
ಟಾಪ್ 5 ನ್ಯೂಸ್ ತೀರ್ಥಹಳ್ಳಿ
– ತೀರ್ಥಹಳ್ಳಿ : ಎಂಎಸ್ಸಿ ಫಿಸಿಕ್ಸ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಉತ್ತಮ ಸಾಧನೆ
– ಶಿವಮೊಗ್ಗ : ಶಿವಮೊಗ್ಗದ ತಾಲೂಕು ಮಟ್ಟದ ಅತ್ಯುತ್ತಮ ಬಿ ಎಲ್ ಒ ಪ್ರಶಸ್ತಿಗೆ ಗೋಪಾಲ ಹಿಲಿಕೆರೆ ಭಾಜನ
– ಪ್ರಥಮ ರ್ಯಾಂಕ್ ಪಡೆದ ಕೋಣಂದೂರಿನ ನವ್ಯಶ್ರೀ ಹೆಚ್.ಎನ್
– ಸಾಲೂರು ಸೊಸೈಟಿಗೆ ರುದ್ರಪ್ಪ ಹೆಚ್ ಕೆ ಸಾರಥಿ
– ಜ.31 ರಿಂದ ಫೆ. 2 ವರೆಗೆ ಕ್ರಿಕೆಟ್ ಟೂರ್ನಮೆಂಟ್ ಮಿಥುನ್ ಟ್ರೋಫಿ 2025
NAMMUR EXPRESS NEWS
– ತೀರ್ಥಹಳ್ಳಿ : ಎಂ ಎಸ್ ಸಿ ಫಿಸಿಕ್ಸ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಉತ್ತಮ ಸಾಧನೆ. ತೀರ್ಥಹಳ್ಳಿ ತಾಲೂಕು ವಾಟಗಾರು ಗ್ರಾಮ ಅಂಚೆಮನೆ ನಿವಾಸಿ ಸುಮಿತ್ರಾ ಇವರ ಮಗಳು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ MSc.Physics ನಲ್ಲಿ ಪ್ರಥಮ ರ್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದು ಹಾಗೂ 2 ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಕುವೆಂಪು ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಸ್ವೀಕರಿಸಿದರು.
– ತೀರ್ಥಹಳ್ಳಿ: ತಾಲೂಕು ಮಟ್ಟದ ಅತ್ಯುತ್ತಮ ಬಿ.ಎಲ್.ಒ ಪ್ರಶಸ್ತಿಗೆ ಗೋಪಾಲ್ ಭಾಜನ
ಶಿವಮೊಗ್ಗ : ಶಿವಮೊಗ್ಗದಲ್ಲಿ ಜ.29ರಂದು ನಡೆದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಬಿ ಎಲ್ ಒ ಪ್ರಶಸ್ತಿ ಯನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಗೋಪಾಲ ಹಿಲಿಕೆರೆ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗೆ ಗೋಪಾಲ್ ಅವರು ಪಡೆದುಕೊಂಡಿರುವುದರಿಂದ ಇದೊಂದು ಹೆಮ್ಮೆಯ ಸಂಗತಿಯಾಗಿದೆ.
ಸಾಲೂರು ಸೊಸೈಟಿಗೆ ರುದ್ರಪ್ಪ ಹೆಚ್ ಕೆ ಅಧ್ಯಕ್ಷ
ಸಾಲೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು ನೂತನ ಆಡಳಿತ ಮಂಡಳಿಯ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀ ರುದ್ರಪ್ಪ ಹೆಚ್ ಕೆ ( ಬಾಬಯ್ಯ) ಮತ್ತು ಉಪಾಧ್ಯಕ್ಷರಾಗಿ ಮೋಹನ್ ಬಿ ಜಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಉಪಸ್ಥಿತರಿದ್ದರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರಿಗೆ ಶುಭ ಹಾರೈಸಿದರು.
