ಟಾಪ್ 5 ನ್ಯೂಸ್ ತೀರ್ಥಹಳ್ಳಿ
– ಹೊದಲ ಬಳಿ ಚಿರತೆ ಕಾಟ: ರಾತ್ರಿ ಸಂಚಾರ!
– ತಳುವೆ ಬಳಿ ಗೋವಿಗೆ ವಾಹನ ಡಿಕ್ಕಿ: ಅಲ್ಲೇ ಬಿದ್ದಿರುವ ಗೋವು!
– ಕೃಷ್ಣ ಶೋಕಾಚರಣೆ: ವಾಗ್ದೇವಿ ಕಾರ್ಯಕ್ರಮ ಮುಂದಕ್ಕೆ
– ತೀರ್ಥಹಳ್ಳಿ: ತುಂಗಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
– ಕೃಷ್ಣ ಅಂತಿಮ ದರ್ಶನ ಪಡೆದ ಆರಗ, ಮಂಜುನಾಥ ಗೌಡ
* ಹೊದಲ ಬಳಿ ಚಿರತೆ ಕಾಟ: ರಾತ್ರಿ ಸಂಚಾರ!
ತೀರ್ಥಹಳ್ಳಿ ತಾಲೂಕು ಹೊದಲ ಸಮೀಪದ ಕರಿಮನೆ ಕೆರೆ ಬಳಿ ಚಿರತೆ ಮತ್ತೆ ಕಳೆದ ಕೆಲವು ದಿನಗಳಿಂದ ಪತ್ತೆಯಾಗಿದೆ. ಅಲ್ಲದೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸುತ್ತಿದೆ. ಕೆಲ ತಿಂಗಳ ಹಿಂದೆ ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಅರಣ್ಯ ಇಲಾಖೆ ಬೋನು ಇಟ್ಟು ಹಿಡಿಯಲು ಪ್ರಯತ್ನ ಮಾಡಿದ್ದರು. ಇದೀಗ ಸೋಮವಾರ ರಾತ್ರಿ ಕೆರೆ ಬಳಿಯೇ ಪತ್ತೆಯಾಗಿದೆ.
* ತಳುವೆ ಬಳಿ ಗೋವಿಗೆ ವಾಹನ ಡಿಕ್ಕಿ: ಅಲ್ಲೇ ಮಲಗಿದ ಗೋವು!
ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ವ್ಯಾಪ್ತಿಯ ತಳುವೆ ಬಳಿಯ ಕೊರಗಜ್ಜ ದೇವಸ್ಥಾನ ಸಮೀಪ ಇತ್ತೀಚಿಗೆ ಯಾವುದೋ ವಾಹನ ದನ ಒಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ಗೋವು ಅಲ್ಲೇ ಇದೆ. ಗೋ ರಕ್ಷಕರು, ಸಂಬಂಧಪಟ್ಟವರು ಗಮನಿಸಬೇಕಿದೆ. ತಾಲೂಕಿಗೆ ಒಂದು ಗೋ ಶಾಲೆ ಬೇಕು ಎಂಬ ಅಗ್ರಹ ಇನ್ನು ಈಡೇರದ ಕಾರಣ ಇಂತಹ ಗೋವುಗಳು ಬೀದಿಪಾಲಾಗಿ ಸಾಯುತ್ತವೆ. ಈ ಬಗ್ಗೆ ದನಿ ಎತ್ತುವವರು ಯಾರು ಇಲ್ಲ.
* ಡಿಸೆಂಬರ್ 13ಕ್ಕೆ ವಾಗ್ದೇವಿ ಶಾಲೆಯ ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
ತೀರ್ಥಹಳ್ಳಿ: ಮೇಲಿನ ಕುರುವಳ್ಳಿಯ ವಾಗ್ಗೇವಿ ಶಿಕ್ಷಣ ಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಮಳೆ ಅಡ್ಡಿಯಾಗಿದ್ದರೂ
ಎರಡು ದಿನಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ವಿಜೃಂಭಣೆಯಿಂದ ಜರುಗಿದೆ.
ಇದೀಗ ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ಡಿ.10 ರಂದು ನಡೆಯಬೇಕಿದ್ದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಜಿ ಸಿ. ಎಂ ಎಸ್ ಎಂ ಕೃಷ್ಣ ಅವರ ನಿಧನ, ಹಾಗೂ ರಾಜ್ಯದೆಲ್ಲೆಡೆ ಮೂರು ದಿನ ಶೋಕಾಚಾರಣೆ ಕಾರಣಕ್ಕೆ ಡಿಸೆಂಬರ್ 13ಕ್ಕೆ ಸಂಭ್ರಮ ಕಾರ್ಯಕ್ರಮವನ್ನು ಮುಂದೂಡಲು ತೀರ್ಮಾನಿಸಿದ್ದಾರೆ.
ಬೆಳ್ಳಿ ಹಬ್ಬದ ಸಂಭ್ರಮಾಚರಣೆ 3 ದಿನಗಳು ನಡೆಯಲಿದ್ದು, ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನ ಸೆಳೆಯಲಿವೆ.
* ತೀರ್ಥಹಳ್ಳಿ: ತುಂಗಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯದ 37ನೇ ಅಂತರ ಕಾಲೇಜು ಅಥೆಟಿಕ್ಸ್ ಕ್ರೀಡಾಕೂಟದಲ್ಲಿ ತುಂಗಾ ಮಹಾವಿದ್ಯಾಲಯ ಕಾಲೇಜಿನ ಜಯಸೂರ್ಯ*, ದ್ವಿತೀಯ ಬಿ.ಕಾಂ, 110 mtr hurdles ನಲ್ಲಿ ಪ್ರಥಮ ಸ್ಥಾನ ಮತ್ತು ಹೈಜಂಪ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಶ್ರಾವ್ಯ ದ್ವಿತೀಯ ಬಿ.ಕಾಂ, ಹೆಪತ್ಲಾನ್ ನಲ್ಲಿ ಪ್ರಥಮ ಸ್ಥಾನ ಮತ್ತು 100 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿನುತ್ ಡಿಸೋಜ ಪ್ರಥಮ ಬಿ.ಕಾಂ, ಡಿಸ್ಕಸ್ ಥ್ರೋ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಈ ಮೂಲಕ ಸಾಧನೆ ಮಾಡಿದ್ದಾರೆ.
* ಕೃಷ್ಣ ಅಂತಿಮ ದರ್ಶನ ಪಡೆದ ಆರಗ, ಮಂಜುನಾಥ ಗೌಡ
ತೀರ್ಥಹಳ್ಳಿ ಅಳಿಯ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಂತಿಮ ದರ್ಶವನ್ನು ತೀರ್ಥಹಳ್ಳಿ ಶಾಸಕರು, ಮಾಜಿ ಗೃಹ ಮಂತ್ರಿಗಳು ಆದ ಆರಗ ಜ್ಞಾನೇಂದ್ರ ಪಡೆದು ಅವರ ಸೇವೆಯನ್ನು ಸ್ಮರಿಸಿದರು. ಇನ್ನು ಸಹಕಾರ ನಾಯಕರಾದ ಡಾ. ಆರ್. ಎಂ. ಮಂಜುನಾಥ್ ಗೌಡ ಕೂಡ ಭಾಗವಹಿಸಿ ಅಂತಿಮ ದರ್ಶನ ಪಡೆದರು.