರು ಚಹಾ, ಮಂಡಕ್ಕಿ ವ್ಯವಸ್ಥೆ ಮಾಡಿದ್ದರು.
ಯಕ್ಷಗಾನ ಸೇವಕರಿಗೆ ಸನ್ಮಾನ
ಸಹಕಾರ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡರ ನೇತೃತ್ವದಲ್ಲಿ
ಯಕ್ಷಗಾನದ ಜತೆಗೆ ಸಾವಿರಾರು ಯಕ್ಷಗಾನ ಕಲಾವಿದರಿಗೆ ಬದುಕು ನೀಡಿರುವ ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ ಎಂ.ಕೆ.ರಮೇಶಾಚಾರ್ಯ,ಬಿ. ಗಣಪತಿ, ಕೊಕ್ಕಡ್ತಿ ಕೃಷ್ಣಮೂರ್ತಿ, ಮಂಜುನಾಥ ಗೌಡ ಆಗುಂಬೆ, ತಮ್ಮ ದನಿ ಮೂಲಕ ಸಾವಿರಾರು ಕಾರ್ಯಕ್ರಮ ಯಶಸ್ವಿ ಮಾಡಿದ ಮೈಕ್ ರಮೇಶ್, ಆಗುಂಬೆ ಕಾಳಿಂಗ ಫೌಂಡೇಶನ್ ಮುಖ್ಯಸ್ಥರಾದ ಗೌರಿಶಂಕರ್ ಅವರಿಗೆ ಸನ್ಮಾನ ಮಾಡಲಾಯಿತು.
ಮಲೆನಾಡ ಗಣ್ಯರ ಆಗಮನ
ಯಕ್ಷಗಾನಕ್ಕೆ ಶಿಮೂಲ್ ಅಧ್ಯಕ್ಷರಾದ ಗುರುಶಕ್ತಿ ವಿದ್ಯಾಧರ, ಹಿರಿಯ ಸಹಕಾರಿಗಳಾದ ನಾಗರಾಜ್ ಶೆಟ್ಟಿ, ಸಹಕಾರ ನಾಯಕರಾದ ವಿಜಯದೇವ್, ಮಹಾಬಲೇಶ್ವರ ಹೆಗಡೆ, ಪ್ರಮುಖರಾದ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಅಸಾದಿ ಸೇರಿ ಅನೇಕ ನಾಯಕರು, ಮುಖಂಡರು, ಗಣ್ಯರು, ಜನಪ್ರತಿನಿಧಿಗಳು ಹಾಜರಿದ್ದರು.