-2009ನೇ ವರ್ಷದಿಂದ ಭಾರತದಲ್ಲಿ ಪೋಲಿಯೋ ದಾಖಲಾಗದ ಪ್ರಕರಣಗಳೇ ಇಲ್ಲ.
ಭಾರತದಂತ ಭವ್ಯ ರಾಷ್ಟ್ರದಲ್ಲಿ 2009ನೇ ವರ್ಷದಿಂದ ಯಾವುದೇ ಪೋಲಿಯೋ ಪ್ರಕರಣಗಳು ದಾಖಲಾಗದೆ ಇರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಎನ್.ವಿ.ಬಿ.ಡಿ.ಸಿ.ಪಿ. ಅಧಿಕಾರಿ ಡಾ.ಭವಾನಿಶಂಕರ್ ತಿಳಿಸಿದರು.
ತಾಲೂಕಿನಲ್ಲಿ ಜ.31ರಿಂದ ಫೆ.03ರ ವರೆಗೆ ನೆಡೆಯಲಿರುವ 2020-21ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದ್ದು, 5 ವರ್ಷದೊಳಗಿನ ಮಕ್ಕಳನ್ನು ತಪ್ಪದೇ ಪೋಲಿಯೋ ಬೂತ್ಗಳಿಗೆ ಕರೆತಂದು ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನಾಗಿ ಮಾಡಲು ಸಹಕರಿಸಲು ಮನವಿ ಮಾಡಿದರು
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ128 ಬೂತ್ಗಳು ಹಾಗೂ ನಗರ ಪ್ರದೇಶಗಳಲ್ಲಿ63 ಬೂತ್ಗಳನ್ನು ನಿರ್ಮಿಸಲಾಗಿದೆ. ತಾಲೂಕಿನಲ್ಲಿ5 ವರ್ಷದೊಳಗಿನ ಒಟ್ಟು 34,867 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮಂಗಳ ತಿಳಿಸಿದರು.