ರಾಮ ಮಂಟಪದತ್ತ ತುಂಗಾ ನದಿ ನೀರು!
– ಎರಡೇ ದಿನದಲ್ಲಿ ನೀರಿನ ಪ್ರಮಾಣ ಏರಿಕೆ
– ಹೀಗೆ ಮಳೆ ಬಂದ್ರೆ ರಾಮ ಮಂಟಪ ಮುಳುಗಡೆ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹಾಗೂ ಶೃಂಗೇರಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತೀರ್ಥಹಳ್ಳಿ ತುಂಗಾ ನದಿ ಅಪಾಯದ ಹಂತದಲ್ಲಿ ಹರಿಯುತ್ತಾ ಇದೆ. ತುಂಗಾ ನದಿ ರಾಮ ಮಂಟಪದ ಹತ್ತಿರ ನೀರು ಬಂದಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿ ಅಕ್ಕಪಕ್ಕದಲ್ಲಿರುವ ಜನತೆಗೆ ತಾಲೂಕು ಆಡಳಿತ ಎಚ್ಚರಿಕೆಯನ್ನು ನೀಡಿದೆ.
ಶೃಂಗೇರಿಯಲ್ಲಿ ಕೂಡ ತುಂಗಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಾ ಇದೆ. ಶಿವಮೊಗ್ಗದಲ್ಲಿ ತುಂಗಾ ನದಿಯ ಮಂಟಪ ಅರ್ಧ ಭಾಗಕ್ಕೆ ಬಂದಿತ್ತು. ನದಿಯ ನೀರಿನ ಪ್ರಮಾಣ ಹೆಚ್ಚಾಗಿದೆ. ಭದ್ರ, ಶರಾವತಿ, ಮಾಲತಿ ನದಿ ಸೇರಿದಂತೆ ಮಲೆನಾಡಿನ ಬಹುತೇಕ ನದಿಗಳು ತುಂಬಿ ಹರಿಯುತ್ತಾ ಇದೆ. ಇನ್ನು ಹೀಗೆ ಮುಂದುವರೆದಲ್ಲಿ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟಕ್ಕೆ ಸಾಗಲಿವೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023