- ಕಂಪನಿಗಳಲ್ಲಿ ಇನ್ಮುಂದೆ ಆನ್ಲೈನ್ ಇಂಟರ್ವ್ಯೂ ಶುರು
- ಗ್ರಾಮೀಣ ಭಾಗದ ಉದ್ಯೋಗಾಂಕ್ಷಿಗಳಿಗೆ ಹಿನ್ನಡೆ ಸಾಧ್ಯತೆ
ನವ ದೆಹಲಿ: ಕರೋನಾ ವೈರಸ್ ಭಾರತದಲ್ಲಿ ಸುಮಾರು ಹತ್ತಾರು ಕೋಟಿಗೂ ಹೆಚ್ಚು ಉದ್ಯೋಗಕ್ಕೆ ಕುತ್ತು ತಂದಿದೆ. ವೈರಸ್ ಸೋಂಕಿನ ಅನಿಶ್ಚಿತತೆ ಮುಂದುವರೆದಿರುವುದರಿಂದ ಬಹುತೇಕ ಕಂಪನಿಗಳು ತಮ್ಮ ನೇಮಕಾತಿ ಕಾರ್ಯತಂತ್ರ ಬದಲಾಯಿಸುತ್ತಿವೆ. ಇದೀಗ ಕಂಪನಿಗಳು ಇಂಟಲಿಜೆಂಟ್ ಆಟೋಮೇಟೆಡ್ ಸಿಸ್ಟಮ್ಗಳನ್ನು ಬಳಸಲು ಆರಂಭಿಸಿದ್ದು, ರೆಸ್ಯೂಮ್ ಪರಿಶೀಲನೆ ಮತ್ತು ಸಂದರ್ಶನದ ಅನುಭವ ಬದಲಾಯಿಸಿವೆ. ನೇರ ಸಂದರ್ಶನಕ್ಕೆ ಬದಲಾಗಿ ದೂರದಿಂದಲೇ ಸಂದರ್ಶನ ನಡೆಸುವುದು ಸೇರಿದಂತೆ ಹಲವು ನೂತನ ಕಾರ್ಯತಂತ್ರಗಳನ್ನು ಕಂಪನಿಗಳು ಅನುಸರಿಸುತ್ತವೆ. ಇದು ಗ್ರಾಮೀಣ ಭಾಗದ ಉದ್ಯೋಗಾಂಕ್ಷಿಗಳಿಗೆ ಹಿನ್ನಡೆ ತರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಕಂಪನಿಗಳು ತುಂಬಾ ಸೀರಿಯಸ್ ಆಗಿ ಪರಿಗಣಿಸಿವೆ ಮತ್ತು ತಮ್ಮ ಉದ್ಯೋಗಿಗಳ ಆರೋಗ್ಯದ ಕುರಿತೂ ಹೆಚ್ಚಿನ ಕಾಳಜಿ ವಹಿಸುತ್ತಿವೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಕಾರಣದಿಂದ ಕಂಪನಿಗಳು ತಮ್ಮ ಒಟ್ಟಾರೆ ನೇಮಕ ಕಾರ್ಯತಂತ್ರವನ್ನು ವಚ್ರ್ಯುವಲ್ ವಿಧಾನಕ್ಕೆ ಬದಲಿಸಿವೆ. ಹೀಗಾಗಿ ಇನ್ಮುಂದೆ ನೇರ ಸಂದರ್ಶನಗಳು ಒಂದು ವರ್ಷಗಳ ಕಾಲ ಕಡಿಮೆಯಾಗಲಿದೆ ಎಂಬುದು ವರದಿಗಳಿಂದ ಗೊತ್ತಾಗುತ್ತದೆ. ಆದರೆ ನಗರ ಭಾಗ ಓಕೆ, ಗ್ರಾಮೀಣ ಭಾಗದ ಅಭ್ಯರ್ಥಿಗಳು ಆ ಮಟ್ಟದ ತಂತ್ರಜ್ಞಾನ, ಕೌಶಲ್ಯ, ಸ್ಥಳೀಯ ಸಮಸ್ಯೆ ಕಾರಣ ಉದ್ಯೋಗದಿಂದ ವಂಚಿತರಾಗುವ ಸಾಧ್ಯತೆಗಳು ಹೆಚ್ಚಿವೆ.
ಕರೋನಾ ಸೋಂಕು ಪೀಡಿತರು ಹೆಚ್ಚುತ್ತಿರುವುದರಿಂದ ನಾವು ಹಲವು ಸಂದರ್ಶನಗಳನ್ನು ರದ್ದುಗೊಳಿಸಿದ್ದೇವೆ. ಈ ಸಂದರ್ಶನಗಳನ್ನು ಮುಂದಿನ ಏಪ್ರಿಲ್ ಬಳಿಕ ನಡೆಸಲು ತೀರ್ಮಾನಿಸಲಾಗಿದೆ. ಕೆಲವು ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಕೆಲವು ಕಂಪನಿಗಳು ವಿಡಿಯೋ ಸಂದರ್ಶನಗಳನ್ನು ನಡೆಸುತ್ತಿವೆ. ನೇರ ಸಂದರ್ಶನದ ಬದಲಾಗಿ ನಾವು ಹೆಚ್ಚಿನ ಸಂದರ್ಶನಗಳನ್ನು ಟೆಲಿಫೆÇೀನ್ ಅಥವಾ ವಿಡಿಯೋ ಮೂಲಕ ನಡೆಸುತ್ತಿದ್ದೇವೆ ಎಂದು ಜಾಗತಿಕ ರಿಕ್ರೂಟ್ಮೆಂಟ್ ಕಂಪನಿಯಾದ ಅಂಟಾಲ್ ಇಂಟನ್ರ್ಯಾಷನಲ್ಸ್ ವಕ್ತಾರರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ರೋಗದ ಟ್ರ್ಯಾಕ್: ಕಂಪನಿಗಳು ಉದ್ಯೋಗಿಯ ಕಳೆದ ಮೂರು ತಿಂಗಳಿನ ಪ್ರವಾಸ ಇತಿಹಾಸವನ್ನು ಪರಿಶೀಲಿಸುತ್ತವೆ. ಜೊತೆಗೆ ಅಭ್ಯರ್ಥಿಯ ವೈದ್ಯಕೀಯ ಇತಿಹಾಸವನ್ನೂ ಪರಿಶೀಲನೆ ನಡೆಸುತ್ತವೆ. ಇದರೊಂದಿಗೆ, ಅಭ್ಯರ್ಥಿಗಳಿಗೆ ಯಾವುದಾದರೂ ಕಾಯಿಲೆ ಇದ್ದರೆ ಕಾಯಿಲೆಯ ಸ್ಥಿತಿಗಳನ್ನು ಕಂಪನಿಗಳು ಟ್ರ್ಯಾಕ್ ಮಾಡುತ್ತವೆ. ಕೆಲಸದ ನಿರ್ವಹಣೆಯನ್ನು ಈಗ ವರ್ಕ್ ಫ್ರಮ್ ಹೋಮ್, ವಚ್ರ್ಯುಯಲ್ ಮೀಟಿಂಗ್ ವೇದಿಕೆ ಇತ್ಯಾದಿಗಳ ಮೂಲಕ ನಡೆಸಲಾಗುತ್ತಿದೆ.