ದೇಶಕ್ಕೆ ಮತ್ತೊಮ್ಮೆ ಬೇಕು ಮೋದಿ!
– ಬಿಜೆಪಿ ಸಮಾವೇಶದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ
– ವಿಶ್ವ ನಾಯಕತ್ವಕ್ಕೆ ಮೋದಿ ಸಾರಥಿ: ರಾಘವೇಂದ್ರ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ಕ್ಷೇತ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜೊತೆಗೆ ನಮ್ಮ ಅಭಿವೃದ್ಧಿ ಕಾರ್ಡ್ ಪ್ರತಿ ಮನೆ ಮನೆಗೆ ಕಾರ್ಯಕರ್ತರು ತಲುಪಿಸಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಅವರ ಸಾರಥ್ಯ ಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ವಿದ್ಯಾಧಿರಾಜ ಸಭಾ ಭವನದಲ್ಲಿ ಕೇಂದ್ರ ಸರ್ಕಾರ 9ನೇ ವರ್ಷದ ಪೂರೈಸಿರುವ ಸಂದರ್ಭ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಮೋರ್ಚಾಗಳ ಸಂಯುಕ್ತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷ ಕಟ್ಟುವುದು ಶಾಸಕ, ಮಂತ್ರಿ ಹಾಗೂ ಪ್ರಧಾನಿ ಮಾಡುವುದಕಲ್ಲ. ಬಿಜೆಪಿಯಲ್ಲಿ ಒಂದು ಸಿದ್ಧಾಂತಕ್ಕಾಗಿ ಒಂದು ರಾಷ್ಟ್ರಕ್ಕಾಗಿ ಕೆಲಸ ಮಾಡುವುದು ನಮ್ಮ ಪಕ್ಷದ ಬದ್ಧತೆ ಎಂದರು.
2014 ಪೂರ್ವದಲ್ಲಿ ದೇಶದಲ್ಲಿ ಆಗಿರುವ ಪ್ರಗತಿ ಕೆಲಸಗಳು ಬೇರೆ, 2014 ನಂತರದಲ್ಲಿ ನರೇಂದ್ರ ಮೋದಿಯವರ ಕೈಗೆ ದೇಶದ ಆಡಳಿತ ಕೊಟ್ಟ ನಂತರದಲ್ಲಿ ದೇಶದಲ್ಲಿ ಆದಂತಹ ಪ್ರಗತಿ ಅಭಿವೃದ್ಧಿ ಬಹಳ ದೊಡ್ಡದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಮತ್ತೊಮ್ಮೆ ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯಾಗಿ ಮಾಡಲು ಕಂಕಣ ಬದ್ಧರಾಗುವಂತೆ ಕಾರ್ಯಕರ್ತರಿಗೆ, ಮುಖಂಡರಿಗೆ ಕರೆ ಕೊಟ್ಟರು.
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ನಡೆದಂತಹ ಚುನಾವಣೆಯಲ್ಲಿ ರಾಜ್ಯದಲ್ಲಿ ತಾತ್ಕಾಲಿಕವಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮಳೆಗಾಲದ ವಾತಾವರಣದಲ್ಲೂ ಕೂಡ ಇಷ್ಟು ದೊಡ್ಡ ಸಂಖ್ಯೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಮೋರ್ಚಾದ ಎಲ್ಲಾ ಮತದಾರ ಬಂಧುಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದೀರಿ. ಈಗಾಗಲೇ ಕ್ಷೇತ್ರದಿಂದ 2014ರ ನಂತರ ಪ್ರಧಾನ ಮಂತ್ರಿಗಳು ಈ ಜವಾಬ್ದಾರಿ ವಹಿಸಿಕೊಂಡ ಆದಮೇಲೆ ಅವರು ಇಟ್ಟಂತ ಹೆಜ್ಜೆ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಪಕ್ಷದ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ ಮಾತನಾಡಿ, ಕಳೆದ 70 ವರ್ಷಗಳಿಂದ ಸಾಧ್ಯ ಆಗದೆ ಇರುವಂತದ್ದು, ಅಭಿವೃದ್ಧಿ ಎಂದರೆ ಏನು ಎಂದು ಗೊತ್ತಿರದಷ್ಟು, ನಮ್ಮ ಪುರಾತನ ಸಂಸ್ಕೃತಿಯಲ್ಲಿ ಹೆಮ್ಮೆ ಪಡುವಂತಹ ಕಾರ್ಯಗಳು ಇವೆಲ್ಲ ಈ ಒಂಬತ್ತು ವರ್ಷದಲ್ಲಿ ಸಾಧ್ಯವಾಯಿತು ಎಂದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಬೇಗುವಳ್ಳಿ ಸತೀಶ್, ಆರ್.ಮದನ್, ಹೆದ್ದೂರು ನವೀನ್, ರಮ್ಯಾ ಅನಿಲ್, ಚಂದವಳ್ಳಿ ಸೋಮಶೇಖರ್, ಬೇಗುವಳ್ಳಿ ಕವಿರಾಜ್, ಸಾಲೆಕೊಪ್ಪ ರಾಮಚಂದ್ರ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್, ಶ್ರೀನಿವಾಸ್ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖ ಮುಖಂಡರು ಹಾಜರಿದ್ದರು.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023