- ಕಠಿಣ ಸೈಬರ್ ಕಾನೂನು ಮಾಡಲು ಮುಂದಾದ ಕಂಪನಿ
- ಕರೋನಾ ಬಳಿಕವೂ ವರ್ಕ್ ಫ್ರಂ ಹೋಂ ಮುಂದುವರಿಕೆ!
ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿರುವುದರಿಂದ ಬಹಳಷ್ಟು ಉದ್ಯೋಗಿಗಳಿಗೆ ಆರಾಮ್ ಎನಿಸಿದ್ದರೆ, ಹಲವಾರು ಕಂಪನಿಗಳಿಗೆ ಇದು ನಡುಕ ಉಂಟುಮಾಡಿದೆ.
ಸಿಸ್ಕೋ ವರದಿ ಈ ವಿಷಯ ತಿಳಿಸಿದ್ದು, ಕಂಪನಿಯ ಆಂತರಿಕ ಭದ್ರತೆ ಮ್ತು ಸೈಬರ್ ಸೆಕ್ಯೂರಿಟಿ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ. ಭಾರತದ ಕಾಲು ಭಾಗಕ್ಕೂ ಅಧಿಕ ಕಂಪನಿಗಳಲ್ಲಿ ಸೈಬರ್ ಥ್ರೆಟ್ ಪ್ರಮಾಣ ಶೇ.25 ಅಧಿಕಗೊಂಡಿದೆ. ಮಾತ್ರವಲ್ಲ ಈ ಕಂಪನಿಗಳಿಗೆ ಸೈಬರ್ ಸೆಕ್ಯುರಿಟಿ ಸವಾಲಾಗಿ ಪರಿಣಮಿಸಿದ್ದು, ಕಂಪನಿಗಳು ಸೈಬರ್ ಸೆಕ್ಯುರಿಟಿ ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡುವಂತಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.
ಕರೊನಾ ಬಳಿಕವೂ ಭಾರತದ ಶೇ.53 ಕಂಪನಿಗಳು ಅರ್ಧಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಕ್ ಫ್ರಮ್ಹೋಮ್ನಲ್ಲೇ ಕೆಲಸ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿವೆ. ಆದರೆ ಈ ಸಂದರ್ಭ ರಿಮೋಟ್ ಆಯಕ್ಸೆಸ್? ಕೊಡಬೇಕಾದ್ದರಿಂದ ಸೈಬರ್ ಥ್ರೆಟ್ ಹೆಚ್ಚಿರಲಿದ್ದು, ಆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶೇ.77 ಕಂಪನಿಗಳು ಭವಿಷ್ಯದಲ್ಲಿ ತಮ್ಮ ಸೈಬರ್ ಸೆಕ್ಯುರಿಟಿ ಮೇಲೆ ಹೆಚ್ಚಿನ ಬಂಡವಾಳ ಹೂಡಲು ನಿರ್ಧರಿಸಿವೆ ಎಂಬ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. ನೌಕರರೇ ಕಂಪನಿಯ ಭದ್ರತೆ ಮತ್ತು ಸೆಕ್ಯೂರಿಟಿ ಉಲ್ಲಂಘನೆ ಮಾಡುವ ಸಾಧ್ಯತೆ ಇದೆ. ಇದರಿಂದ ಕಂಪನಿಗಳು ಕಠಿಣ ಕಾನೂನು ಮಾಡಲು ಮುಂದಾಗಿವೆ.