ಸಿಂಚನಾ ಮುರುಗರಾಜ್ 4ನೇ ರ್ಯಾಂಕ್
– ಕುವೆಂಪು ವಿವಿ ಎಂ.ಎಸ್ಸಿ ಬಯೋ ಕೆಮಿಸ್ಟ್ರಿಯಲ್ಲಿ ಸಾಧನೆ
– ಪತ್ರಕರ್ತರಾದ ಮುರುಗರಾಜ್, ನಾಗರತ್ನ ಮುರುಗರಾಜ್ ದಂಪತಿಗಳ ಪುತ್ರಿ
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ 2022ರಲ್ಲಿ ನಡೆದ ಸ್ನಾತಕೋತ್ತರ ಬಯೋ ಕೆಮಿಸ್ಟ್ರಿ ಪದವಿ ಪರೀಕ್ಷೆಯಲ್ಲಿ ನಾಲ್ಕನೆ ರ್ಯಾಂಕ್ ಗಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಸಿಂಚನಾ ಮುರುಗರಾಜ್ ಅವರಿಗೆ 4ನೇ ರ್ಯಾಂಕ್ ಬಂದಿದೆ.
ಸಿಂಚನಾ ತೀರ್ಥಹಳ್ಳಿ ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕಿ ನಾಗರತ್ನಮುರುಗರಾಜ್ ಹಾಗೂ ಪತ್ರಕರ್ತರಾದ ಮುರುಗರಾಜ್ ಕೋಣಂದೂರು ಇವರ ಪುತ್ರಿಯಾಗಿದ್ದಾರೆ. ಇವರ ಸಾಧನೆಗೆ ವಿಶ್ವ ವಿದ್ಯಾಲಯದ ಬೋಧಕ ಸಿಬ್ಬಂದಿ, ಪೋಷಕರು, ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘ, ಸ್ನೇಹಿತರು ಶುಭಾಶಯ ಕೋರಿದ್ದಾರೆ.
ಗ್ರಾಮಾಂತರ ಶಾಲಾ ಮಕ್ಕಳಿಗೆ ರೋಟರಿ ಕ್ಲಬ್ ಸಹಾಯ ಹಸ್ತ
– ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
– ರೊ.ಭರತ್ ಕುಮಾರ್ ನೇತೃತ್ವದಲ್ಲಿ
ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಸು,ಕಡೇಗದ್ದೆ ಮತ್ತು ಖಂಡಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೊ.ಭರತ್ ಕುಮಾರ್ ಕೋಡ್ಲು, ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಮಾತನಾಡಿ ರೋಟರಿಯ ಅಂತಾರಾಷ್ಟ್ರೀಯ ಮತ್ತು ಜಿಲ್ಲಾ ಕಾರ್ಯಕ್ರಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ರೊ.ಕೆ ಟಿ ಎಸ್ ಸ್ವಾಮಿ, ಜಿಲ್ಲಾ ನಿರ್ದೇಶಕರು, ರೊ.ಚಂದ್ರಪ್ಪ, ಜೋನಲ್ ಲೆಫ್ಟಿನೆಂಟ್, ರೊ.ಮಂಜುನಾಥ್, ರೊ . ರಾಘವೇಂದ್ರ ಆಚಾರ್ಯ ನಿರ್ದೇಶಕರು , ರೋಟರಿ ಕ್ಲಬ್ ತೀರ್ಥಹಳ್ಳಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023