ಜಾತ್ರೆಗೆ ಸಿಂಗಾರಗೊಂಡ ಶ್ರೀ ರಾಮೇಶ್ವರ ದೇವಸ್ಥಾನ!
– ದೇವಸ್ಥಾನದ ಆವರಣ,ರಥಬೀದಿ ಸೇರಿದಂತೆ ಎಲ್ಲೆಡೆ ಸಂಭ್ರಮ
– ತೀರ್ಥಹಳ್ಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದು!
NAMMUR EXPRESS NEWS
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಎಳ್ಳಾಮಾವಾಸ್ಯೆ ಜಾತ್ರೆಯ ಪ್ರಯುಕ್ತ ಶ್ರೀ ದೇವಸ್ಥಾನ ಸಮುಚ್ಚಯ ಆವರಣ ಸೇರಿದಂತೆ ತೀರ್ಥಹಳ್ಳಿ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ದೇವಸ್ಥಾನದ ಆವರಣ, ರಥಬೀದಿ ಸೇರಿದಂತೆ ಪಟ್ಟಣ ಸುಣ್ಣಬಣ್ಣ ಮುಂತಾಗಿ ಸಿಂಗಾರಗೊಂಡು ಭಕ್ತರು, ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳವರೂ ಸೇರಿದಂತೆ ಆಟೋ ಟೋಪಕರಣಗಳವರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ತೀರ್ಥಹಳ್ಳಿ ಪಟ್ಟಣದಲ್ಲಿ ತುಂಗಾ ನದಿ ದಡ, ಸೇತುವೆ ಸೇರಿ ಎಲ್ಲೆಡೆ ಜಾತ್ರೆಯ ಪ್ರಯುಕ್ತ ವಿದ್ಯುತ್ ಅಲಂಕಾರ ಮಾಡಲಾಗಿದೆ.ಜಾಯಿಂಟ್ ವೀಲ್ ಸೇರಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದಿವೆ. ಜನರ ಓಡಾಟ ಹೆಚ್ಚಾಗಿದೆ. ಹಳ್ಳಿ ಹಳ್ಳಿಯಿಂದ ಜನ ಈ ಬಾರಿಯ ಜಾತ್ರೆಗೆ ಆಗಮಿಸಲಿದ್ದಾರೆ. ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ವಿಧಿ ವಿಧಾನ ಆರಂಭ: ದೇವರ ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಶುರುವಾಗಿದೆ. ಶನಿವಾರ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆಗಳು ನಡೆಯುತ್ತಿದೆ. ದೇವಸ್ಥಾನ ಅಲಂಕಾರಗೊಂಡಿದೆ. ಮಾಜಿ ಪ್ರಧಾನಿಗಳ ನಿಧನದಿಂದ ಎರಡು ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.