“ಚಕ್ರವ್ಯೂಹ” ಎಂಬ ಯಕ್ಷಗಾನ ಇಂದು ಪ್ರದರ್ಶನ!
– ತೀರ್ಥಹಳ್ಳಿ ನಟಮಿತ್ರರು ಕಲಾವಿದರಿಂದ ಪ್ರದರ್ಶನ
– ಮಹಾ ಭಾರತದ ಕಥೆಯ ಅನಾವರಣ
NAMMUR EXPRESS NEWS
ತೀರ್ಥಹಳ್ಳಿ: ಹವ್ಯಾಸಿ ಕಲಾ ಸಂಘ ನಟ ಮಿತ್ರ ಕಲಾವಿದರು ಪ್ರಸ್ತುತ ಪಡಿಸುವ ” ಚಕ್ರವ್ಯೂಹ” ಎಂಬ ಯಕ್ಷಗಾನ ಪ್ರದರ್ಶನ ಜು.23ರ ಭಾನುವಾರದಂದು ಸಂಜೆ 6:30 ಕ್ಕೆ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ.
ರಂಗಾಯಣ ಮಾಜಿ ನಿರ್ದೇಶಕರಾದ ಸಂದೇಶ್ ಜವಳಿ, ನಟ ಮಿತ್ರರು ಪ್ರಮುಖರಾದ ಮಾಹಿತಿ ನೀಡಿ, ನಿರಂತರವಾಗಿ ನಟಮಿತ್ರರು ತಂಡ ಇಲ್ಲಿಯವರೆಗೂ ಸಾಂಸ್ಕೃತಿಕ ಚಟುವಟಿಕೆ ಮಾಡಿಕೊಂಡು ಬರುತ್ತಿದೆ. ಯಕ್ಷಗಾನ ಎಂಬುದು ಪ್ರಾಚೀನ ಕಲೆ. ಸಾಹಿತ್ಯ, ಅಭಿನಯ, ನೃತ್ಯ, ವೇಷ ಭೂಷಣ ಯಕ್ಷಗಾನದಲ್ಲಿ ಪಾತ್ರವಾಗಿರಲಿದೆ. ಈ ಎಲ್ಲಾ ಕಾರಣಗಳಿಂದ ಯಕ್ಷಗಾನ ಮೂಡಿಬರುತ್ತಿದೆ ಎಂದರು.
ಮಹಾಭಾರತದ ಕಥೆಯಾಗಿರುವ ಚಕ್ರವ್ಯೂಹ ಎಂಬ ಕಥಾ ಭಾಗವನ್ನು ಬಡಗು ತಿಟ್ಟಿನ ಕಥೆಯಲ್ಲಿ ಯಕ್ಷ ಪ್ರೇಮಿಗಳಿಗೆ ಉಣ ಬಡಿಸಲಿದ್ದೇವೆ. ಈ ಕಥೆಯ ನಿರ್ದೇಶನವನ್ನು ತೀರ್ಥಹಳ್ಳಿ ತಾಲೂಕಿನ ಶೇಡ್ಡಾರ್ ನ ಶೈಲೇಶ್ ಹಾಗೂ ರೋಹಿತ್ ತೀರ್ಥಹಳ್ಳಿಯವರು ನಿರ್ದೇಶನ ಮಾಡಲಿದ್ದಾರೆ. ಇವರು ಉಡುಪಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಯಕ್ಷಗಾನ ಕಲಿತು ನಿನಾಸಂ, ದೆಹಲಿ, ವಾರಾಣಸಿ, ಮುಂಬೈ, ಗುಜರಾತ್, ಕೇರಳ ಸೇರಿ ಹಲವು ಕಡೆ ಪ್ರದರ್ಶನ ನೀಡಿದ್ದಾರೆ. ಈಗ ಶೈಲೇಶ್ ನಿರ್ದೇಶನದಲ್ಲೇ ಈ ಕಥಾ ಪ್ರಸಂಗ ಮೂಡಿ ಬರಲಿದೆ ಎಂದರು. ಸರ್ವರನ್ನು ನಟ ಮಿತ್ರರು ತಂಡ ಸ್ವಾಗತಿಸಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023