ಪ್ರಥಮ ರ್ಯಾಂಕ್ ಪಡೆದ ಕೋಣಂದೂರಿನ ನವ್ಯಶ್ರೀ ಹೆಚ್.ಎನ್
ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ನವ್ಯಶ್ರೀ ಹೆಚ್ ಎನ್ BSC (hons) ನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರುತ್ತಾರೆ. ಕೋಣಂದೂರು ಸಮೀಪದ ಹಿತ್ತಲಸರದ ನಾಗರಾಜ್ ಮತ್ತು ನಳಿನಿ ದಂಪತಿಗಳ ಪುತ್ರಿಯಾಗಿರುವ ನವ್ಯಶ್ರೀ BSC (hons) ನಲ್ಲಿ ಪ್ರಥಮ ರ್ಯಾಂಕ್ ಗಳಿಸಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಬಾಳೆಬರೇಯಲ್ಲಿ ಫೆ.1 ರಂದು 35 ವರ್ಷಗಳ ನಂತರ ಶತ ಚಂಡಿಕಾಯಾಗ
ಶ್ರೀ ಚಂಡಿಕಾಂಬ ದೇವಸ್ಥಾನ, ಬಾಳೆಬರೇ ಶ್ರೀ ಕ್ಷೇತ್ರ ಚಂಡಿಕಾವನ. ಶತ ಚಂಡಿಕಾ ಯಾಗ 35 ವರ್ಷಗಳ ನಂತರ ನಡೆಯುತ್ತಿರುವ ಅಪರೂಪದ ವಿಶೇಷ ಯಾಗ. ಫೆ 1 ,ಶನಿವಾರ ಪ್ರಧಾನ ಹೋಮ ಹಾಗೂ ಪೂರ್ಣಹುತಿ ಕಾರ್ಯಕ್ರಮ ಮತ್ತು ವಿಶೇಷ ಅನ್ನಸಂತರ್ಪಣೆ ಸೇವಾ ಕರ್ತರು ಮತ್ತು ಕ್ಷೇತ್ರದ ಪರವಾಗಿ ಸರ್ವರಿಗೂ ಆದರದ ಅಹ್ವಾನ ನೀಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಜ. 27 ರಿಂದ ಪ್ರಾರಂಭವಾಗಿರುವ ಶತಚಂಡಿಕಾಯಾಗವು ಶೃಂಗೇರಿ ಪೀಠದ ಪರಮಾಪೂಜ್ಯ ಗುರುಗಳ ಕೃಪಾ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೂ ಇದೊಂದು ಅಪರೂಪದ ಮತ್ತು ಲೋಕ ಕಲ್ಯಾಣರ್ಥವಾಗಿ ನಡೆಯುವ ವಿಶೇಷ ಯಾಗವಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಸರ್ವರಿಗೂ ವಿಶೇಷ ಪುಣ್ಯ ಪ್ರಾಪ್ತಿ ಇದೆ. ಇದನ್ನು ನೋಡುವ, ಶ್ರವಣ ಮಾಡುವ ಭಾಗ್ಯವು ಶ್ರೀ ಕ್ಷೇತ್ರದ ಎಲ್ಲಾ ಭಕ್ತರಿಗೂ ಲಭ್ಯವಾಗಬೇಕು ಎಂಬುದು ಕ್ಷೇತ್ರದ ಹಾಗೂ ಸೇವಾ ಕರ್ತರ ಆಶಯ. ಆ ನಿಟ್ಟಿನಲ್ಲಿ ದಿನಾಂಕ 01-02-2025 ಶನಿವಾರ ನಡೆಯುವ ಪ್ರಧಾನ ಹೋಮ, ಪೂರ್ಣಹುತಿ ಕಾರ್ಯಕ್ರಮ, ವಿಶೇಷ ಅನ್ನಸಂತರ್ಪಣೆ ಹಾಗೂ ವಿಶೇಷ ಹೋಮ ಹವನ ಕಾರ್ಯಕ್ರಮಗಳಿಗೆ ತಾವುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಕೃಥಾರ್ತರಾಗಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮದರ್ಶಿಗಳು ಹಾಗೂ ಸೇವಾ ಕರ್ತರು, ಬಾಳೆ ಬರೆ ಇವರು ಕೋರಿದ್ದಾರೆ.
– ಜ. 31 ರಿಂದ ಫೆ. 2 ವರೆಗೆ ಕ್ರಿಕೆಟ್ ಟೂರ್ನಮೆಂಟ್ ಮಿಥುನ್ ಟ್ರೋಫಿ 2025
ವಿನಾಯಕ ಸ್ಪೋರ್ಟ್ಸ್ ನವರ ಆಶ್ರಯದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಮಿಥುನ್ ಮತ್ತು ದಿನೇಶ್ ಭಟ್ ಸ್ಮರಣಾರ್ಥ ದಲ್ಲಿ ಮಿಥುನ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಅನ್ನ ನಡೆಸಲಾಗುತ್ತದೆ. ಜ. 31 ರಿಂದ ಫೆಬ್ರವರಿ 2 ವರೆಗೆ ಸರ್ಕಾರಿ ಪ್ರೌಡ ಶಾಲೆ, ಕಟ್ಟೆಹಕ್ಕಲು ಇಲ್ಲಿ ನೆರವೇರಲಿದೆ. ಈ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನಗಳನ್ನು ಕೂಡ ವಿತರಣೆ ಮಾಡಲಾಗುತ್ತದೆ. ಪ್ರಥಮ ಬಹುಮಾನ 1,00,000, ದ್ವಿತೀಯ ಬಹುಮಾನ 50,000 ಹಾಗೂ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮ್ಯಾನ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ನೀಡಲಾಗುವುದು. ಸರ್ವರಿಗೂ ಆದರದ ಸ್ವಾಗತವನ್ನ ವಿನಾಯಕ ಸ್ಪೋರ್ಟ್ಸ್ ಇವರು ಕೋರಿದ್ದಾರೆ.
